Advertisement

ಕಾನೂನಾತ್ಮಕ ಸಮಸ್ಯೆಗಳಿಂದ ನಿವೇಶನ ವಿತರಿಸಿಲ್ಲ

11:19 AM Sep 08, 2018 | |

ಹುಣಸೂರು: ನಗರದಲ್ಲಿ ವಸತಿ ಸೌಲಭ್ಯ ಮತ್ತು ಬಡಾವಣೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕೆಂದು ಶಾಸಕ ಎಚ್‌.ವಿಶ್ವನಾಥ್‌ ಸೂಚಿಸಿದರು. ನಗರಸಭೆಯ ಅಧ್ಯಕ್ಷ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೌರ ಸನ್ಮಾನ ಹಾಗೂ ಅಂಬೇಡ್ಕರ್‌ ವಸತಿ ಯೋಜನೆಯಡಿ 69 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.

Advertisement

2017-18ನೇ ಸಾಲಿನಲ್ಲಿ ಮಂಜೂರಾಗಿರುವ ಮನೆಗಳನ್ನು 20 ವರ್ಷಗಳಿಂದ ಕಾನೂನಾತ್ಮಕ ಸಮಸ್ಯೆಗಳಿಂದ ನಿವೇಶನ ವಿತರಿಸಿಲ್ಲ, ಸಮಸ್ಯೆ ಬಗೆಹರಿಸಿ, ಆದ್ಯತೆ ಮೇರೆಗೆ ಜಿ + 3 ಮಾದರಿ ಹಾಗೂ ಒಂದು+ಮೂರು ಮಾದರಿಯ ಮನೆ ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು. 

ಹೊಸ ಬಡಾವಣೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವ ಬದಲು ನಗರದೊಳಗಿನ ಕೊಳಗೇರಿಗಳನ್ನು ಅಭಿವೃದ್ಧಿಪಡಿಸಿ, ವಸತಿ ಸಮಸ್ಯೆಯನ್ನು ಎಲ್ಲರೂ ಸೇರಿ ಬಗೆಹರಿಸೋಣ, ಹೊಸ ಆಶ್ರಯ ಸಮಿತಿ ರಚನೆಯಾಗಬೇಕಿದ್ದು, ಸದಸ್ಯರಲ್ಲೇ ಹಿರಿಯ ಸದಸ್ಯರೊಬ್ಬರನ್ನು ಸಮಿತಿ ಅಧ್ಯಕ್ಷರನ್ನಾಗಿಸಿ, ವಸತಿ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲಾಗುವುದು ಎಂದು ಹೇಳಿದರು. 

ನಗರಸಭೆ ವತಿಯಿಂದ ನೀಡಿರುವ ಮನವಿ ಬಗ್ಗೆ ಪ್ರಸ್ತಾಪಿಸಿ ಒಳಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುತ್ತೇನೆಂದು ಭರವಸೆ ನೀಡಿದರು. 

ಎಲ್ಲ ರಸ್ತೆಗಳಲ್ಲೂ ಮೆರವಣಿಗೆ ನಡೆಯಲಿ: ವಿಷಯ ಪ್ರಸ್ತಾಪಿಸಿದ ಸದಸ್ಯ ಸತೀಶ್‌ಕುಮಾರ್‌ 3 ವರ್ಷಗಳಿಂದ ಹಲವು ಕಾರಣಗಳಿಂದ ನಗರದ ವಿಶ್ವೇಶ್ವರಯ್ಯ ವೃತ್ತ, ಜೆಎಲ್‌ಬಿ ಹಾಗೂ ಬಜಾರ್‌ ರಸ್ತೆಯಲ್ಲಿ ರಾಷ್ಟ್ರೀಯ ಹಬ್ಬ ಹಾಗೂ ಧಾರ್ಮಿಕ ಮೆರವಣಿಗೆಗಳನ್ನು ನಿಷೇಧ ತೆರವುಗೊಳಿಸಬೇಕೆಂಬ ಮನವಿಗೆ ಎಲ್ಲಾ ಸದಸ್ಯರು ಒಪ್ಪಿಗೆ ನೀಡಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ನಿರ್ಣಯಿಸಿದರು.

Advertisement

ನಗರ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಗುತ್ತಿಗೆದಾರ ಗಂಜಾಂ ಶಿವು ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಇವರಿಂದಾಗಿ ಹಲವಾರು ಬಡಾವಣೆಗಳಲ್ಲಿ ರಾತ್ರಿ ವೇಳೆ ಓಡಾಟ ಕಷ್ಟವಾಗಿದೆ ಎಂದು ಸದಸ್ಯ ಶಿವರಾಜ್‌ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಅವರಿಗೆ ಧ್ವನಿಗೂಡಿಸಿದ ಹಜರತ್‌ಜಾನ್‌, ಶ್ರೀನಿವಾಸ್‌, ಕೃಷ್ಣರಾಜಗುಪ್ತ, ಶರವಣ, ಹಾಲಿ ಗುತ್ತಿಗೆದಾರರನ್ನು ಬದಲಿಸುವಂತೆ ಆಗ್ರಹಿಸಿದರು. 

ಭಾರಿ ವಾಹನ ನಿಷೇಧಿಸಿ: ನಗರದ ಲಕ್ಷ್ಮಣತೀರ್ಥ ನದಿಗೆ ಟಿಪ್ಪುಸುಲ್ತಾನ ಕಾಲದಲ್ಲಿ ನಿರ್ಮಿಸಿರುವ ಪಾರಂಪರಿಕ ಸೇತುವೆ ಅಪಾಯದಲ್ಲಿದೆ. ಈ ಸೇತುವೆ ಮೇಲೆ ಭಾರಿ ವಾಹನಗಳ ಓಡಾಟ ನಿಷೇಧಿಸಿ, ಸೇತುವೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಶರವಣ ಸಭೆಯಲ್ಲಿ ಒತ್ತಾಯಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಧನಲಕ್ಷ್ಮೀ, ಪೌರಾಯುಕ್ತ ಶಿವಪ್ಪನಾಯಕ, ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next