Advertisement
ಭವಾನಿ ಸೊಸೈಟಿಗೆ ಸಗಟು ನಿವೇಶನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ದಂತೆ ಬಿಡಿಎ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ಮಾತನಾಡಿದರು.
Related Articles
Advertisement
ಈವರೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ (ಬಿಡಿಎ) ಸಗಟು ನಿವೇಶನ ಹಂಚಿಕೆಗಳು ಸಂಪೂರ್ಣ ಅವ್ಯವಹಾರ ದಿಂದ ಕೂಡಿದ್ದು, ಪ್ರಾಧಿಕಾರಕ್ಕೆ ಕೋಟ್ಯಂತರರೂ. ನಷ್ಟವಾಗುತ್ತಿದೆ. ಇವುಗಳ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ಒಂದು ವಾರದಲ್ಲಿಯೇ ನೇಮಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ತಿಳಿಸಿದರು.
ಅಸಹಕಾರಕ್ಕೆ ಅಸಹಾಯಕತೆ ವ್ಯಕ್ತಪಡಿಸಿದ ವಿಶ್ವನಾಥ್ ;
ಬಿಡಿಎನಲ್ಲಿ ಸಗಟು ನಿವೇಶನ ಹಂಚಿಕೆ ಕುರಿತು 11 ಪತ್ರ ಬರೆದಿದ್ದೇನೆ. ಆದರೆ, ಯಾವುದೇ ಪತ್ರಕ್ಕೂ ಆಯುಕ್ತ ಮಹದೇವ್ ಉತ್ತರ ನೀಡಿಲ್ಲ. ಅವರ ಕಚೇರಿಗೆ ನಾನೇಖುದ್ದಾಗಿ ತೆರಳಿದರು ಸೂಕ್ತ ಸ್ಪಂದನೆ ಇಲ್ಲ. ಜತೆಗೆಎಲ್ಲವನ್ನು ಸ್ವಯಂ ನಿರ್ಧಾರ ಕೈಗೊಳ್ಳುತ್ತಾರೆ. ಅಧ್ಯಕ್ಷರ ಮಾತಿಗೂ ಕಿಮ್ಮತ್ತಿಲ್ಲದಂತಾಗಿದೆ. ಅಲ್ಲದೆ, ಮುಖ್ಯಮಂತ್ರಿಗಳ ಸೂಚನೆಯನ್ನು ಪಾಲಿಸುತ್ತಿಲ್ಲ.ಸಂಪೂರ್ಣವಾಗಿ ಬಿಡಿಎ ಅಧಿಕಾರಿಗಳು ಅಸಹಕಾರನೀಡುತ್ತಿದ್ದಾರೆ ಎಂದು ಅಧ್ಯಕ್ಷ ವಿಶ್ವನಾಥ್ ಅಸಹಾಯಕತೆ ವ್ಯಕ್ತಪಡಿಸಿದರು.
ಏನಿದು ಭವಾನಿ ಸೊಸೈಟಿ ಸಗಟು ನಿವೇಶನ ಹಂಚಿಕೆ? :
ಬಿಡಿಎಯಿಂದ ಭವಾನಿ ಸೊಸೈಟಿ ಜಾಗ ಒತ್ತುವರಿ ಹಿನ್ನೆಲೆ ಪರಿಹಾರವಾಗಿ ಹಣ ನೀಡಲಾಗಿತ್ತು. ಜತೆಗೆ ಪರಿಹಾರವಾಗಿ ಸೊಸೈಟಿಯು ಭೂಮಿ ಕೇಳಿ 1987ರಲ್ಲಿಬಿಡಿಎಗೆ ಅರ್ಜಿ ನೀಡಲಾಗಿತ್ತು. ಆಗ, ಆ ಅರ್ಜಿ ಸ್ವೀಕರಿಸಿ, 32.5 ಎಕರೆ ಜಾಗನೀಡುವುದಾಗಿ ಪ್ರಾಧಿಕಾರ ಸಭೆ ತೀರ್ಮಾನ ಕೈಗೊಂಡಿತ್ತು. ಕೂಡಲೇ 20 ಎಕರೆಜಾವನ್ನು ಕೊಡಲಾಗಿತ್ತು. ಈ ಮತ್ತೆ 2017ರಲ್ಲಿ ಭವಾನಿ ಸೊಸೈಟಿ ಭೂಮಿಗಾಗಿಮತ್ತೆ ಅರ್ಜಿ ಹಾಕಿ ಬಾಕಿ 12.5 ಎಕರೆ ಜಮೀನು ಕೇಳಿದೆ. ಸ್ವಹಿತಾಸಕ್ತಿ ಮತ್ತುಅವ್ಯವಹಾರದಲ್ಲಿ ಭಾಗಿಯಾಗಿರುವ ಕೆಲ ಅಧಿಕಾರಿಗಳು ಪ್ರಮುಖ ಬಡಾವಣೆಗಳಲ್ಲಿ ನಿವೇಶನ ನೀಡಲು ಮುಂದಾಗಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ಹೋಗೋಣ ;
ಭವಾನಿ ಸೊಸೈಟಿಗೆ ನಿವೇಶನ ನೀಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಆದರೆ, 40 ವರ್ಷದ ಹಿಂದಿನ ದರಕ್ಕೆ ಸಾಧ್ಯವಿಲ್ಲ ಎಂಬ ಕುರಿತು ಮೇಲ್ಮನವಿ ಸಲ್ಲಿಸಲು ಬಿಡಿಎಗೆ ಅವಕಾಶವಿದೆ. ರೈತರಿಗೆ ಒಂದು ಸಣ್ಣ ನಿವೇಶನ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ಹೋಗ್ತಾರೆ. ಆದರೆ, 500 ಕೋಟಿ ರೂ. ಜಾಗದ ಯಾಕೆ ಮೇಲ್ಮನವಿ ಸಲ್ಲಿಸುತ್ತಿಲ್ಲ. ಈ ಮೂಲಕ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಯುಕ್ತರ ಸ್ಪಷ್ಟನೆ; ಪ್ರತ್ಯಾರೋಪ :
ಭವಾನಿ ಸೊಸೈಟಿಗೆ 20 ಎಕರೆ ಜಮೀನು ಹಂಚಿಕೆ ಮಾಡಿದ್ದೇವೆ. ಉಳಿದ ಜಮೀನು ಕೊಡಲು ಕೋರ್ಟ್ ಸೂಚಿಸಿದೆ. ಇದು ಸಗಟು ಹಂಚಿಕೆ ಅಲ್ಲ. ಜಾಗಕ್ಕೆ ಬದಲಾಗಿ ಜಾಗವನ್ನು ಕೊಡುತ್ತಿದ್ದೇವೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬಿಡಿಎ ಕ್ರಮದಂತೆ, ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳಲಾಗಿದೆ. ಸದ್ಯ ಸಗಟು ನಿವೇಶನ ವಿಚಾರ ದೊಡ್ಡ ಮಟ್ಟಕ್ಕೆ ಹೋಗಿದೆ. ಕೆಲವೊಂದು ವಿಚಾರದ ಬಗ್ಗೆ ಅಧ್ಯಕ್ಷರು ಪತ್ರ ಬರೆದಿದ್ದರು. ನನಗೆ ಅಧ್ಯಕ್ಷರು ಯಾವ ಸಭೆಗೆ ಕರೆದಿಲ್ಲ ಇಲ್ಲ. ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಯುಕ್ತ ಮಹಾದೇವ್ ಪ್ರತ್ಯಾರೋಪ ಮಾಡಿದರು.