Advertisement

ಆರಡಿ ಕಟೌಟ್‌ ಆದ್ರೇನು, ನಟನೆ ಚೆನ್ನಾಗಿ ಮಾಡಬೇಕು

12:03 PM May 29, 2018 | |

ಅಮರ್‌ – ಕನ್ನಡ ಚಿತ್ರರಂಗದಲ್ಲಿ ಈ ಹೆಸರು ಬಂದಾಗ ಎಲ್ಲರಿಗೂ ನೆನಪಾಗೋದು ಅಂಬರೀಶ್‌. ಅದಕ್ಕೆ ಕಾರಣ ಆ ಟೈಟಲ್‌ಗ‌ೂ ಅವರಿಗೂ ಇರುವ ಒಂದು ಅವಿನಾಭಾವ ಸಂಬಂಧ. ಮೊದಲನೇಯದಾಗಿ ಅಂಬರೀಶ್‌ ಅವರ ಮೂಲ ಹೆಸರು ಅಮರ್‌ನಾಥ್‌. ಇದು ಒಂದು ಅಂಶವಾದರೆ ಸಿನಿಮಾ ವಿಷಯದಲ್ಲೂ ಅಮರ್‌ಗೂ ಅಂಬರೀಶ್‌ ಅವರಿಗೂ ತುಂಬಾನೇ ನಂಟಿದೆ. “ಹಾಂಕಾಂಗ್‌ನಲ್ಲಿ ಏಜೆಂಟ್‌ ಅಮರ್‌’ ಹಾಗೂ “ಅಮರನಾಥ್‌’ ಎಂಬ ಸಿನಿಮಾಗಳಲ್ಲೂ ಅಂಬರೀಶ್‌ ನಟಿಸಿದ್ದಾರೆ.

Advertisement

ಇದರ ಹೊರತಾಗಿಯೂ ಅಮರನಾಥ್‌ ಎಂಬ ಪಾತ್ರಗಳಲ್ಲೂ ಅಂಬರೀಶ್‌ ಕಾಣಿಸಿಕೊಂಡಿದ್ದರು. “ಚಕ್ರವ್ಯೂಹ’ ಹಾಗೂ “ಬುಲ್‌ಬುಲ್‌’ ಚಿತ್ರಗಳಲ್ಲಿ ಅಂಬರೀಶ್‌ ಅವರ ಪಾತ್ರದ ಹೆಸರು ಕೂಡಾ ಅಮರನಾಥ್‌. ಹೀಗೆ ಅಮರ್‌ ಹೆಸರಿಗೂ ಅಂಬರೀಶ್‌ ಅವರಿಗೂ ಅವಿನಾಭಾವ ಸಂಬಂಧವಿದೆ. ಈಗ ಆ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಅದು ಅವರ ಮಗನ ಸಿನಿಮಾ ಮೂಲಕ.

ಹೌದು, ಅಂಬರೀಶ್‌ ಅವರ ಪುತ್ರ ಅಭಿಷೇಕ್‌ ಚಿತ್ರರಂಗಕ್ಕೆ ಹೀರೋ ಆಗಿ ಲಾಂಚ್‌ ಆಗಿದ್ದಾರೆ. ಅದು “ಅಮರ್‌’ ಮೂಲಕ. ಅಂಬರೀಶ್‌ ಪುತ್ರ ಅಭಿಷೇಕ್‌ ಚಿತ್ರರಂಗಕ್ಕೆ ಎಂಟ್ರಿಕೊಡಲಿದ್ದಾರೆಂಬ ಸುದ್ದಿ ಹರಿದಾಡಿದ ಕೂಡಲೇ ಆರಂಭವಾದ ಚರ್ಚೆ ಎಂದರೆ ಸಿನಿಮಾ ಟೈಟಲ್‌ ಏನು ಎಂಬುದು. ಈ ನಡುವೆಯೇ ನಾನಾ ಟೈಟಲ್‌ಗ‌ಳು ಕೇಳಿಬಂದುವು. ಆದರೆ ಅಂತಿಮವಾಗಿ “ಅಮರ್‌’ ಎಂಬ ಶೀರ್ಷಿಕೆಯನ್ನಿಟ್ಟು ಸಿನಿಮಾ ಮುಹೂರ್ತ ಕಂಡಿದೆ.

ನಾಗಶೇಖರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಸಂದೇಶ್‌ ನಾಗರಾಜ್‌ ನಿರ್ಮಿಸುತ್ತಿದ್ದಾರೆ. ಅಭಿಷೇಕ್‌ ಕೂಡಾ ತಮ್ಮ ಮೊದಲ ಚಿತ್ರದ ಬಗ್ಗೆ ಎಕ್ಸೆಟ್‌ ಆಗಿದ್ದಾರೆ. ತಮ್ಮ ಸಿನಿಮಾ ಕನಸು, ಟೈಟಲ್‌, ಸಿದ್ಧತೆ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ ….

* ನಿಮ್ಮ ಮೊದಲ ಸಿನಿಮಾ ಲಾಂಚ್‌ ಆಗಿದೆ. ಈ ಸಂದರ್ಭ ಹೇಗನಿಸ್ತಾ ಇದೆ?
ಮೊದಲ ಸಿನಿಮಾ ಎಂದಾಗ ಸಹಜವಾಗಿಯೇ ಎಲ್ಲರಿಗೂ ಒಂದು ಎಕ್ಸೆ„ಟ್‌ಮೆಂಟ್‌ ಇರುತ್ತದೆ. ಅದು ಸಿನಿಜೀವನದ ಮೊದಲ ಹೆಜ್ಜೆ. ಎಷ್ಟೇ ತಯಾರಿ ಮಾಡಿಕೊಂಡಿದ್ದರೂ ಸಣ್ಣದೊಂದು ಭಯ, ನರ್ವಸ್‌ ಎಲ್ಲರಲ್ಲೂ ಇರುತ್ತದೆ. ಅದು ನನ್ನಲ್ಲೂ ಇದೆ. ನಾನು ಈ ಪ್ರಾಜೆಕ್ಟ್ ಬಗ್ಗೆ ತುಂಬಾ ಎಕ್ಸೆ„ಟ್‌ ಆಗಿದ್ದೇನೆ. ಒಬ್ಬ ಹೊಸ ಹೀರೋನಾ ಲಾಂಚ್‌ಗೆ ಏನೆಲ್ಲಾ ಅಂಶಗಳು ಬೇಕೋ ಅವೆಲ್ಲವೂ ಈ ಸಿನಿಮಾದಲ್ಲಿದೆ. ಮುಖ್ಯವಾಗಿ ಕಥೆ ತಯುಂಬಾ ಫ್ರೆಶ್‌ ಆಗಿದೆ. ಚಿತ್ರೀಕರಣಕ್ಕಾಗಿ ಎದುರು ನೋಡುತ್ತಿದ್ದೇನೆ.

Advertisement

* ನಿಮ್ಮ ಲಾಂಚ್‌ ತಡವಾಯಿತು ಅಥವಾ ಮುಂಚೆಯೇ ಲಾಂಚ್‌ ಆಗಬೇಕೆಂಬ ಆಸೆ ಇತ್ತಾ? 
ಇಲ್ಲ, ಆ ತರಹದ ಯಾವ ಆಸೆಯೂ ಇರಲಿಲ್ಲ. ಸರಿಯಾದ ಸಮಯಕ್ಕೆ ಲಾಂಚ್‌ ಆಗುತ್ತಿದ್ದೇನೆ ಎಂಬ ಖುಷಿ ಇದೆ. ಯಾವ್ಯಾವುದು ಯಾವಾಗ ಆಗಬೇಕು ಆಗಲೇ ಆಗುತ್ತದೆ. ಈಗ ನನ್ನ ಲಾಂಚ್‌ಗೆ ಸಮಯ ಕೂಡಿಬಂದಿದೆ ಎಂದು ಭಾವಿಸಿದ್ದೇನೆ.

* ಚಿತ್ರಕ್ಕೆ “ಅಮರ್‌’ ಎಂಬ ಟೈಟಲ್‌ ಇಡಲು ಕಾರಣ?
ಇದಕ್ಕೆ ವಿಶೇಷ ಕಾರಣ, ಅರ್ಥವೇನೂ ಇಲ್ಲ. ಮುಖ್ಯವಾಗಿ ಕಥೆಗೆ ಈ ಟೈಟಲ್‌ ಚೆನ್ನಾಗಿ ಹೊಂದಿಕೆಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ನನಗೆ, ನನ್ನ ಫ್ಯಾಮಿಲಿಗೆ ಈ ಟೈಟಲ್‌ ತುಂಬಾ ಇಷ್ಟ. ಈ ಟೈಟಲ್‌ ಮೇಲೆ ನಮಗೊಂದು ಸೆಂಟಿಮೆಂಟ್‌ ಇದೆ. ಈ ಎಲ್ಲಾ ಕಾರಣದಿಂದ ಚಿತ್ರಕ್ಕೆ “ಅಮರ್‌’ ಎಂದು ಟೈಟಲ್‌ ಇಟ್ಟಿದ್ದೇವೆ. 

