Advertisement

ಬದುಕಿನ ಆಸರೆ ಕಳೆದುಕೊಂಡ ಸಹೋದರಿಯರು

11:09 PM Oct 19, 2020 | mahesh |

ಬೆಳ್ತಂಗಡಿ: ಐತಿಹಾಸಿಕ ವಿಷಯಗಳನ್ನು ಸಾರುವ ಸರಿಸು ಮಾರು 250 ವರ್ಷಗಳಷ್ಟು ಇತಿಹಾ ಸವಿರುವ ತಣ್ಣೀರುಪಂಥ ಗ್ರಾಮದ ಅಳಕೆ ಗುತ್ತುಮನೆ ಭಾಗಶಃ ನಶಿಸಿ ಹೋಗಿದ್ದು, ಪ್ರಸಕ್ತ ಇಬ್ಬರು ವಿಧವಾ ಸಹೋದರಿಯರು ಸೂರಿಲ್ಲದೆ ಅಜ್ಞಾತ ವಾಸದಲ್ಲಿ ಬದುಕು ಸವೆಯುತ್ತಿದ್ದಾರೆ.

Advertisement

ಅಳಕೆ ಗುತ್ತುಮನೆ ವಂಶಸ್ಥರ ಸ್ವಾಧೀನದಲ್ಲಿದ್ದ ಸುತ್ತಮುತ್ತಲ 100 ಎಕ್ರೆ ಪ್ರದೇಶ ಎಲ್ಲ ಉಳುವವರ ಕೈಸೇರಿ ಕೇವಲ ಮನೆಯ ಸಮೀಪದ ಅರ್ಧ ಎಕ್ರೆ ಉಳಿದಿದೆ ಇದು ಪ್ರಸಕ್ತ ಪಾಳುಬಿದ್ದಿದೆ.

ಗತಕಾಲ ಸಾರುತ್ತಿದ್ದ ಗುತ್ತಿನಮನೆ ಕೆಲವು ವರ್ಷಗಳ ಹಿಂದೆ ಅವಶೇಷಗಳಡಿ ಹೂತು ಹೋಗಿವೆ. ಆದರ ಸಮೀಪ ದಲ್ಲೇ ಇರುವ ಗುಡಿಸಲಿನಲ್ಲಿ ವಿಧವಾ ಸಹೋದರಿಯರಿಬ್ಬರಾದ ಶಾಂಭವಿ ಶೆಟ್ಟಿ (59) ಹಾಗೂ ಜಯಂತಿ ಶೆಟ್ಟಿ (73) ವಾಸಿಸುತ್ತಿದ್ದಾರೆ.

ಇತಿಹಾಸ ಸಾರುವ ದೈವಗಳ ಭಂಡಾರ ಹಾಗೂ ಮುಡಿಪು ಇಡಲೂ ಸೂಕ್ತ ಸ್ಥಳದ ಕೊರತೆಯಿದೆ. ದೈವಸ್ಥಾನಗಳು ಜೀರ್ಣೋದ್ಧಾರವಾಗದೆ ಪಾಳುಬಿದ್ದಿದೆ. ಮನೆಗೆ ಒಡೆಯರಿಲ್ಲ. ಜಯಂತಿ ಅವರ ಇಬ್ಬರು ಪುತ್ರಿಯರನ್ನು ಸಾಲಸೋಲ ಮಾಡಿ ಕಳೆದೆರಡು ವರ್ಷಗಳ ಹಿಂದೆ ಮದುವೆ ಮಾಡಿಸಲಾಗಿದೆ. ಅವರ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿಲ್ಲದಿರುವುದರಿಂದ ಪ್ರಸಕ್ತ ಶೆಡ್ಡಿನಂತ ಮನೆಯಲ್ಲಿ ಜಯಂತಿ ಹಾಗೂ ಶಾಂಭವಿ ವಾಸಿಸುತ್ತಿದ್ದಾರೆ.

ಜಯಂತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಜೀವನ ಸ್ಥಿತಿ ನೆನೆದು ಮಾನಸಿಕವಾಗಿ ನೊಂದಿದಿದ್ದಾರೆ. ಶಾಂಭವಿ ಅವರ ಪತಿ ನಿಧನರಾಗಿದ್ದು ಮಕ್ಕಳ ಬಯಕೆ ಈಡೇರಿಲ್ಲ. ಬೀಡಿ ಕಟ್ಟಿ ಇಬ್ಬರು ಜೀವನ ಸಾಗಿಸುತ್ತಿದ್ದಾರೆ.

Advertisement

ಜಯಂತಿ ಅವರ ಹೆಸರಲ್ಲಿ ಅಂತ್ಯೋದಯ ಪಡಿತರ ಚೀಟಿ ಇತ್ತು. ಸದ್ಯ ಬಿಪಿಎಲ್‌ ಆಗಿ ಪರಿ ವರ್ತನೆಗೊಂಡಿದೆ. ಇದರಿಂದ ಪಡಿತರಕ್ಕೆ ಕತ್ತರಿ ಬಿದ್ದಿದೆ. ವಯಸ್ಸಾದ ಇಬ್ಬರು ಕೂಲಿಕೆಲಸಕ್ಕೂ ಹೋಗದ ಪರಿಸ್ಥಿತಿ. ಅಣ್ಣನ ಮಕ್ಕಳು, ಸಂಬಂಧಿಕರು ಕೈಲಾದ ನೆರವು ನೀಡುತ್ತಿದ್ದಾರೆ. ಆದರೆ ಅವರ ಕುಟುಂಬ ನಿರ್ವಹಣೆ ಅವರಿಗೆ ಸವಾಲಾಗಿದೆ. ಈ ನಡುವೆ ಬಡ ಜೀವಗಳೆರಡು ನೋವಿನ ಹತಾಶೆಯಲ್ಲೆ ಬದುಕುತ್ತಿದ್ದಾರೆ.

ಅರ್ಧಕ್ಕೆ ನಿಂತಿರುವ ಆಶ್ರಯ ಯೋಜನೆ
ಆಶ್ರಯ ಯೋಜನೆಯಡಿ ಪಂಚಾಂಗ, ಗೋಡೆ ನಿರ್ಮಾಣ ಮಾಡಲಾಗಿದೆ. ಮುಂದುವರಿಸಲು ಕೈಯಲ್ಲಿ ಬಿಡಿಗಾಸಿಲ್ಲ. ಮೇಲ್ಛಾವಣಿ ನಿರ್ಮಿಸಿದರಷ್ಟೆ ಮೂರನೇ ಕಂತು ಬಿಡುಗಡೆಯಾಗಲು ಸಾಧ್ಯ ಎನ್ನುತ್ತಿ ದ್ದಾರೆ ಪಂ.ಅಧಿಕಾರಿಗಳು. ಇವೆಲ್ಲ ಸಮಸ್ಯೆಗಳ ಮಧ್ಯೆ ಒಂದೇ ಕೋಣೆಯಲ್ಲಿ ಊಟ, ನಿದ್ದೆ, ಅಡುಗೆ ಎಲ್ಲವೂ ಸಾಗುತ್ತಿದೆ ಈಗ. ಮಣ್ಣಿನ ನೆಲದಲ್ಲೇ ವಾಸ ಈ ಸಹೋದರಿಯರದ್ದು.

ಹಣ ಬಿಡುಗಡೆ ಸಾಧ್ಯವಾಗಿಲ್ಲ
ಆಶ್ರಯ ಯೋಜನೆಯಡಿ ಪಂಚಾಂಗ, ಗೋಡೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ. ಆದರೆ ಕಾಂಕ್ರೀಟ್‌ ಮೇಚ್ಛಾವಣಿ ನಿರ್ಮಿಸಲು ಮಹಿಳೆಯರು ಅಶಕ್ತರಾಗಿದ್ದಾರೆ. ನಿಯಮನುಸಾರ ಜಿಪಿಎಸ್‌ ಆಗದೆ ಮುಂದಿನ ಹಂತದ ಹಣ ಬಿಡುಗಡೆ ಸಾಧ್ಯವಾಗಿಲ್ಲ.
-ಪೂರ್ಣಿಮಾ, ಪಿಡಿಒ, ತಣ್ಣೀರುಪಂಥ ಗ್ರಾ.ಪಂ.

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next