Advertisement

Sirsi: ಸರಕಾರದಿಂದ ಸಂಸ್ಕೃತ ಕ್ಷೇತ್ರಕ್ಕೆ ಉತ್ತೇಜನ ಸಿಗಬೇಕು: ಸ್ವರ್ಣವಲ್ಲೀ ಶ್ರೀ

03:09 PM Jul 13, 2024 | Team Udayavani |

ಶಿರಸಿ: ಸರಕಾರದ ಕಡೆಯಿಂದಲೂ‌ ಸಂಸ್ಕೃತ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ದೊರಕಬೇಕು. ಇರುವ ಅಡಚಣೆ‌ ದೂರವಾಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ‌ಮಹಾ‌ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.

Advertisement

ಅವರು ಜು.13ರ ಶನಿವಾರ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಶಿರಸಿ ಶಿಕ್ಷಣಿಕ ಜಿಲ್ಲಾ ಘಟಕ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ‌ ಪಡೆದ ಸಂಸ್ಕೃತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ನೀಡಿ ಆಶೀರ್ವಚನ‌ ನೀಡಿದರು.

ಪ್ರೌಢ ಶಾಲಾ ಹಂತದಲ್ಲಿ ಸಂಸ್ಕೃತ ತೆಗೆದುಕೊಳ್ಳುವ ವಿದ್ಯಾರ್ಥಿಗಳ‌ ಸಂಖ್ಯೆ ಕಡಿಮೆಯಾಗಿದೆ.‌ ಸಂಸ್ಕೃತ ಓದುವವರಿಗೆ ಉತ್ತೇಜನ ನೀಡಲು ಇಂಥ ಕಾರ್ಯಕ್ರಮ ಪ್ರಶಸ್ತ ಎಂದ ಅವರು ಸಂಸ್ಕೃತಕ್ಕೆ ಸರಕಾರದ ಕಡೆಯಿಂದ ಉತ್ತೇಜನ ಕೊಡುವ ಅಗತ್ಯತೆ‌ ಇದೆ ಎಂದು ಹೇಳಿದರು.

ಪ್ರೌಢ ಶಾಲಾ ಹಂತದಲ್ಲಿ‌ ಸಂಸ್ಕೃತ ಮುಂದುವರಿಸುವುದೇ ಕಷ್ಟ ಎಂಬ ಸಂಗತಿ‌ ಇದೆ. ಸಂಸ್ಕೃತ ಸಾಹಿತ್ಯ ಅರಿತರೆ ಉದ್ಯೋಗ ನಿರೀಕ್ಷೆ ಕಡಿಮೆಯಿದ್ದರೂ ಬದುಕಿಗೆ ಬರುತ್ತದೆ ಎಂದ ಅವರು, ಸಂಸ್ಕೃತ ಓದಿದವರಿಗೆ ಹೆಚ್ಚಿನ ಹೊಣೆಗಾರಿಕೆ ಕೂಡ ಸಮಾಜದಲ್ಲಿದೆ ಎಂದರು.

ಸಂಸ್ಕೃತದೊಳಗಿನ ವಿಷಯ ಓದಿ ತಿಳಿದು ಸಮಾಜಕ್ಕೆ ಹೇಳುವ ಕಾರ್ಯವಾಗಬೇಕು. ಸಂಸ್ಕೃತದಲ್ಲಿ ಅನೇಕ‌ ಪ್ರಾಚೀನ ಭಾರತೀಯ ಜೀವನ ದೃಷ್ಟಿಕೋನ ಸಿಗಲಿದೆ ಎಂದ ಶ್ರೀಗಳು, ಸಂಸ್ಕೃತ  ಪ್ರೌಢ ಶಾಲಾ ಹಂತದಲ್ಲಿ ಓದುತ್ತಾರೆ. ಅದನ್ನು ‌ಮುಂದೆ ಕೂಡ ಇಟ್ಟುಕೊಳ್ಳಬೇಕು. ಇಲ್ಲವಾದರೆ‌ ಒಂದು ಹಂತದಲ್ಲಿ ಓದಿದ್ದಷ್ಟೇ ಆಗುತ್ತದೆ. ಅದರ ಆಳಕ್ಕೆ ಇಳಿಯಲು ಆಗದು ಎಂದರು.

Advertisement

ಅನೇಕ ಸತ್ವಗಳಿಂದ ಕೂಡಿದ  ಸಂಸ್ಕೃತ ಒಳಗಿನ ಸತ್ವದಿಂದಲೇ ಉಳಿದಿದೆ.  ಸಂಸ್ಕೃತ ಪಠ್ಯಕ್ಕೆ ಒಂದು ಮಿತಿ ಇದೆ. ಅಂಕದ ಮಿತಿಯೂ ಇದೆ. ಪಠ್ಯಕ್ರಮದಲ್ಲಿ ಹೊರತಾಗಿಯೂ ಓದಬೇಕು ಎಂದರು.

ಬಿಇಓಗಳಾದ ಎನ್.ಆರ್.ಹೆಗಡೆ‌, ಶಿಕ್ಷಣ ಸಂಯೋಜಕ‌ ಪ್ರಸನ್ನ ಹೆಗಡೆ, ವಿ.ರಾಮಚಂದ್ರ ಭಟ್ ಉಮ್ಮಚಗಿ, ಸಂಸ್ಕೃತ ವಿಷಯ ಪರಿವೀಕ್ಷಕ ವೆಂಕಟರಮಣ ದೆ.ಭಟ್ಟ, ರಾಜ್ಯ ಸಂಘದ ಅಧ್ಯಕ್ಷ ವಿ.ಕೃಷ್ಣ ವಿ.ಭಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಸಂಘದ ಅಧ್ಯಕ್ಷ ಗಿರೀಶ ಹೆಗಡೆ, ರಾಜಾರಾಮ‌ ದೀಕ್ಷಿತ, ಕೆ.ಎಸ್.ವಿಘ್ನೇಶ್ವರ, ಗಣಪತಿ‌ ಜೋಶಿ,ರಮಾಕಾಂತ ಭಟ್ಟ, ವಿನಾಯಕ ಹೆಗಡೆ, ಕೃಷ್ಣಮೂರ್ತಿ ಭಟ್ಟ ಇತರ ಪದಾಧಿಕಾರಿಗಳು ವಿವಿಧ ಜವಬ್ದಾರಿ ನಿರ್ವಹಿಸಿದರು.

ಇಡುವ ಹೆಜ್ಜೆ ನೋಡಿ ಇಡಬೇಕು. ನೀರನ್ನು ಶೋಧಿಸಿ ಕುಡಿಯಬೇಕು. ಆಡುವ ಮಾತುಗಳು ಶಾಸ್ತ್ರ ಸಮ್ಮತವಾಗಿರಬೇಕು. ಮನಸ್ಸಿಗೆ ತೃಪ್ತಿ ಯಾಗುವ ರೀತಿಯಲ್ಲಿ ಕಾರ್ಯಗಳನ್ನು ಮಾಡಬೇಕು. ಆಗ ಒಳಗಿನ ಅಂತಃ ಸಾಕ್ಷಿ ಸಂತೋಷವಾಗಿರುತ್ತದೆ. – ಸ್ವರ್ಣವಲ್ಲೀ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next