Advertisement
ಮೇ 22ರಂದು ಪುರಸಭಾ ಕಚೇರಿಗೆ ತೆರಳಿ ಮನವಿ ನೀಡಿದ ನಿಯೋಗ, ಕಾಮಗಾರಿ ಮೇಲುಸ್ತುವಾರಿಗೆ ಮತ್ತು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪುರಸಭೆಯಿಂದ ಓರ್ವ ಮೇಲ್ವಿಚಾರಕರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಕಾರ್ಕಳ ಪುರಸಭೆಯು ಪುರಸಭಾ ಸದಸ್ಯರಿಗಾಗಲಿ, ಸಾರ್ವಜನಿಕರಿಗಾಗಲೀ ಯಾವುದೇ ಪೂರ್ವ ಮಾಹಿತಿ ನೀಡದೇ ಏಕಾಏಕಿ ಮನೆ ತೆರಿಗೆ, ಕಟ್ಟಡ ತೆರಿಗೆ ಹಾಗೂ ಇತರ ತೆರಿಗೆಗಳನ್ನು ನಿಯಮಬಾಹಿರವಾಗಿ ದುಪ್ಪಟ್ಟುಗೊಳಿಸಿ, ವಸೂಲಾತಿ ಮಾಡುತ್ತಿದೆ. ಇದು ಖಂಡನೀಯವೆಂದು ನಿಯೋಗ ಇದೇ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿತು. ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಸುಭಿತ್ ಎನ್.ಆರ್., ಹಾಲಿ ಸದಸ್ಯರಾದ ಶುಭದ ರಾವ್, ಅಶ³ಕ್ ಅಹಮ್ಮದ್, ಸೋಮನಾಥ, ನಳಿನ್ ಆಚಾರ್ಯ, ಪ್ರಭಾ, ಹರೀಶ್ ದೇವಾಡಿಗ, ಸೀತಾರಾಮ ದೇವಾಡಿಗ, ಮಾಜಿ ಸದಸ್ಯ ವಿವೇಕಾನಂದ ಶೆಣೈ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.