Advertisement

2 ವರ್ಷದಲ್ಲಿ 5 ಚಿನ್ನ ಗೆದ್ದ ಸ್ಕೇಟಿಂಗ್‌ ಪೋರ!

11:17 AM Apr 14, 2018 | |

ವ್ಯಾಯಾಮಕ್ಕೆಂದು ಸ್ಕೇಟಿಂಗ್‌ ಅಭ್ಯಾಸ ಆರಂಭಿಸಿದ ನಾಲ್ಕು ವರ್ಷದ ಪೋರ ಕೇವಲ ಎರಡೇ ವರ್ಷದಲ್ಲಿ 5 ಚಿನ್ನದ ಪದಕ ಕೊರಳಿಗೇರಿಸಿಕೊಳ್ಳುವ ಮೂಲಕ ಕ್ರೀಡಾಲೋಕದಲ್ಲಿ ಭರವಸೆಯ ಬೆಳಕಾಗುತ್ತಿದ್ದಾನೆ. ಯುಕೆಜಿ ವಿದ್ಯಾರ್ಥಿಯೊಬ್ಬನ ಈ ಕಿರು ಅವಧಿಯ ಹಿರಿ ಸಾಧನೆ ಬೆರಗಾಗಿಸುವಂತಿದೆ.

Advertisement

ಕುಂದಾಪುರದ ಯೆರುಕೋಣೆಯ ಅರುಣ್‌ ಕುಮಾರ್‌ ಶೆಟ್ಟಿ ಮತ್ತು ಶಮಿತಾ ಎ.ಶೆಟ್ಟಿ ಅವರ ಪುತ್ರ ತಕ್ಷಕ್‌ ಎ. ಶೆಟ್ಟಿ ರಾಜ್ಯಮಟ್ಟದಲ್ಲಿ ಪದಕಗಳ ಸರಣಿ ಹಾರವಾಗಿಸುತ್ತಿದ್ದಾನೆ. 2012ರಲ್ಲಿ ಜನಿಸಿದ ತಕ್ಷಕ್‌ ಮಂಗಳೂರಿನ ಹನಿಕೋಂ ಮಾಂಟೆಸರಿ ಶಾಲೆಯ ವಿದ್ಯಾರ್ಥಿ. 1ನೇ ತರಗತಿಗೆ ಲೂರ್ಡ್ಸ್‌ ಸೆಂಟ್ರಲ್‌ ಶಾಲೆಗೆ ಸೇರ್ಪಡೆಯಾಗಿದ್ದಾನೆ.

ಐದರ ಎಳೆ ವಯಸ್ಸಿನಲ್ಲಿಯೇ ತಕ್ಷಕ್‌ಗೆ ಸ್ಕೇಟಿಂಗ್‌ನಲ್ಲಿ ಸಾಲು ಸಾಲು ಚಿನ್ನ ಸಿಕ್ಕಿದ್ದರೂ “ಇಂತಹ ಸಾಧನೆ ಮಾಡಬೇಕೆಂದು’ ಅಂದುಕೊಂಡು ಶುರು ಮಾಡಿದ್ದಲ್ಲ. ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆದ ಅರುಣ್‌ ಅವರು ಮಂಗಳೂರಿನಲ್ಲಿ ಕನಕಾ ಇನ್‌ಫ್ರಾಸ್ಟ್ರಕ್ಷರ್‌ ಸಂಸ್ಥೆ ನಡೆಸುತ್ತಿದ್ದಾರೆ. ಮಗನಿಗೆ “ವ್ಯಾಯಾಮ ಆಗಲಿ’ ಎಂದು 2016ರ ಮೇ ತಿಂಗಳಲ್ಲಿ ಮಂಗಳೂರಿನ ಹೈ ಫ್ಲೈಯರ್ಸ್‌ ಸ್ಕೇಟಿಂಗ್‌ ಕ್ಲಬ್‌ಗ ಸೇರಿಸಿದರು. ಅಲ್ಲಿ ಮೋಹನ್‌ದಾಸ್‌ ಕೆ. ಹಾಗೂ ಜಯರಾಜ್‌ ಮಾರ್ಗದರ್ಶನ ನೀಡಿದರು. ಬಾಲಕ ಸ್ಕೇಟಿಂಗ್‌ನ ಪಟ್ಟುಗಳನ್ನು ಕಲಿಯುತ್ತಾ ಬೆಳೆದ. ಅವನ ಆಸಕ್ತಿ ನೋಡಿದ ತರಬೇತಿದಾರರು ಅವನ ಕ್ರೀಡಾಸ್ಫೂರ್ತಿಗೆ ಇನ್ನಷ್ಟು ಪ್ರೋತ್ಸಾಹ, ನಿಖರ ತರಬೇತಿ ನೀಡಿ ಸ್ಪರ್ಧೆಗೆ ಅಣಿ ಮಾಡಿದರು.

