ಹೈದರಾಬಾದ್: ಆರು ಮಂದಿ ನಕ್ಸಲೀಯರು ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿರುವ ಘಟನೆ ಬುಧವಾರ(ಜೂನ್ 16) ನಸುಕಿನ ವೇಳೆ ನಡೆದಿರುವುದಾಗಿ ಆಂಧ್ರಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ
ವಿಶಾಖಪಟ್ಟಣಂ ಜಿಲ್ಲೆಯ ತೀಗಲಾಮೆಟ್ಟ ಅರಣ್ಯಪ್ರದೇಶದಲ್ಲಿ ಸಿಪಿಐ(ಮಾವೋವಾದಿ) ಮತ್ತು ಗ್ರೇಹೌಂಡ್ಸ್ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿರುವುದಾಗಿ ವಿಶಾಖ ಗ್ರಾಮೀಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಕೃಷ್ಣ ರಾವ್ ಅವರು ತಿಳಿಸಿದ್ದಾರೆ.
ಎನ್ ಕೌಂಟರ್ ನಲ್ಲಿ ಮಹಿಳೆ ಸೇರಿದಂತೆ ಆರು ಮಂದಿ ನಕ್ಸಲೀಯರ ಶವ ಪತ್ತೆಯಾಗಿದ್ದು, ಎ.ಕೆ.47, ಎಸ್ ಎಲ್ ಆರ್, ಒಂದು ಕಾರ್ಬೈನ್ ಮತ್ತು ಮೂರು 303 ರೈಫಲ್ಸ್ ಅನ್ನು ಘಟನಾ ಸ್ಥಳದಲ್ಲಿ ವಶಪಡಿಸಿಕೊಂಡಿರುವುದಾಗಿ ರಾವ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಯಾವುದೇ ಪೊಲೀಸರು ಸಾವನ್ನಪ್ಪಿರುವ ಘಟನೆ ನಡೆದಿಲ್ಲ. ಎನ್ ಕೌಂಟರ್ ನಡೆದ ಘಟನೆ ಬಗ್ಗೆ ಬುಧವಾರ (ಜೂನ್ 16) ಬೆಳಗ್ಗೆ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ ಎಂದು ವರದಿ ತಿಳಿಸಿದೆ.