Advertisement

ಬೆಂಗಳೂರು ಕಂಪೆನಿಯಿಂದ ಸ್ಕೈ ಸ್ಟ್ರೈಕರ್‌ ಡ್ರೋನ್‌! ಭಾರತೀಯ ಸೇನೆಗೆ 100 ಡ್ರೋನ್‌ ಹಸ್ತಾಂತರ

08:38 PM Sep 04, 2021 | Team Udayavani |

ನವ ದೆಹಲಿ: ಸ್ಫೋಟಕಗಳನ್ನು ತುಂಬಿಕೊಂಡು ಶತ್ರು ಪಡೆಯ ಬಳಿ ಹೋಗಿ ಸ್ಫೋಟಗೊಳ್ಳುವಂಥ 100 “ಸ್ಕೈ ಸ್ಟ್ರೈಕರ್‌’ ಮಾದರಿಯ ಡ್ರೋನ್‌ ಗಳನ್ನು ಕೊಂಡುಕೊಳ್ಳುವ ಮಹತ್ವದ ಒಪ್ಪಂದಕ್ಕೆ ಭಾರತೀಯ ಸೇನೆ, ಬೆಂಗಳೂರಿನ ರಕ್ಷಣಾ ಪರಿಕರನ್ನು ನಿರ್ಮಿಸುವ ಆಲ್ಫಾ ಡಿ ಸೈನ್‌ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 100 ಕಿ.ಮೀ.ವರೆಗೆ ಸಾಗಿ ಶತ್ರುಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯವಿರುವ ಡ್ರೋನ್‌ಗಳು ಇವಾಗಿದ್ದು, ಇವನ್ನು ಬಾಲಾಕೋಟ್‌ ಮಾದರಿಯ ದಾಳಿಗಳ ವೇಳೆ ಬಳಸಿಕೊಳ್ಳಲು ಭಾರತೀಯ ಸೇನೆ ನಿರ್ಧರಿಸಿದೆ.

Advertisement

ಒಪ್ಪಂದಕ್ಕೆ ಸಹಿ
ಬೆಂಗಳೂರಿನ ಆಲ್ಫಾ ಡಿ ಸೈನ್‌ ಸಂಸ್ಥೆಯು, ಇಸ್ರೇಲ್‌ನ ಎಲ್ಬಿಟ್‌ ಸೆಕ್ಯುರಿಟಿ ಸಿಸ್ಟಮ್ಸ್‌ ಸಂಸ್ಥೆಯೊಂದಿಗೆ ಸೇರಿಕೊಂಡು ಈ ಡ್ರೋನ್‌ ಗಳನ್ನು ತಯಾರಿಸಲಿದೆ. 100 ಕೋಟಿ ರೂಪಾಯಿ ವೆಚ್ಚದಲ್ಲಿ 100 ಡ್ರೋನ್‌ ಗಳು ತಯಾರಾಗಲಿದ್ದು, ಈ ಕುರಿತಂತೆ ಏರ್ಪಟ್ಟಿರುವ ಒಪ್ಪಂದಕ್ಕೆ ಎರಡೂ ಕಂಪನಿಗಳು ಸೆ.1ರಂದು ಸಹಿ ಹಾಕಿವೆ.

ಇದನ್ನೂ ಓದಿ :ಬ್ರಿಟನ್‌ ರಾಣಿ ಬದುಕಿರುವಾಗಲೇ “ಅಂತ್ಯಸಂಸ್ಕಾರದ ಪ್ಲಾನ್’ ಸೋರಿಕೆ !

ಸ್ಕೈ ಸ್ಟ್ರೈಕರ್‌ ಕಾರ್ಯವೈಖರಿ
100 ಕಿ.ಮೀ. ದೂರದಲ್ಲಿರುವ ಶತ್ರು ಪಡೆಯನ್ನು ಪತ್ತೆ ಹಚ್ಚುವ ಡ್ರೋನ್‌ ಅದರ ಮಾಹಿತಿಯನ್ನು ಡ್ರೋನ್‌ ನಿಯಂತ್ರಣಾ ಮಾಡುವ ಸ್ಥಳಕ್ಕೆ ಕಳುಹಿಸಿಕೊಡುತ್ತದೆ. ನಿಯಂತ್ರಣ ಸ್ಥಳದಿಂದ ಅನುಮತಿ ಸಿಕ್ಕ ನಂತರ ದಾಳಿ ನಡೆಸಿ, ಸ್ಫೋಟಿಸುತ್ತದೆ ಎಂದು ಆಲ್ಫಾ ಡಿಸೈನ್‌ ಸಂಸ್ಥೆಯ ಸಿಎಂಡಿ ನಿವೃತ್ತ ಕರ್ನಲ್‌ ಎಚ್‌.ಎಸ್‌.ಶಂಕರ್‌ ತಿಳಿಸಿದ್ದಾರೆ. ಇದರಲ್ಲಿ 10 ಕೆಜಿ ತೂಕದವರೆಗಿನ ವಸ್ತುವನ್ನು (ಸ್ಫೋಟಕವನ್ನು) ಸಾಗಿಸಬಹುದು ಎಂದು ಎಲ್ಬಿಟ್‌ ಸಂಸ್ಥೆ ತಿಳಿಸಿದೆ.

ಡ್ರೋನ್‌ ವಿಶೇಷತೆ:
– 100 ಕಿ.ಮೀ ದೂರದವರೆಗೆ ಚಲಿಸಬಲ್ಲದು
– 5 ಕೆಜಿ ತೂಕದೊಂದಿಗೆ 2 ಗಂಟೆ, 10 ಕೆಜಿ ತೂಕದೊಂದಿಗೆ 1 ಗಂಟೆ ಕಾರ್ಯ ನಿರ್ವಹಿಸಬಲ್ಲದು
– 7 ನಿಮಿಷಗಳಲ್ಲಿ 20ಕಿಮೀ ದೂರದವರೆಗೆ ಸಂಚಾರ
– ಶಬ್ಧ ಅತಿ ಕಡಿಮೆಯಿರುವುದರಿಂದ ಶತ್ರು ಪಡೆಯ ಗಮನಕ್ಕೆ ಬಾರದು

Advertisement
Advertisement

Udayavani is now on Telegram. Click here to join our channel and stay updated with the latest news.

Next