ತರಬೇತಿ ಆರಂಭವಾಗಿ 6 ತಿಂಗಳಲ್ಲಿ ಪಣಂಬೂರಿನಲ್ಲಿ ನಡೆದ ಬೀಚ್‌ ಫೆಸ್ಟಿವಲ್‌ನಲ್ಲಿ ತೃತೀಯ ಸ್ಥಾನ ಪಡೆದ ತಕ್ಷಕ್‌, 2017ರ ಫೆಬ್ರವರಿಯಲ್ಲಿ ನಡೆದ ಪ್ರಸಿಡೆನ್ಸಿ ಇಂಟರ್‌ ಸ್ಕೂಲ್‌ ಕಾಂಪಿಟಿಷನ್‌ನಲ್ಲಿ ಮೊದಲ ಚಿನ್ನದ ಪದಕ ಪಡೆದ. ಅದೇ ವರ್ಷ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಒಳಾಂಗಣ ರಾಷೀóಯ ರೋಲರ್‌ ಸ್ಪೀಡ್‌ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ 2 ಕಂಚಿನ ಪದಕ ಪಡೆದ. ಆಗಸ್ಟ್‌ನಲ್ಲಿ ರೋಲರ್‌ ರಿಲೇ ಸ್ಕೇಟಿಂಗ್‌ ಫೆಡರೇಶನ್‌ ಆಫ್ ಇಂಡಿಯಾದವರು ಗೋವಾದಲ್ಲಿ ನಡೆಸಿದ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, 1 ಕಂಚಿನ ಪದಕ ಪಡೆದ. ಬಳಿಕ ಮಂಗಳೂರಿನಲ್ಲಿ ನಡೆದ ಸ್ಪೀಡ್‌ ರೋಲರ್‌ ಸ್ಕೇಟಿಂಗ್‌ನಲ್ಲಿ 2 ಚಿನ್ನದ ಪದಕ ಹಾಗೂ ಚಾಂಪಿಯನ್‌ ಟ್ರೋಫಿ ಬಾಚಿಕೊಂಡ. ನವಂಬರ್‌ನಲ್ಲಿ ಮಂಗಳೂರಿನ ಡೋರಿಸ್‌ ಸ್ಟೇಟ್ಸ್‌ ಸಿಟಿಯಲ್ಲಿ ನಡೆದ 33ನೇ ಮುಕ್ತ ರಾಜ್ಯಮಟ್ಟದ ಸ್ಪೀಡ್‌ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 1 ರಜತ, 1 ಕಂಚಿನ ಪದಕ ಪಡೆದ ತಕ್ಷಕ್‌ 2018ರ ಫೆ.24ರಂದು ಮಂಗಳೂರಿನ ನೀರುಮಾರ್ಗದಲ್ಲಿ ನಡೆದ ಪ್ರಸಿಡೆನ್ಸಿ ಇಂಟರ್‌ ಸ್ಕೂಲ್‌ ಸ್ಪರ್ಧೆಯಲ್ಲಿ ರಜತ ಪದಕ ಪಡೆದಿದ್ದಾನೆ.

“ನನಗಿಂತ ಹೆಚ್ಚಾಗಿ ಅವನ ಅಮ್ಮನ ಬೆಂಬಲ ಇದೆ. ಮಗನ ಆಸಕ್ತಿಯನ್ನು ನಾನೂ ಪೋಷಿಸುತ್ತಾ ಬಂದಿದ್ದೇನೆ. ರಾಜ್ಯಮಟ್ಟದಲ್ಲಿ ವಿಜಯಿಯಾದರೂ 8 ವರ್ಷ ಪ್ರಾಯ ಆಗುವ ತನಕ ಆತನಿಗೆ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಆತನನ್ನು ರಾಷ್ಟ್ರಮಟ್ಟದ ಆಟಗಾರನಾಗಿಸಬೇಕು ಎಂಬ ಹಂಬಲ ಇದೆ’

Advertisement

 ಅರುಣ್‌ ಶೆಟ್ಟಿ, ತಕ್ಷಕ್‌ನ ತಂದೆ

 ಲಕ್ಷ್ಮೀ  ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next