Advertisement

Jawan; ಶಾರುಖ್ ಚಿತ್ರಕ್ಕೆ ಆರು ಮಂದಿ ಸ್ಟಂಟ್ ಮಾಸ್ಟರ್ಸ್

03:51 PM Aug 29, 2023 | Team Udayavani |

ಶಾರುಖ್‌ ಖಾನ್‌ ಅಭಿನಯದ “ಜವಾನ್‌’ ಚಿತ್ರ ಸೆ.07ಕ್ಕೆ ತೆರೆಕಾಣುತ್ತಿದೆ. ಈ ಮಧ್ಯೆ, ಜಗತ್ತಿನ ಆರು ಅತ್ಯುತ್ತಮ ಮತ್ತು ಜನಪ್ರಿಯ ನಿರ್ದೇಶಕರು ಸಾಹಸ ಸಂಯೋಜನೆ ಮಾಡಿದ್ದು, ಚಿತ್ರದ ಸ್ಟಂಟ್ಸ್‌ ಮೇಲಿನ ನಿರೀಕ್ಷೆ ಹೆಚ್ಚಿದೆ.

Advertisement

ಅಂತಾರಾಷ್ಟ್ರೀಯ ಮಟ್ಟದ ಸಾಹಸ ನಿರ್ದೇಶಕರಾದ ಸ್ಟೈರೋ ರಾಝಾಟೋಸ್‌, ಯಾನಿಕ್‌ ಬೆನ್‌, ಕ್ರೇಗ್‌ ಮೆಕ್ರೆ, ಕೆಚಾ ಕೆಂಪಾಕ್ಡಿ, ಸುನೀಲ್‌ ರಾಡ್ರಿಗಸ್ ಮತ್ತು ಅನಲ್‌ ಅರಸ್‌ ಅವರು “ಜವಾನ್‌’ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ.

ಈ ಚಿತ್ರದಲ್ಲಿ ಫೈಟ್‌, ಚೇಸ್‌ ಸೇರಿದಂತೆ ವಿಭಿನ್ನ ರೀತಿಯ ಸಾಹಸ ದೃಶ್ಯಗಳಿದ್ದು, ಆ ಪ್ರಕಾರದಲ್ಲಿ ಪರಿಣಿತಿ ಹೊಂದಿರುವ ಒಬ್ಬೊಬ್ಬ ಸಾಹಸ ನಿರ್ದೇಶಕರು ಈ ಚಿತ್ರಕ್ಕೆ ಕೆಲಸ ಮಾಡಿರುವುದು ವಿಶೇಷ.

“ಜವಾನ್‌’ ಚಿತ್ರವನ್ನು ರೆಡ್‌ ಚಿಲ್ಲೀಸ್‌ ಎಂಟರ್ಟೆನ್ಮೆಂಟ್‌ ನಡಿ ಗೌರಿ ಖಾನ್‌ ನಿರ್ಮಿಸಿದರೆ, ಗೌರವ್‌ ವರ್ಮ ಸಹ ನಿರ್ಮಾಪಕರಾಗಿದ್ದಾರೆ. ಅಟ್ಲಿ ನಿರ್ದೇಶಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next