Advertisement

ಆರು ಆರು ಈ ಆರು

03:54 PM Mar 06, 2018 | |

ಈಗಿನ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬಿಟ್ಟಿರುವುದು ತುಂಬಾ ಕಷ್ಟ. ಪರೀಕ್ಷೆ ಹತ್ತಿರದಲ್ಲಿದ್ದರಂತೂ ಪಾಲಕರು ತಮ್ಮ ಮಕ್ಕಳನ್ನು ಅದರಿಂದ ದೂರ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಆಗ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಇನ್ನಷ್ಟು ಹತ್ತಿರವಾಗುವುದು ವಿಪರ್ಯಾಸ. ಈ ತಾಪತ್ರಯಕ್ಕೆಲ್ಲಾ ಇಲ್ಲಿದೆ ಉತ್ತರ. ಸ್ಮಾರ್ಟ್‌ಫೋನನ್ನು ಕಲಿಕೆಗೆ ಸಹಾಯವಾಗುವಂತೆ ಬಳಸಿಕೊಳ್ಳುವಂತಾದರೆ ಎಷ್ಟು ಚೆನ್ನ ಅಲ್ಲವೆ? ಪರೀಕ್ಷಾ ಕಾಲದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವ 6 ಆಂಡ್ರಾಯ್ಡ ಉಚಿತ ಆ್ಯಪ್‌ಗ್ಳು ಇಲ್ಲಿವೆ… 

Advertisement

1. ಕೀಪ್‌ ಫೋಕಸ್‌ ಆ್ಯಪ್‌: ಓದಲು ಕುಳಿತಾಗ ಆಗಾಗ ವಾಟ್ಸಾಪ್‌, ಎಫ್ಬಿ, ಇನ್‌ಸ್ಟಾಗ್ರಾಂ ಚೆಕ್‌ ಮಾಡೋಣ ಅನ್ನಿಸುತ್ತೆ. ಗಂಟೆಗೊಮ್ಮೆ ಆ ಕಡೆ ಕಣ್ಣು ಹೋದರೆ ಓದಿನ ಕಡೆಗೆ ಗಮನ ಬರುವುದಿಲ್ಲ. ಹೀಗೆ ನಿಮ್ಮ ಗಮನ ಬೇರೆ ಕಡೆಗೆ ಹರಿಯುವುದನ್ನು ತಡೆಯಲು “ಕೀಪ್‌ ಫೋಕಸ್‌’ ಎಂಬ ಆ್ಯಪ್‌ ಇದೆ. ಆ ಆ್ಯಪ್‌ ಕೆಲವು ಸೋಶಿಯಲ್‌ ಮೀಡಿಯಾ ಸೈಟ್‌ಗಳನ್ನು, ಕೆಲ ಕಾಲ ಬ್ಲಾಕ್‌ ಮಾಡಬಲ್ಲದು. ಈ ಆ್ಯಪ್‌ ಡೌನ್‌ಲೋಡ್‌ ಮಾಡಿ, ಯಾವ್ಯಾವ ಸೋಶಿಯಲ್‌ ಮೀಡಿಯಾ ಸೈಟ್‌ಗಳನ್ನು ಎಷ್ಟು ಗಂಟೆಗಳ ಕಾಲ ಬ್ಲಾಕ್‌ ಮಾಡಬೇಕು ಅಂತ ನೀವೇ ಸೆಟ್‌ ಮಾಡಬಹುದು. 

