Advertisement

ಖಾತ್ರಿ ಕೂಲಿ ಕೆಲಸ ನೀಡಲು ಒತ್ತಾಯಿಸಿ ಮನವಿ

01:38 PM Jun 17, 2020 | Naveen |

ಸಿರುಗುಪ್ಪ: ತಾಲೂಕಿನ ರಾವಿಹಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಗಸನೂರು ಗ್ರಾಮದ ಹರಿಜನ ಜನಾಂಗದ ಜನರಿಗೆ ಉದ್ಯೋಗಖಾತ್ರಿ (ನರೇಗಾ) ಯೋಜನೆ ಅಡಿಯಲ್ಲಿ 100 ದಿನಗಳ ಉದ್ಯೋಗ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಇ.ಒ. ಶಿವಪ್ಪ ಸುಬೇದಾರರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಎಂ.ಹುಸೇನಿ ಅಗಸನೂರು ಗ್ರಾಮದ ಕಾಯಂ ನಿವಾಸಿಗಳಾಗಿದ್ದು, ಕೂಲಿಯಿಂದ ಜೀವನ ಸಾಗಿಸುತ್ತಿದ್ದೇವೆ. ರಾಜ್ಯದಲ್ಲಿ ಕೋವಿಡ್ ವೈರಸ್‌ ವ್ಯಾಪಾಕವಾಗಿ ಹರಡುತ್ತಿರುವುದರಿಂದ ನಾವುಗಳು ಬೆಂಗಳೂರಿಗೆ ದುಡಿಯಲು ಹೋಗಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ನಾವು ನಮ್ಮ ಊರುಗಳಲ್ಲಿದ್ದು ದುಡಿದು ನಮ್ಮ ಕುಟುಂಬಗಳನ್ನು ಬದುಕಿಸಬೇಕಾಗಿದೆ. ನಮ್ಮ ಕೇರಿಯಲ್ಲಿ ಸುಮಾರು 184 ಜನ ಇದ್ದು, ಎಲ್ಲ ಸದಸ್ಯರು ಫಾರಂ.6 (ಆರು) ಉದ್ಯೋಗಕ್ಕಾಗಿ ಅರ್ಜಿ ತುಂಬಿ ಗ್ರಾಮ ಪಂಚಾಯಿತಿಗೆ ಸಲ್ಲಿಸಿರುತ್ತೇವೆ. ಆದರೆ ಗ್ರಾಮ ಪಂಚಾಯಿತಿ ಸಿಬ್ಬಂದಿ, ಪಿಡಿಒ ನಮ್ಮನ್ನು ನಿರ್ಲಕ್ಷಿಸುತ್ತಿದ್ದು, ನಮ್ಮ ಕೇರಿಯಲ್ಲಿರುವ ಬೆರಳೆಣಿಕೆಯಷ್ಟು ಜನರಿಗೆ 15 ರಿಂದ 20ದಿನ ಕೆಲಸ ಕೊಟ್ಟು ಈಗ ನಮಗೆ ಕೆಲಸ ಕೊಡುತ್ತಿಲ್ಲ. ಇದರಿಂದ ಉದ್ಯೋಗವಿಲ್ಲದೆ ಊಟಕ್ಕೆ ತೊಂದರೆಯಾಗಿದೆ. ಕೂಲಿ ಕೆಲಸ ನೀಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಬ್ಬರ ಮೇಲೊಬ್ಬರು ಹೇಳುತ್ತ ದಿನ ಕಳೆಯುತ್ತಿದ್ದಾರೆಂದು ಆರೋಪಿಸಿದರು.

ಗ್ರಾಮಸ್ಥರಾದ ದುರುಗಪ್ಪ, ವೀರಭದ್ರಪ್ಪ, ಹನುಮಂತಪ್ಪ, ದುರುಗಣ್ಣ, ಗೋವಿಂದಮ್ಮ, ಹೊಸೂರಮ್ಮ, ರಾಮಪ್ಪ, ಸಣ್ಣ ಹುಸೇನಪ್ಪ, ಯಲ್ಲಪ್ಪ, ರಾಮಪ್ಪ, ವೀರೇಶ, ಹುಸೇನಪ್ಪ, ನರಸಮ್ಮ, ಈರಣ್ಣ, ದೊಡ್ಡಗಾಳೆಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next