Advertisement

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

10:09 PM Sep 19, 2020 | mahesh |

ಕಾರ್ಕಳ: ಜೈನ ಕಾಶಿಯ ಮಂಗಲಪಾದೆಯಲ್ಲಿ ಅನಾಥವಾಗಿದ್ದ ಜಿನಬಿಂಬಕ್ಕೆ ಅಪಚಾರ ಮಾಡಿದ ಪ್ರಕರಣ ಇದೀಗ ವೈರಲ್‌ ಆಗಿದೆ.

Advertisement

ಇಲ್ಲಿನ ನಿರ್ಜನ ಪ್ರದೇಶದಲ್ಲಿ 15 ಅಡಿಯಷ್ಟು ಎತ್ತರವಿರುವ ವಿಗ್ರಹ 40 ವರ್ಷಗಳ ಹಿಂದಿನದ್ದು ಎನ್ನಲಾಗಿದ್ದು ಇದರ ಮೇಲೆ ಕಿಡಿಗೇಡಿಗಳು ಹತ್ತಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ತಹಶೀಲ್ದಾರ್‌ ಮತ್ತು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ಜೈನ ಬ್ರಿಗೇಡ್‌ ಸದಸ್ಯರು ದೂರು ನೀಡಿದ್ದು, ಕೇಸು ದಾಖಲಾಗಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಬಿಂಬದ ಸುತ್ತ ಬಳಿಕ ಸ್ವತ್ಛತೆ ನಡೆಸಲಾಗಿದೆ. ಸ್ಥಳದಲ್ಲಿ ತಂತಿಬೇಲಿಯನ್ನೂ ಅಳವಡಿಸಲಾಗಿದೆ. ದಿಲ್ಲಿಯ ವಾಚ್‌ ಕಂಪೆನಿಯೊಂದರ ಮಾಲಕರು ಭಗವಾನ್‌ ಮಹಾವೀರ ಸ್ವಾಮಿಯ ವಿಗ್ರಹವನ್ನು ಕೆತ್ತಿಸಿದ್ದು, ಬಳಿಕ ಸೂಕ್ತ ಶಾಸ್ತ್ರೋಕ್ತವಾಗಿ ಇರದಿದ್ದರಿಂದ ಅದನ್ನು ತೆಗೆದುಕೊಂಡು ಹೋಗದೆ, ಬೇರೆಯದನ್ನು ಕೆತ್ತಿಸಿ ತೆಗೆದುಕೊಂಡು ಹೋಗಿದ್ದರು. ಬಳಿಕ ಈ ವಿಗ್ರಹ ಅನಾಥ ವಾಗಿತ್ತು. ಇದೀಗ ವಿಗ್ರಹಕ್ಕೆ ಅಪಚಾರ ವೆಸಗದಂತೆ ಬಂದೋಬಸ್ತ್ ಮಾಡಲಾಗಿದೆ.

ತಾತ್ಕಾಲಿಕ ಬೇಲಿ
ಪ್ರವಾಸ ನೆಪದಲ್ಲಿ ಹೊರಗಿನಿಂದ ಬರುವ ಕೆಲವು ಕಿಡಿಗೇಡಿಗಳು ಇತ್ತೀಚೆಗೆ ಜಿನಬಿಂಬಕ್ಕೆ ಹಾನಿಯುಂಟು ಮಾಡಿದ್ದರು. ಈ ಬಗ್ಗೆ ದೂರು ನೀಡಿದ್ದೆವು. ಸ್ಥಳದಲ್ಲಿ ತಾತ್ಕಾಲಿಕವಾಗಿ ಬೇಲಿ ನಿರ್ಮಿಸಿ, ರಕ್ಷಣೆ ನೀಡಲಾಗಿದೆ.
-ವಿಖ್ಯಾತ್‌ ಜೈನ್‌, ಯುವ ನ್ಯಾಯವಾದಿ, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next