* “ಅಮರ್‌’ ಟೈಟಲ್‌ ಇಡಲು ನಿರ್ಧರಿಸಿದಾಗ ನಿಮ್ಮ ತಂದೆ ಏನಂದ್ರು?
ಓಕೆ ಮಾಡಿದ್ರು. ತುಂಬಾ ಪಾಸಿಟಿವ್‌ ಆಗಿದ್ರು. ನಿಮ್ಮ ಕಥೆಗೆ, ಪಾತ್ರಕ್ಕೆ ಹೊಂದಿಕೆಯಾಗುವುದಾದರೆ ಅದೇ ಟೈಟಲ್‌ ಇಡೀ ಎಂದರು. ಅವರನ್ನು ಕೇಳದೇ ಯಾವ ವಿಷಯದಲ್ಲೂ ನಾವು ಮುಂದುವರಿಯುವುದಿಲ್ಲ. 

* ಸಿನಿಮಾ ನಟನಾಗಲು ನೀವು ನಿರ್ಧರಿಸಿದಾಗ ನಿಮ್ಮ ತಂದೆಯ ಸಲಹೆ ಏನು?
ಕಷ್ಟಪಟ್ಟು ಕೆಲಸ ಮಾಡಿದ್ರೆ ಉದ್ಧಾರ ಆಗ್ತಿàಯಾ ಮಗನೇ. ಯಾವುದೇ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡು. ಆಗ ಫ‌ಲ ಸಿಗುತ್ತದೆ ಎಂಬ ಸಲಹೆ ಅಪ್ಪನಿಂದ ಬಂತು. 

* ನೀವು ಚಿತ್ರರಂಗಕ್ಕೆ ಬರಬೇಕೆಂದು ಹೆಚ್ಚು ಆಸೆ ಪಟ್ಟವರು ಯಾರು, ಅಪ್ಪನಾ-ಅಮ್ಮನಾ?
ಇಬ್ಬರಿಗೂ ನಾನು ಚಿತ್ರರಂಗಕ್ಕೆ ಬರಬೇಕೆಂಬ ಆಸೆ ಇತ್ತು. ಅದರಲ್ಲೂ ಅಪ್ಪ ಸ್ವಲ್ಪ ಹೆಚ್ಚೇ ಆಸೆ ಪಟ್ಟಿದ್ದರು. ಅವರಿಗೆ ನಾನು ಯಾವ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆಂಬ ಬಗ್ಗೆ ಟೆನನ್‌ ಇತ್ತು. ಈಗ ನಾನು ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿರುವುದರಿಂದ ಖುಷಿಯಾಗಿದ್ದಾರೆ. 

* ಚಿತ್ರಕ್ಕೆ “ಜಲೀಲ’ ಎಂಬ ಶೀರ್ಷಿಕೆ ಇಡುತ್ತಾರೆಂಬ ಸುದ್ದಿಯೂ ಓಡಾಡುತ್ತಿತ್ತು?
ಆ ಬಗ್ಗೆ ನಾವು ಯಾವತ್ತೂ ಗಂಭೀರವಾಗಿ ಚರ್ಚಿಸಿಲ್ಲ. ಒಂದು ಬಾರಿ ಯೋಚಿಸಿರಬಹುದು. ಆದರೆ, ಆ ಟೈಟಲ್‌ ಈ ಕಥೆಗೆ ಸೂಟ್‌ ಆಗಲ್ಲ. ಹಾಗಾಗಿ, ಕೈ ಬಿಟ್ಟೆವು. ಅಷ್ಟರಲ್ಲೇ ಅದು ಸುದ್ದಿಯಾಗಿತ್ತು. ನಾವೆಲ್ಲರೂ ಈ ಚಿತ್ರಕ್ಕೆ ಇಷ್ಟಪಟ್ಟ ಶೀರ್ಷಿಕೆ “ಅಮರ್‌’.

