Advertisement
ಈ ಸಂಬಂಧ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಸಂಪತ್, ರಾಯಸಂದ್ರ ಗ್ರಾಮದ ಬಳಿ ಕರ್ನಾಟಕ ಹೌಸಿಂಗ್ ಬೋರ್ಡ್ 164 ಎಕೆರೆ ಜಮೀನು ಖರೀದಿಸಿ ವಸತಿ ಬಡಾವಣೆ ನಿರ್ಮಿಸಿದೆ. ಗಂಗಾಧರನ ಗುಡ್ಡ ರಾಜ್ಯ ಅರಣ್ಯ ಪ್ರದೇಶ ವ್ಯಾಪ್ತಿಯ ಅರಣ್ಯ ಪ್ರದೇಶದ ಬಫರ್ ಝೋನ್38.10ಎಕರೆ ಭೂಮಿಯೂ ಸೇರಿಕೊಂಡಿದೆ. ಅರಣ್ಯ ಇಲಾಖೆ 38.10 ಎಕರೆ ಭೂಮಿ ಬಫರ್ ಝೋನ್ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಅಲ್ಲಿ ಬಡಾವಣೆ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ.
Related Articles
Advertisement
ಗೃಹ ಮಂಡಳಿ, ಡೀಸಿಗೆ ಅರಣ್ಯ ಇಲಾಖೆ ಪತ್ರ : ಗಂಗಾಧರನಗುಡ್ಡ ರಾಜ್ಯ ಅರಣ್ಯ ಪ್ರದೇÍ ¨ ಬಫರ್ ಜೋನ್ ಸರ್ವೆ ಸಂಖ್ಯೆ392,356, 372,373, 325, ಮತ್ತು101ರ ಭಾಗಶಃ ವಿಸ್ತೀರ್ಣ ಹಾಗೂ ಸರ್ವೆ ಸಂಖ್ಯೆ357,371 ಮತ್ತು374ರ ವಿಸ್ತೀರ್ಣಗಳು ಸಂಪೂರ್ಣ ಗಂಗಾಧರನ ಗುಡ್ಡ ರಾಜ್ಯ ಗಡಿಯಿಂದ 100 ಮೀಟರ್ ಬಫರ್ ಜೋನ್ ಪ್ರದೇಶದಲ್ಲಿದೆ. ಅರಣ್ಯ ನಿಯಮ 1969 ಕಲಂ41(2)ರ ಪ್ರಕಾರ ಭೂ ಮಂಜೂರಾತಿಯನ್ನು ಮಾಡಲು ಅವಕಾಶವಿಲ್ಲ, ಹೀಗಾಗಿ, ಯಾವುದೇ ಭೂ ಸ್ವಾಧೀನ ಕೈಗೊಳ್ಳಬಾರದು ಎಂದು ರಾಮನಗರ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕರ್ನಾಟಕ ಗೃಹ ಮಂಡಳಿಗೂ ಸೇರಿ ಜಿಲ್ಲಾಧಿಕಾರಿಗಳಿಗೂ ಕಳೆದ ಜುಲೈನಲ್ಲಿ ಲಿಖೀತವಾಗಿ ತಿಳಿಸಿದ್ದರೂ ಇಲ್ಲಿ ಬಡಾವಣೆ ನಿರ್ಮಾಣವಾಗಿದೆ ಎಂದು ಮತ್ತೂಬ್ಬ ಸಾರ್ವಜನಿಕ ಮುಖಂಡ ರಾಜೇಶ್, ಅರಣ್ಯ ಇಲಾಖೆಯ ದಾಖಲೆಗಳನ್ನು ಪ್ರಸ್ತುತ ಪಡಿಸಿ ಮಾಹಿತಿ ನೀಡಿದರು.
ನಿವೇಶನಖರೀದಿಗೆ ಮುನ್ನ ಎಚ್ಚರವಿರಲಿ! : ಆರ್.ಟಿ.ಐ ಕಾರ್ಯಕರ್ತ ರಾಮಲಿಂಗಯ್ಯ ಮಾತನಾಡಿ, ಹೌಸಿಂಗ್ ಬೋರ್ಡ್ ನಿರ್ಮಿಸಿರುವ ಬಡಾವಣೆಯಲ್ಲಿ ಅರಣ್ಯ ಭೂಮಿ, ಗೋಮಾಳ ಸೇರಿದೆ. ಇದು ಎಂದಿದ್ದರೂ ತಕರಾರು ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ನಿವೇಶನ ಖರೀದಿಸುವವರು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಉದ್ಘಾಟಿಸಲು ಸಿದ್ಧತೆ : ರಾಯಸಂದ್ರ ಗ್ರಾಮದ ಬಳಿ ನಿರ್ಮಿಸಿರುವ ಹೌಸಿಂಗ್ ಬೋರ್ಡ್ ವಸತಿ ಬಡಾವಣೆಯನ್ನುಉದ್ಘಾಟಿಸಿಲು ವಸತಿ ಸಚಿವ ಸೋಮಣ್ಣ ಸದ್ಯದಲ್ಲೇ ಭೇಟಿ ನೀಡಲಿದ್ದಾರೆ. ಅಕ್ರಮಗಳ ಬಗ್ಗೆ ಈಗಾಗಲೆ ಡಿಸಿಎಂ ಡಾ.ಸಿ.ಎನ್.ಅಶ್ವಥನಾರಾಯಣ ಅವರ ಗಮನ ಸೆಳೆಯಲಾಗಿದೆ. ಸಚಿವ ಸೋಮಣ್ಣ ಅವರಿಗೂ ಅಕ್ರಮದ ಬಗ್ಗೆ ಮಾಹಿತಿ ಇದೆ. ಆದರೂ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ರೈತ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.