Advertisement

101 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

09:28 PM Jun 30, 2022 | Team Udayavani |

ಗಾಲೆ: ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ 101 ರನ್‌ ಮುನ್ನಡೆ ಗಳಿಸಿದೆ. ಲಂಕೆಯ 212ಕ್ಕೆ ಉತ್ತರವಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 313 ರನ್‌ ಮಾಡಿದೆ.

Advertisement

ಉಸ್ಮಾನ್‌ ಖ್ವಾಜಾ ಮತ್ತು ಕ್ಯಾಮರಾನ್‌ ಗ್ರೀನ್‌ ಅವರ ಜವಾಬ್ದಾರಿಯುತ ಆಟ ಆಸೀಸ್‌ ಮೇಲುಗೈಯಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಖ್ವಾಜಾ 71, ಗ್ರೀನ್‌ 77 ರನ್‌ ಬಾರಿಸಿದರು. ಗಮನ ಸೆಳೆದ ಮತ್ತೋರ್ವ ಆಟಗಾರ ಅಲೆಕ್ಸ್‌ ಕ್ಯಾರಿ (45).

ಶ್ರೀಲಂಕಾ ಪರ ರಮೇಶ್‌ ಮೆಂಡಿಸ್‌ 4 ಮತ್ತು ಜೆಫ್ರಿ ವಾಂಡರ್ಸೆ 2 ವಿಕೆಟ್‌ ಉರುಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next