* “ಅಮರ್‌’ ಬಗ್ಗೆ ಹೇಳಿ?
ಮುಖ್ಯವಾಗಿ ಈ ಚಿತ್ರದ ಶೀರ್ಷಿಕೆಯೇ ತುಂಬಾ ತೂಕದಿಂದ ಕೂಡಿದೆ. ಅದಕ್ಕೆ ಪೂರಕವಾದ ಕಥೆ ಇದೆ. ಇದೊಂದು ಬ್ಯೂಟಿಫ‌ುಲ್‌ ಲವ್‌ಸ್ಟೋರಿ. ಇಂದಿನ ಟ್ರೆಂಡ್‌ಗೆ ತಕ್ಕಂತಹ ಲವ್‌ಸ್ಟೋರಿ. ಮುಖ್ಯವಾಗಿ ತಂದೆಯ ಅಭಿಮಾನಿಗಳಿಗೆ ಈ ಚಿತ್ರ ಇಷ್ಟ ಆಗುತ್ತದೆ. ಜೊತೆಗೆ ಇವತ್ತಿನ ಆಡಿಯನ್ಸ್‌ ಕೂಡಾ “ಅಮರ್‌’ ಇಷ್ಟವಾಗುತ್ತದೆ. ನಿರ್ದೇಶಕ ನಾಗಶೇಖರ್‌ ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ.

* ಮಾಸ್‌ ಲುಕ್‌ನಲ್ಲಿರುವ ನೀವು ಮೊದಲ ಚಿತ್ರದಲ್ಲೇ ಲವ್‌ಸ್ಟೋರಿ ಆಯ್ಕೆ ಮಾಡಲು ಕಾರಣ?
ಲವ್‌ಸ್ಟೋರಿ ಅಂದಾಕ್ಷಣ ಇಡೀ ಸಿನಿಮಾ ಲವ್‌ ಸುತ್ತವೇ ಸುತ್ತಲ್ಲ. ಚಿತ್ರದ ಮೂಲ ಕಥೆ ಅದಷ್ಟೇ. ಅದರ ಹೊರತಾಗಿ ಸಿನಿಮಾದಲ್ಲಿ ಸಾಕಷ್ಟು ಅಂಶಗಳಿವೆ. ಮಾಸ್‌ ಆಡಿಯನ್ಸ್‌ಗೆ ಏನೆಲ್ಲಾ ಬೇಕು, ಆ ಎಲ್ಲಾ ಅಂಶಗಳೊಂದಿಗೆ ಕಥೆ ಟ್ರಾವೆಲ್‌ ಆಗುತ್ತದೆ. 

* ನಿರ್ದೇಶಕ ನಾಗಶೇಖರ್‌ ಬಗ್ಗೆ ಹೇಳಿ?
ನಾಗಶೇಖರ್‌ ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. ತುಂಬಾ ಒಳ್ಳೆಯ ನಿರ್ದೇಶಕ. ಸ್ಕ್ರಿಪ್ಟ್ನ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಹೆಚ್ಚು ಗಮನಹರಿಸುತ್ತಾರೆ. ಒಬ್ಬ ನಟನಾಗಿ ನಾನು ಎಲ್ಲಿ ಹೆಚ್ಚು ಗಮನಕೊಡಬೇಕು, ಡೈಲಾಗ್‌ ಡೆಲಿವರಿ, ಬಾಡಿ ಲಾಂಗ್ವೇಜ್‌ ಹೇಗಿರಬೇಕೆಂಬ ಬಗ್ಗೆ ಗಮನಹರಿಸುತ್ತಿದ್ದಾರೆ. ನನಗೆ ತುಂಬಾ ಬೆಂಬಲವಾಗಿದ್ದಾರೆ. 

* ಸಂದೇಶ್‌ ನಾಗರಾಜ್‌ ಹಾಗೂ ನಿಮ್ಮ ತಂದೆ ಒಳ್ಳೆಯ ಸ್ನೇಹಿತರು. ಈಗ ಅವರ ಬ್ಯಾನರ್‌ನಲ್ಲಿ ಲಾಂಚ್‌ ಆಗುತ್ತಿದ್ದೀರಿ?
ಹೌದು, ಅವರೆಲ್ಲಾ ನನ್ನನ್ನು ಚಿಕ್ಕ ವಯಸ್ಸಿನಿಂದ ನೋಡುತ್ತಿದ್ದಾರೆ. ಅವರ ಕಣ್ಣೆದುರೇ ಬೆಳೆದವ ನಾನು. ಈಗ ಅವರದ್ದೇ ಬ್ಯಾನರ್‌ ಮೂಲಕ ನಾನು ಲಾಂಚ್‌ ಆಗುತ್ತಿದ್ದೇನೆ. ಹೋಂಬ್ಯಾನರ್‌ನಲ್ಲಿ ನಟಿಸುತ್ತಿರುವ ಫೀಲ್‌ ಇದೆ. 