2. ಮ್ಯಾಥ್ಸ್ ಅಲಾರಾಂ ಕ್ಲಾಕ್‌: ಕೆಲವರಿಗೆ ಗಣಿತದ ಕ್ಲಾಸ್‌ನಲ್ಲಿ ಗಡದ್ದಾಗಿ ನಿದ್ದೆ ಬರುತ್ತೆ. ಇನ್ನು ಕೆಲವರಿಗೆ ಮ್ಯಾಥ್ಸ್ ಅಂದರೆ ನಿದ್ದೆಯೇ ಹಾರಿ ಹೋಗುತ್ತದೆ. ಈ ಮ್ಯಾಥ್ಸ್ ಅಲಾರಾಂ ಕ್ಲಾಕ್‌ ಆ್ಯಪ್‌ ಕೂಡ ನಿದ್ದೆಯಿಂದ ನಿಮ್ಮನ್ನು ಎಚ್ಚರಿಸುವ ಆ್ಯಪ್‌. ಬೆಳಗ್ಗೆ ಅಲಾರಾಂನ ಕಿವಿ ಹಿಂಡಿ, ತಲೆ ಮೇಲೆ ಕುಟ್ಟಿ ಮತ್ತೆ ಮಲಗುವ ಕುಂಭಕರ್ಣರಿಗೆ ಈ ಆ್ಯಪ್‌ ತುಂಬಾ ಬೆಸ್ಟ್‌. ಯಾಕೆಂದರೆ, ಈ ಆ್ಯಪ್‌ನಲ್ಲಿ ಅಲಾರಾಂ ಸೆಟ್‌ ಮಾಡಿದರೆ, ಅದನ್ನು ಆಫ್ ಮಾಡುವ ಮುನ್ನ ನೀವು ಒಂದು ಗಣಿತದ ಸಮಸ್ಯೆಯನ್ನು ಬಿಡಿಸಬೇಕು. ಇಲ್ಲದಿದ್ದರೆ ಅಲಾರಾಂ ಕೂಗುತ್ತಲೇ ಇರುತ್ತದೆ. ಗಣಿತದ ಲೆಕ್ಕ ಬಿಡಿಸಿ, ಅಲಾರಾಂ ಆಫ್ ಆಗುವ ಮುನ್ನ ನಿದ್ದೆ ಹಾರಿ ಹೋಗಿರುವುದರಿಂದ ನೀವು ಎದ್ದೇ ಏಳುತ್ತೀರಿ.  

3. ರಿಯಲ್‌ಕ್ಯಾಲ್ಕ್ ಸೈಂಟಿಫಿಕ್‌ ಕ್ಯಾಲ್ಕುಲೇಟರ್‌: ಈ ಆ್ಯಪ್‌ ಸೈಂಟಿಫಿಕ್‌ ಕ್ಯಾಲ್ಕುಲೇಟರ್‌ನಂತೆ ಕೆಲಸ ಮಾಡುತ್ತದೆ. ಕ್ಯಾಲ್ಕುಲೇಟರ್‌ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರೆ ಈ ಆ್ಯಪ್‌ ಬಳಕೆಯಾಗುತ್ತದೆ. ಗಣಿತದ ಮತ್ತು ವಿಜ್ಞಾನದ ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆ ಹರಿಸಲು ಈ ಆ್ಯಪ್‌ ಸಹಕಾರಿ. 

4. ಟೈಮ್‌ಟೇಬಲ್‌: ಕೆಲವೊಮ್ಮೆ ಎಕ್ಸಾಂ ಟೈಮ್‌ಟೇಬಲ್ಲೇ ಮರೆತು ಹೋಗಿ ಫ‌ಜೀತಿಯಾಗುತ್ತದೆ. ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಪರೀಕ್ಷಾ ವೇಳಾಪಟ್ಟಿ, ಪರೀಕ್ಷೆಗೆ ಓದೋಕೆ ಅಂತ ನೀವು ಮಾಡಿಕೊಂಡಿರೋ ವೇಳಾಪಟ್ಟಿಗಳನ್ನು ಒಮ್ಮೆ ಫೀಡ್‌ ಮಾಡಿದರೆ ಸಾಕು. ನೀವು ಪರೀಕ್ಷೆ ಬರೆಯುವಾಗ, ಓದಿಕೊಳ್ಳುವಾಗ ಮೊಬೈಲ್‌ ಮ್ಯೂಟ್‌ ಆಗುವಂತೆ ಮಾಡುತ್ತದೆ ಈ ಆ್ಯಪ್‌!

