Advertisement
ಪ್ರತಿವರ್ಷ ಜನವರಿ ನಂತರ ಸಾಲು ಸಾಲು ಮದುವೆ, ಜಾತ್ರೆಗಳು ನಡೆಯುತ್ತವೆ. ಇದರಿಂದ ಸಮಾರಂಭಗಳಿಗೆ ಶಾಮಿಯಾನ, ಕುರ್ಚಿ, ಲೈಟ್, ವೇದಿಕೆ ಸಿದ್ಧತೆ ಮಾಡುವ ಶಾಮಿಯಾನ ಮಾಲೀಕರಿಗೆ ಒಂದು ರೀತಿಯ ಸುಗ್ಗಿಕಾಲವೇ ಆಗಿರುತ್ತದೆ. ಆದರೆ ಕೊರೊನಾ ಮಾರಿ ಒಕ್ಕರಿಸಿದ್ದರಿಂದ ಶಾಮಿಯಾನ ಮಾಲೀಕರು ಮತ್ತು ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ. ಕಳೆದ 2 ತಿಂಗಳಿಂದ ಕೆಲಸವಿಲ್ಲದೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಏಕಾಏಕಿ ಲಾಕ್‌ಡೌನ್ ಘೋಷಿಸಿದ್ದರ ಪರಿಣಾಮ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.
ಆದರೆ ಮದುವೆ ಸಿದ್ಧತೆಗೆ ಬೇಕಾದ ವಸ್ತುಗಳನ್ನು ತಯಾರಿಸಲು ಹಣ ನೀಡಿದ್ದರಿಂದ ಬುಕ್ಕಿಂಗ್ ಮಾಡಿಸಿದವರಿಗೆ ಹಣ ವಾಪಸ್Õ ಕೊಡುವುದು ಕಿರಿಕಿರಿಯಾಗಿದೆ ಎಂದು ಶಾಮಿಯಾನದ ಮಾಲೀಕ ಎಸ್.ಎಂ.ನಾಗರಾಜಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಶಾಮಿಯಾನದವರ ಕಾರ್ಯ 6 ತಿಂಗಳ ಮೊದಲೇ ಪ್ರಾರಂಭವಾಗುತ್ತವೆ. ಒಂದು ಶಾಮಿಯಾನ ಅಂಗಡಿಗೆ ಸುಮಾರು 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಬುಕ್ ಆಗಿರುತ್ತವೆ.
ಆದರೆ ಈ ಬಾರಿ ಎಲ್ಲ ಕಾರ್ಯಕ್ರಮಗಳು ರದ್ದಾದ ಕಾರಣ ಸುಮಾರು 20ರಿಂದ 30ಲಕ್ಷದಷ್ಟು ಆದಾಯ ನಷ್ಟವಾಗಿದೆ ಎಂದು ಶಾಮಿಯಾನದ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
Related Articles
ನಾಗರಾಜಸ್ವಾಮಿ,
ಶಾಮಿಯಾನ ಮಾಲೀಕರ ಸಂಘದ ಮಾಜಿ ಅಧ್ಯಕ್ಷ
Advertisement
ಲಾಕ್‌ಡೌನ್‌ನಿಂದ ನಮಗೆ ಕೆಲಸವಿಲ್ಲದಂತಾಗಿದೆ. ಶಾಮಿಯಾನ ಹಾಕುವುದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಅದರಿಂದ ಬರುವ ಹಣದಲ್ಲಿಯೇ ಮನೆ ನಿರ್ವಹಣೆ, ಸಾಲತೀರಿಸುವುದನ್ನು ಮಾಡುತ್ತಿದ್ದೇವು. ಆದರೆ ಈಗ ಕೆಲಸವಿಲ್ಲದಿರುವುದರಿಂದ ಬದುಕು ನಡೆಸುವುದು ಕಷ್ಟವಾಗಿದೆ. ಇನ್ನೂ ನಮ್ಮ ಮಾಲೀಕರು ಒಂದಷ್ಟು ಸಹಾಯ ನೀಡುವ
ನಿರೀಕ್ಷೆಯಲ್ಲಿದ್ದೇವೆ.
ಶೇಕ್ಷಾವಲಿ,
ಶಾಮಿಯಾನ ಹಾಕುವ ಕಾರ್ಮಿಕ