Advertisement

ನಾಲ್ಕು ಮಕ್ಕಳ ಸಹಿತ ಒಂದೇ ಕುಟುಂಬದ ಆರು ಮಂದಿಯಿಂದ ವಿಷ ಸೇವನೆ

11:50 AM May 30, 2018 | Team Udayavani |

ಮುಜಫ‌ರನಗರ, ಉತ್ತರ ಪ್ರದೇಶ : ನಾಲ್ವರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ವಿಷ ಸೇವಿಸಿದ ಘಟನೆ ಜಿಲ್ಲೆಯ  ನಾನ್‌ಹೀರಾ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ವಿಷ ಸೇವಿಸಿದವರನ್ನು  ಮನೋಜ್‌ ಕುಮಾರ್‌, ಅವರ ಪತ್ನಿ ಸಂಗೀತಾ ಮತ್ತು ಅವರ ನಾಲ್ವರು ಮಕ್ಕಳು ಎಂದು ಗುರುತಿಸಲಾಗಿದೆ.

ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಎಲ್ಲರನ್ನೂ ಜಿಲ್ಲಾ ಅಸ್ಪತ್ರೆಗೆ ಒಡನೆಯೇ ಒಯ್ಯಲಾಯಿತು. ಅವರ ಸ್ಥಿತಿ ಚಿಂತಾಜನಕವಿದೆ ಎಂದು ತಿಳಿದು ಬಂದಿದೆ. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next