Advertisement
ಹುಬ್ಬಳ್ಳಿ: ಅವಳಿನಗರದಲ್ಲಿನ ಅಕ್ರಮ-ಅನಧಿಕೃತ ಲೇಔಟ್‌ಗಳ ಸಕ್ರಮಕ್ಕೆ 6 ತಿಂಗಳ ಕಾಲಾವಕಾಶ ನೀಡಲು ನಿರ್ಧರಿಸಲಾಗಿದ್ದು,ಅದಕ್ಕೂ ಸ್ಪಂದಿಸದಿದ್ದರೆ ಲೇಔಟ್‌ಗಳವರ ವಿರುದ್ಧ ಎಫ್ ಐಆರ್ ದಾಖಲು ಮಾಡುವ ನಿಟ್ಟಿನಲ್ಲಿ ಹುಡಾ ಗಂಭೀರ ಚಿಂತನೆ ನಡೆಸಿದೆ.
Related Articles
Advertisement
ಬಡಾವಣೆ ನಿರ್ಮಾಣ ಮಾಡುವವರ ಲಾಭದಾಸೆಗೆ ಅಕ್ರಮ-ಅನಧಿಕೃತ ಬಡಾವಣೆಗಳು ತಲೆ ಎತ್ತುತ್ತಿವೆ. ಒಂದು ಬಡಾವಣೆಗೆ ನಿಯಮದಂತೆ ಬಿಡಬೇಕಾದ ಸಾರ್ವಜನಿಕ ಬಳಕೆ ಇನ್ನಿತರ ಜಾಗಗಳನ್ನು ಬಿಡದೆ ಆ ಜಾಗಗಳನ್ನು ಸಹ ನಿವೇಶನಗಳಾಗಿಸಿ ಮಾರಾಟ ಮಾಡಿದರೆ ಹೆಚ್ಚಿನ ಹಣ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಕೆಲವರು ಇಂತಹ ಕಾರ್ಯಕ್ಕೆ ಮುಂದಾಗುತ್ತಾರೆ.
ಲೇಔಟ್ ನಿರ್ಮಾಣ ಮಾಡಿದವರು ನಿವೇಶನಗಳನ್ನು ಮಾರಾಟ ಮಾಡಿ ತಮ್ಮ ವ್ಯವಹಾರ ಮುಗಿಯಿತು ಎಂದು ಜಾಗ ಖಾಲಿ ಮಾಡುತ್ತಾರೆ. ನಂತರ ಫಜೀತಿ ಪಡುವವರು ಮಾತ್ರ ವಾಸಿಸುವ ನಿವಾಸಿಗಳು. ಅಕ್ರಮ-ಅನಧಿಕೃತ ಬಡಾವಣೆಗಳು ಬೆಳೆದಂತೆ ಅವುಗಳಿಗೆ ಮೂಲಸೌಕರ್ಯ ಒದಗಿಸುವುದು ಸಮಸ್ಯೆಯಾದರೆ, ನಿಯಮಗಳ ಪಾಲನೆ ಇಲ್ಲದೆಯೇ ಬಡಾವಣೆಗಳು ಬೆಳೆಯುತ್ತವೆ ಎಂಬುದು ಮತ್ತೂಂದು ಸಮಸ್ಯೆಯಾಗಿದೆ.