Advertisement

ಸೀತೆ ಪ್ರನಾಳ ಶಿಶುವಂತೆ

10:06 AM Jun 02, 2018 | Harsha Rao |

ಲಕ್ನೋ: ಮಹಾಭಾರತ ಕಾಲದಲ್ಲೂ ಅಂತರ್ಜಾಲ ಇತ್ತು ಎಂದು ತ್ರಿಪುರಾ ಸಿಎಂ ಬಿಪ್ಲಬ್‌ ದೇಬ್‌ ಹೇಳಿಕೆ ನೀಡಿದ ಬೆನ್ನಲ್ಲೇ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್‌ ಶರ್ಮಾ ಅವರು, “ಸೀತಾ ಮಾತೆ ಜನಿಸಿದ್ದು ಪ್ರನಾಳ ಶಿಶು ತಂತ್ರಜ್ಞಾನದಿಂದ’ ಎಂಬ ಹೇಳಿಕೆ ನೀಡಿ ಹಾಸ್ಯಕ್ಕೆ ಗುರಿಯಾಗಿದ್ದಾರೆ.

Advertisement

ಮಥುರಾದಲ್ಲಿ ಮಾತನಾಡಿದ ಅವರು, “ರಾಮಾಯಣದಲ್ಲಿ ಸೀತೆ ಜನಕನಿಗೆ ಸಿಕ್ಕಿದ್ದು ಗಡಿಗೆಯಲ್ಲಿ. ಆಗಲೇ ಪ್ರನಾಳ ಶಿಶು ತಂತ್ರಜ್ಞಾನ ಇತ್ತು ಎಂಬುದಕ್ಕೆ ಇದೇ ಸಾಕ್ಷಿ’ ಎಂದಿದ್ದಾರೆ. ಅಲ್ಲದೇ, ಪತ್ರಿಕೋದ್ಯಮವೂ ಕೂಡ ಮಹಾಭಾರತದ ಕಾಲದಲ್ಲಿತ್ತು. ಅಂದಿನ ನಾರದನೇ ಇಂದಿನ ಗೂಗಲ್‌ ಎಂದೂ ಹೇಳಿದ್ದಾರೆ. 

ಶರ್ಮಾ ಅವರ ಈ ಹೇಳಿಕೆಗೆ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್‌ ಯಾದವ್‌ ಅವರು ಶರ್ಮಾ ಜತೆ ಮಾತನಾಡಿ, ಪಕ್ಷದ ನಾಯಕತ್ವ ನಿಮ್ಮ ಹೇಳಿಕೆಯಿಂದ ಅಸಮಾಧಾನಗೊಂಡಿದ್ದು, ಇಂಥ ಹೇಳಿಕೆಗಳಿಂದ ದೂರವಿರಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದೆಲ್ಲದರ ನಡುವೆ, ಗುಜರಾತ್‌ನ 12ನೇ ತರಗತಿ ಪಠ್ಯದಲ್ಲಿ, “ಸೀತೆಯನ್ನು ಅಪಹರಿಸಿಕೊಂಡು ಹೋಗಿ ರಾಮ’ ಎಂದು ಉಲ್ಲೇಖೀಸಲಾಗಿದೆ. ಈ ವಿಷಯ ಕೂಡ ಈಗ ವಿವಾದಕ್ಕೆ ಒಳಗಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next