Advertisement

ಆರು ವರ್ಷಗಳ ಬಳಿಕ “ಇಂಡೋ –ಪಾಕ್‌ ಎಕ್ಸ್‌ಪ್ರೆಸ್‌’ಜತೆಯಾಟ

10:42 PM Mar 02, 2021 | Team Udayavani |

ಹೊಸದಿಲ್ಲಿ: “ಇಂಡೋ-ಪಾಕ್‌ ಎಕ್ಸ್‌ಪ್ರೆಸ್‌’ ಖ್ಯಾತಿಯ ರೋಹನ್‌ ಬೋಪಣ್ಣ ಮತ್ತು ಐಸಮ್‌ ಉಲ್‌ ಹಕ್‌ ಖುರೇಶಿ 6 ವರ್ಷಗಳ ಬಳಿಕ ಜತೆಯಾಗಿ ಟೆನಿಸ್‌ ಅಂಕಣಕ್ಕೆ ಇಳಿಯಲಿದ್ದಾರೆ. ಮಾ. 15ರಿಂದ ಮೆಕ್ಸಿಕೋದಲ್ಲಿ ಆರಂಭವಾಗಲಿರುವ “ಅಕಪೊಲ್ಕೊ ಎಟಿಪಿ 500 ಟೆನಿಸ್‌ ಟೂರ್ನಿ’ಯಲ್ಲಿ ಇವರು ಪುರುಷರ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

Advertisement

2014ರಷ್ಟು ಹಿಂದೆ ಶೆಂಜೆನ್‌ನಲ್ಲಿ ನಡೆದ ಎಟಿಪಿ 250 ಪಂದ್ಯಾವಳಿಯಲ್ಲಿ ಬೋಪಣ್ಣ-ಖುರೇಶಿ ಕೊನೆಯ ಸಲ ಒಟ್ಟಿಗೇ ಆಡಿದ್ದರು. 2010ರ ಯುಎಸ್‌ ಓಪನ್‌ ಫೈನಲ್‌ ತಲುಪಿದ್ದು ಈ ಜೋಡಿಯ ಅಮೋಘ ಸಾಧನೆಯಾಗಿದೆ. ಅಂದು ಇವರು ಗ್ರೇಟ್‌ ಬ್ರಿಯಾನ್‌ ಬ್ರದರ್ಗೆ ಶರಣಾಗಿದ್ದರು. ಅದೇ ವರ್ಷ ಬೋಪಣ್ಣ ಡಬಲ್ಸ್‌ನಲ್ಲಿ ವಿಶ್ವದ ನಂ.3 ಟೆನಿಸಿಗನಾಗಿ ಬಹಳ ಎತ್ತರ ಏರಿದ್ದರು.

ಒಲಿಂಪಿಕ್ಸ್‌ಗಾಗಿ ಬೇರ್ಪಟ್ಟರು
2012ರಲ್ಲಿ ಬೋಪಣ್ಣ-ಖುರೇಶಿ ಜೋಡಿ ಬೇರ್ಪಟ್ಟಿತು. ಅಂದು ಬೋಪಣ್ಣ ಅವರ ಜತೆಗಾರನಾಗಿ ಕಾಣಿಸಿಕೊಂಡವರು ಭಾರತದವರೇ ಆದ ಮಹೇಶ್‌ ಭೂಪತಿ. ಲಂಡನ್‌ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುವುದು ಇವರ ಉದ್ದೇಶವಾಗಿತ್ತು. 2014ರಲ್ಲಿ ಮತ್ತೆ ಬೋಪಣ್ಣ-ಖುರೇಶಿ ಜತೆಯಾದರು.

ಈಗ ಇಬ್ಬರಿಗೂ 40 ವರ್ಷ. ಸದ್ಯ ಮೆಕ್ಸಿಕೊ ಪಂದ್ಯಾವಳಿಯಲ್ಲಿ ಮಾತ್ರ ಇವರು ಜತೆಯಾಗಿ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next