ಬಂಟ್ವಾಳ: ರಾಷ್ಟ್ರೀಯ ಮಟ್ಟದ ಗ್ರಂಥಾಲಯಗಳಲ್ಲಿ ದ.ಕ. ಜಿಲ್ಲೆ ಮೇಲ್ಪಂಕ್ತಿಯಲ್ಲಿದೆ ಎನ್ನುವುದು ಗೌರವದ ಸಂಕೇತ. ದ.ಕ. ಜಿಲ್ಲೆಯೇ ಒಂದು ಗ್ರಂಥಾಲಯ, ಗ್ರಂಥಾಲಯಗಳನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಬಿ.ಸಿ. ರೋಡ್ ರೋಟರಿ ಭವನಲ್ಲಿ ಜರಗಿದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಬಿ.ಸಿ. ರೋಡ್, ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯ ಆಶ್ರಯದಲ್ಲಿ ಜರಗಿದ ಗ್ರಂಥಾಲಯ ಮೇಲ್ವಿಚಾರಕರಿಗೆ 3 ದಿನಗಳ ಕೌಶಲ ಅಭಿವೃದ್ಧಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಚಿತ್ರದುರ್ಗ ನಗರ ಕೇಂದ್ರದ ಮುಖ್ಯ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ, ಬೆಂಗಳೂರು ನಗರ ಕೇಂದ್ರದ ಉಪ ನಿರ್ದೇ ಶಕ ಸಿ.ಜೆ. ವೆಂಕಟೇಶ, ಜಿಲ್ಲಾ ಕೇಂದ್ರ ಉಪ ನಿರ್ದೇಶಕ ರಾಘವೇಂದ್ರ ಉಪಸ್ಥಿತರಿದ್ದರು.
ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಸವಿತಾ ಸ್ವಾಗತಿಸಿ, ಬೆಂಗಳೂರು ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಡಾ| ಸತೀಶ್ ಎಸ್. ಹೊಸಮನಿ ಪ್ರಸ್ತಾವಿಸಿದರು. ಸಹಾಯಕ ಗ್ರಂಥ ಪಾಲಕಿ ಪ್ರನಿತಾ ಪ್ರಿಯಾ ಮೊಂತೇರೋ ವಂದಿಸಿ, ಸಹಾಯಕ ಗ್ರಂಥಪಾಲಕಿ ನಮಿತಾ ಬಿ. ಕಾರ್ಯಕ್ರಮ ನಿರೂಪಿದರು.
ಹೆಚ್ಚಿನ ಆಸಕ್ತಿ ವಹಿಸಿ
ಕೌಶಲ, ನೈಪುಣ್ಯ ಹೆಚ್ಚಿಸುವ ಮೂಲಕ ಜಿಲ್ಲೆಯ ಜನರನ್ನು ಬುದ್ಧಿಜೀವಿಗಳನ್ನಾಗಿ ಮಾಡಲು ಗ್ರಂಥಾಲಯಗಳು, ಮೇಲ್ವಿಚಾರಕರು ಹೆಚ್ಚಿನ ಆಸಕ್ತಿ ವಹಿಸಬೇಕು.
-ಬಿ. ರಮಾನಾಥ ರೈ ಸಚಿವರು