* ಸಿನಿಮಾಕ್ಕೆ ನಿಮ್ಮ ಸಿದ್ಧತೆಗಳ ಬಗ್ಗೆ ಹೇಳಿ?
ಸಿನಿಮಾ ರಂಗಕ್ಕೆ ಬರುವುದಾಗಿ ನಿರ್ಧರಿಸಿದ ದಿನದಿಂದಲೇ ಆ್ಯಕ್ಟಿಂಗ್‌ ಕ್ಲಾಸ್‌, ಜಿಮ್‌, ಡ್ಯಾನ್ಸ್‌, ಫೈಟ್‌, ಡೈಲಾಗ್‌ ಡೆಲಿವರಿ ಕುರಿತು ತರಬೇತಿ ಪಡೆಯುತ್ತಿದ್ದೇನೆ. ಎಲ್ಲಾ ವಿಭಾಗದಲ್ಲೂ ಫಿಟ್‌ ಆಗಿರಬೇಕೆಂಬ ಕಾರಣಕ್ಕೆ ಪೂರ್ಣಪ್ರಮಾಣದಲ್ಲಿ ತಯಾರಾಗುತ್ತಿದ್ದೇನೆ. ಮೊದಲ ಸಿನಿಮಾವಾದ್ದರಿಂದ ಸಹಜವಾಗಿಯೇ ತಯಾರಿಗೆ ಒಂದಷ್ಟು ಸಮಯ ಬೇಕಾಗುತ್ತದೆ. ಆ ಸಮಯವನ್ನು ನಮ್ಮ ನಿರ್ಮಾಪಕರು, ನಿರ್ದೇಶಕರು ನನಗೆ ನೀಡಿದ್ದಾರೆ. 

* ನಿಮ್ಮ ಡ್ರೀಮ್‌ ಕ್ಯಾರೆಕ್ಟರ್‌ ಯಾವುದು?
ಕನ್ವರ್‌ಲಾಲ್‌. ಯಾವತ್ತಿದ್ದರೂ ನನಗೆ ಆ ಪಾತ್ರ ಇಷ್ಟ. ತೆರೆಮೇಲೆ ಕನ್ವರ್‌ಲಾಲ್‌ ಆಗಬೇಕೆಂಬ ಆಸೆ ನನಗೂ ಇದೆ. ಮುಂದೊಂದು ದಿನ ಆ ಆಸೆ ಈಡೇರಬಹುದು. 

* ಕನ್ನಡ ಚಿತ್ರರಂಗಕ್ಕೆ ಆರಡಿ ಕಟೌಟ್‌ ಬರ್ತಾ ಇದೆ ಎಂಬ ಮಾತಿಗೆ ಏನಂತ್ತೀರಿ?
ಆರಡಿ ಕಟೌಟ್‌ ಆದ್ರೇನು, ಏಳಡಿ ಕಟೌಟ್‌ ಆದ್ರೇನು, ಸಿನಿಮಾ, ನಟನೆ ಚೆನ್ನಾಗಿ ಮಾಡಬೇಕು. ನಮ್ಮನ್ನು ನಂಬಿ ಬರುವ ಪ್ರೇಕ್ಷಕರನ್ನು ರಂಜಿಸಬೇಕು. ಅಷ್ಟೇ ನನ್ನ ಉದ್ದೇಶ. 

* ಜನ ಯಾವತ್ತು ನಿಮ್ಮನ್ನು ತೆರೆಮೇಲೆ ನೋಡಬಹುದು?
ಎಲ್ಲವೂ ಅಂದುಕೊಂಡಂತೆ ಆದರೆ ಆರೇಳು ತಿಂಗಳಲ್ಲಿ. ಆ ನಿಟ್ಟಿನಲ್ಲೇ ನಾವೂ ಕೆಲಸ ಮಾಡುತ್ತಿದ್ದೇವೆ. 

Advertisement

Udayavani is now on Telegram. Click here to join our channel and stay updated with the latest news.

Next