Advertisement

ದಾವಣಗೆರೆಯಲ್ಲಿ ಒಂದೇ ದಿನ ಆರು ಜನರಿಗೆ ಕೊವಿಡ್-19 ಸೋಂಕು ದೃಢ

03:10 PM May 01, 2020 | keerthan |

ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ ಆರು ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಒಂದೇ ಕುಟುಂಬದ ಐವರಿಗೆ ಕೋವಿಡ್-19 ಸೋಂಕು ಪಾಸಿಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಪಷ್ಟಪಡಿಸಿದ್ದಾರೆ.

Advertisement

ಸೋಂಕಿತ ಸಂಖ್ಯೆ 556ರ ವೃದ್ಧನಿಂದ ಮೂರು ಸೊಸೆ, ಮಗ ಮತ್ತು ಒಂದು ವರ್ಷದ ಮೊಮ್ಮಗನಿಗೆ ಕೋವಿಡ್-19 ಸೋಂಕು ತಾಗಿರುವುದು ಖಚಿತವಾಗಿದೆ.

. ಸೋಂಕಿತ ಸಂಖ್ಯೆ 534 (ಸ್ಟಾಫ್ ನರ್ಸ್) ರಿಂದ  ಮಗನಿಗೂ ಸೋಂಕು ತಾಗಿದೆ ಎಂದು ವರದಿಯಾಗಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ ಆರು ಪ್ರಕರಣಗಳು ದೃಢವಾಗಿದ್ದು, ಜನತೆಯ ಆತಂಕಕ್ಕೆ ಕಾರಣವಾಗಿದೆ.

ಕಳೆದ ಮೂರು ದಿನಗಳಲ್ಲಿ ಎಂಟು ಮಂದಿಗೆ ಸೋಂಕು ತಾಗಿದ್ದು, ಎರಡು ಕುಟುಂಬಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next