ಪಟ್ನಾ : ಪಟ್ನಾ ಹೈಕೋರ್ಟಿನ ಖಾಯಂ ನ್ಯಾಯಾಧೀಶರಾಗಿ ಆರು ಹೆಚ್ಚುವರಿ ನ್ಯಾಯಾಧೀಶರಿಗೆ ಇಂದು ಪ್ರಮಾಣ ವಚನ ಬೋಧಿಸಲಾಯಿತು.
ಇದರೊಂದಿಗೆ ಮಂಜೂರಾಗಿರುವ 53 ಹುದ್ದೆಗಳ ಪೈಕಿ ಪಟ್ನಾ ಹೈಕೋರ್ಟಿನ ನ್ಯಾಯಾಧೀಶರ ಸಂಖ್ಯಾಬಲ ಈಗ 27ಕ್ಕೆ ಏರಿದೆ.
ಹೈಕೋರ್ಟಿನ ಮಾರ್ಬಲ್ ಹಾಲ್ ನಲ್ಲಿಂದು ನಡೆದ ಸಮಾರಂಭದಲ್ಲಿ ಪಟ್ನಾ ಹೈಕೋರ್ಟ್ ಚೀಫ್ ಜಸ್ಟಿಸ್ ಎ ಪಿ ಸಾಹಿ ಅವರು ಆರು ಹೆಚ್ಚುವರಿ ನ್ಯಾಯಾಧೀಶರಿಗೆ ಖಾಯಂ ನ್ಯಾಯಾಧೀಶರಾಗಿ ಪ್ರಮಾಣ ವಚನ ಬೋಧಿಸಿದರು.
ಅವರೆಂದರೆ : ಜಸ್ಟಿಸ್‌ಗಳಾದ ಅನಿಲ್ ಕುಮಾರ್ ಉಪಾಧ್ಯಾಯ, ರಾಜೀವ್ ರಂಜನ್ ಪ್ರಸಾದ್, ಸಂಜಯ್ ಕುಮಾರ್, ಮಧುರೇಶ್ ಪ್ರಸಾದ್, ಮೋಹಿತ್ ಕುಮಾರ್ ಶಾ ಮತ್ತು ಪ್ರಕಾಶ್ ಚಂದ್ರ ಜೈಸ್ವಾಲ್.
ಈ ಎಲ್ಲ ಆರು ಮಂದಿಯನ್ನು 2017ರ ಮೇ ತಿಂಗಳಲ್ಲಿ ಎರಡು ವರ್ಷಗಳ ಮಟ್ಟಿಗೆ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು.