Advertisement
ನಾವು ಸುಂದರವಾಗಿ ಕಾಣುವುದೇ ತ್ವಚೆ ಅಥವಾ ದೇಹದ ಚರ್ಮದಿಂದ. ನಮ್ಮ ಸೌಂದರ್ಯವನ್ನು ಎದ್ದು ಕಾಣುವಂತೆ ಮಾಡುವುದೇ ನಮ್ಮ ಸುಂದರವಾದ ಚರ್ಮ. ಹೀಗಾಗಿ ಯಾವಾಗಲೂ ಸುಂದರವಾದ ಚರ್ಮ ಹೊಂದಬೇಕೆಂಬುದು ಎಲ್ಲರೂ ಅಂದುಕೊಳ್ಳುವುದು ಸಾಮಾನ್ಯ ಸಂಗತಿಗಳಲ್ಲಿ ಒಂದು.
Related Articles
Advertisement
ನಮ್ಮ ದೇಹದ ಚರ್ಮದ ಯಾವುದೇ ಭಾಗದಲ್ಲಿ ತೇವಾಂಶ ಹೆಚ್ಚು ಇರದಂತೆ ನೋಡಿಕೊಳ್ಳಬೇಕು. ಆರೋಗ್ಯಕರವಾದ ಚರ್ಮವನ್ನು ಹೊಂದುವುದರ ಜೊತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚು ಮಾಡುವಂತಹ ಅಂಶಗಳನ್ನು ಮತ್ತು ಮಳೆಗಾಲದಲ್ಲಿ ತ್ವಚೆಗೆ ಯಾವುದೇ ಹಾನಿಯಾಗದಂತಹ ವಿಚಾರಗಳ ಕಡೆಗೆ ಗಮನ ಹರಿಸಿದರೆ ಒಳ್ಳೆಯದು.
ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆ ಹೆಚ್ಚಾಗಿರುತ್ತದೆ. ಅಲರ್ಜಿ ತಡೆಗಟ್ಟಲು ವಾರದಲ್ಲಿ ಎರಡು ಬಾರಿ ಸ್ಕ್ರಬ್ ಮಾಡಬೇಕು. ಒಂದು ಚಮಚ ಆಲೀವ್ ಅಥವಾ ಕೊಬ್ಬರಿ ಎಣ್ಣೆಗೆ 1 ಚಮಚ ಸಕ್ಕರೆ ಹಾಕಿ, ಮುಖ ಹಾಗೂ ತುಟಿಗೆ ಹಚ್ಚಿ ನಿಧಾನವಾಗಿ 5 ನಿಮಿಷ ಸ್ಕ್ರಬ್ ಮಾಡಿ. ಹೀಗೆ ಮಾಡಿದರೆ ತ್ವಚೆ ತುಂಬಾ ಮೃದುವಾಗುತ್ತದೆ.
ಮುಖ ಕಾಂತಿಯುತವಾಗಲು ಮುಲ್ತಾನಿ ಮಿಟ್ಟಿ ಅಥವಾ ಯಾವುದೇ ಹಣ್ಣಿನಿಂದ ತಯಾರಿಸಿದ ಫೇಸ್ ಮಾಸ್ಕ್ ಉಪಯೋಗಿಸಬಹುದು.
ಮಳೆಗಾಲದಲ್ಲಿ ಸಾಧ್ಯವಾದಷ್ಟು ರೋಗ – ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಕಡೆಗೆ ಗಮನವಿಡಿ. ಮಾಂಸಹಾರಕ್ಕಿಂತ ಹಣ್ಣು – ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಬಳಸಿಕೊಳ್ಳಿ.
ಮಳೆಗಾಲದಲ್ಲಿ ಹೆಚ್ಚು ನೀರು ಕುಡಿಯುವುದರಿಂದ ನಮ್ಮ ದೇಹದಿಂದ ವಿಷಕಾರಿ ಅಂಶಗಳು ದೂರವಾಗಿ ಸದಾ ಆರೋಗ್ಯದಿಂದ ಇರಬಹುದು. ತ್ವಚೆ ರಕ್ಷಣೆಗೂ ಹೆಚ್ಚೆಚ್ಚು ನೀರು ಕುಡಿಯುವುದು ಮುಖ್ಯ.
ದೇಹಕ್ಕೆ ನೀರಿನ ಅಂಶವನ್ನು ಒದಗಿಸುವ ಸೀಸನಲ್ ಹಣ್ಣುಗಳಾದ ನೇರಳೆ ಹಣ್ಣು, ಸೇಬು ಹಣ್ಣು, ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ದಾಳಿಂಬೆ ಹಣ್ಣು, ಚೆರ್ರಿ ಹಣ್ಣು ಮತ್ತು ಪೈನಾಪಲ್ ಹಣ್ಣುಗಳನ್ನು ಅತ್ಯಧಿಕವಾಗಿ ಸೇವನೆ ಮಾಡಿ.
ಗ್ರೀನ್ ಟೀ ಮತ್ತು ಹಾಟ್ ವೆಜಿಟೇಬಲ್ ಸೂಪ್ ಆಗಾಗ ಸೇವಿಸಿ ದೇಹದ ರೋಗ – ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ರೆಫ್ರಿಜಿರೇಟರ್ ನಲ್ಲಿಟ್ಟ ಪಾನೀಯಗಳನ್ನು ಮತ್ತು ಜ್ಯೂಸ್ ಸೇವನೆ ಮಾಡಬೇಡಿ. ಇದರಿಂದ ಎದೆಯಲ್ಲಿ ಕಫ ಕಟ್ಟುವ ಸಾಧ್ಯತೆ ಹೆಚ್ಚು.
ಮಲಗುವ ಮುನ್ನ ಮೇಕಪ್ ತೆಗೆಯಿರಿ:
ಮಲಗುವ ಮುನ್ನ ಮೇಕಪ್ ತೆಗೆದುಹಾಕುವುದು ಅತ್ಯಂತ ಅವಶ್ಯಕ. ಮೇಕಪ್ ರಾತ್ರಿ ಸಮಯದಲ್ಲಿ ಚರ್ಮಕ್ಕೆ ವ್ಯಾಪಕ ಹಾನಿಯನ್ನುಂಟು ಮಾಡುತ್ತದೆ.
*ಕಾವ್ಯಶ್ರೀ