Advertisement

ವಂತಿಗೆ ಹಣ ಮೀಸಲಿಡಲು ಸ್ಲಂಜನಾಂದೋಲನ ಆಗ್ರಹ

11:40 AM Jul 19, 2022 | Team Udayavani |

ಕಲಬುರಗಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಒಟ್ಟು 1196 ಫಲಾನುಭವಿಗಳಿಗೆ ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅಡಿ ವಂತಿಗೆ ಹಣ ಮೀಸಲಿಡಬೇಕು ಎಂದು ಒತ್ತಾಯಿಸಿ ಸ್ಲಂ ಜನಾಂದೋಲನ ಜಿಲ್ಲಾ ಘಟಕದ ಮುಖಂಡರು ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

ನಗರದ ಮಹಾನಗರ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ 1447 ಮನೆಗಳ ಯೋಜನೆ ಜಾರಿಗೆ ತಂದಿದೆ. ಈ ಭಾಗದಲ್ಲಿ ಅತಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಜನಾಂಗದವರು ಹೆಚ್ಚು ಈ ಮನೆಗಳಲ್ಲಿಯೇ ವಾಸವಾಗಿದ್ದಾರೆ. ಕೋವಿಡ್‌ನಿಂದ ತತ್ತರಿಸಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಎರಡು ವರ್ಷ ಮನೆಯಲ್ಲಿ ಕುಳಿತ್ತಿದ್ದಾರೆ. ಒಂದು ದಿನ ಕೆಲಸ ಮಾಡಿದರೆ ಒಪ್ಪತ್ತಿನ ಉಪಜೀವನ ಸಾಗುತ್ತದೆ. ಇವರ ಮಕ್ಕಳ ವಿದ್ಯಾಭ್ಯಾಸ ಆರೋಗ್ಯ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿ ಆವಾಸ್‌ ಮಂಜೂರಾಗಿವುದರಿಂದ ಆರ್ಥಿಕವಾಗಿ ಹಿಂದುಳಿದ ಪಜಾ ಮನೆಗಳ ವಂತಿಕೆ ಹಣ ಕಟ್ಟುವುದು ಜೊತೆಗೆ ಮನೆ ಸಾಲ ಕಟ್ಟಿಕೊಳ್ಳುವುದ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯವರ್ತಿಗಳು ಜನಪ್ರತಿನಿಧಿಗಳು ಸೇರಿ ಸ್ಲಂ ನಲ್ಲಿ ವಾಸಿಸುವ ಪಜಾ, ಪಪಂದ ಜನರ ಹತ್ತಿರ ಸರಕಾರ ನಿಗದಿಪಡಿಸಿದ ವಂತಿಕೆ ಹಣಕ್ಕಿಂತ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.

ಸರಕಾರದ ಆದೇಶದ ಪ್ರಕಾರ ಎಸ್‌ಎಫ್‌ಸಿ ಮುಕ್ತನಿಧಿ ಅನುದಾನದಲ್ಲಿ ಎಸ್‌ಸಿಪಿ, ಟಿಎಸ್ಸಿ ಯೋಜನೆಯಲ್ಲಿ ಕೂಡಲೇ ಕ್ರಿಯಾ ಯೋಜನೆ ರೂಪಿಸಿ ಸ್ಲಂ ನಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೊದಲು ಆದ್ಯತೆ ನೀಡಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸ್ಲಂ ಜನಾಂದೋಲನ ಜಿಲ್ಲಾ ಘಟಕದ ಅಧ್ಯಕ್ಷೆ ಸುನೀತಾ ಕೊಳ್ಳೂರ, ಸಂಚಾಲಕಿ ರೇಣುಕಾ ಸರಡಗಿ, ಸ್ಲಂ ಮುಖಂಡರಾದ ಗೌರಮ್ಮ ಮಾಕಾ, ಶ್ರೀದೇವಿ ಸೂರ್ಯವಂತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next