Advertisement

5. ಡಿಕ್ಷನರಿ.ಕಾಂ: ಕೆಲವರಿಗೆ ಇಂಗ್ಲಿಷ್‌ ಕಷ್ಟ ಎಂಬ ಭಾವನೆಯಿದೆ. ಅಂಥವರು ದಪ್ಪ ದಪ್ಪ ಡಿಕ್ಷನರಿ ಓದಬೇಕು ಅಂತೇನಿಲ್ಲ. ಮೊಬೈಲ್‌ನಲ್ಲಿ ಈ ಆ್ಯಪ್‌ ಡೈನ್‌ಲೋಡ್‌ ಮಾಡಿಕೊಂಡರಾಯ್ತು. ಡಿಕ್ಷನರಿ. ಕಾಂನಲ್ಲಿ 2 ಲಕ್ಷಕ್ಕೂ ಹೆಚ್ಚು ಇಂಗ್ಲಿಷ್‌ ಪದಗಳಿಗೆ ಅರ್ಥ ಸಿಗುತ್ತದೆ. ಅಷ್ಟೇ ಅಲ್ಲದೆ, ಆ ಪದ ಹೇಗೆ ಹುಟ್ಟಿಕೊಂಡಿತು? ಆ ಪದದ ಇತಿಹಾಸವೇನು? ಅದರ ಸಮಾನಾರ್ಥಕ ಪದ, ವಿರುದ್ಧಾರ್ಥಕ ಪದಗಳು ಕೂಡ ಲಭ್ಯ. 

6. ಮೈಸ್ಕ್ರಿಪ್ಟ್  ಸ್ಮಾರ್ಟ್‌ ನೋಟ್‌: ಓದಲು ಕುಳಿತಾಗ ಕೆಲವು ಅಂಶಗಳನ್ನು ನೋಟ್ಸ್‌ ಮಾಡಿಕೊಳ್ಳಬೇಕಾಗುತ್ತದೆ. ಕೆಲವರಿಗೆ ತಮ್ಮ ಹ್ಯಾಂಡ್‌ರೈಟಿಂಗ್‌ನಲ್ಲಿ ಬರೆದಿದ್ದನ್ನು ಓದಿದರೆ ಅದು ಚೆನ್ನಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಅಂಥವರು ಮೈ ಸ್ಕ್ರಿಪ್ಟ್ ಸ್ಮಾರ್ಟ್‌ನೋಟ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಬಹುದು. ನಿಮ್ಮ ಹಸ್ತಾಕ್ಷರವನ್ನು ಅರ್ಥ ಮಾಡಿಕೊಳ್ಳುವ ಈ ಆ್ಯಪ್‌ ಅದನ್ನು ಬೇಕಾದರೆ ಟೆಕ್ಸ್ಟ್ ಡಾಕ್ಯುಮೆಂಟ್‌ ಫಾಮ್ಯಾಟ್‌ ಆಗಿ ಬದಲಾಯಿಸುತ್ತದೆ.

ಅಂದರೆ, ನೀವು ಬರೆದ ನೋಟ್ಸ್‌ಗಳಲ್ಲಿ ಅಕ್ಷರ, ಪದ, ಪ್ಯಾರಾಗಳನ್ನು ಕಟ್‌, ಕಾಪಿ, ಪೇಸ್ಟ್‌ ಕೂಡ ಮಾಡಬಹುದು. ಬರೆದಿದ್ದನ್ನು ಮತ್ತೆ ಅಳಿಸಿ ಪುನಃ ಬರೆಯಬಹುದುದೊಡ್ಡ ಪ್ಯಾರಾದ ಮಧ್ಯದಲ್ಲಿರುವ ಪದಗಳನ್ನು ಹುಡುಕುವುದೂ ಇಲ್ಲಿ ಬಹಳ ಸುಲಭ. ನೋಟ್ಸ್‌ನ ಮಧ್ಯೆ ಚಿತ್ರಗಳನ್ನು ಸೇರಿಸುವ,  ಪಿಡಿಎಫ್ ಆಗಿ ಬದಲಾಯಿಸಲೂ ಅವಕಾಶವಿದೆ. ಬರೆಯಲು ಬೆರಳುಗಳನ್ನು ಬಳಸಬಹುದಾದರೂ ಸ್ಟೈಲಸ್‌ ಉಪಕರಣವಿದ್ದರೆ ಒಳ್ಳೆಯದು. 

Advertisement

Udayavani is now on Telegram. Click here to join our channel and stay updated with the latest news.

Next