Advertisement
ಶಿರಸಿಯಿಂದ ಈ ಗ್ರಾಮವು ಶಿರಸಿಯಿಂದ ಹುಲೆಕಲ್, ವಾನಳ್ಳಿ, ಕಕ್ಕಳ್ಳಿ ಮಾರ್ಗವಾಗಿ ಶಿರಸಗಾಂವದಿಂದ ಹಗುರಮನೆ ಮತ್ತು ಮೇಲಿನಗದ್ದೆಗೆ ಶಿರಸಿಯಿಂದ ಸುಮಾರು 35 ಕೀ.ಮೀ ದೂರದಲ್ಲಿದೆ. ವರ್ಷದಲ್ಲಿ 8 ತಿಂಗಳು ಹಾದು ಹೋಗುವ ರಸ್ತೆಗೆ ಅಡ್ಡವಾಗಿ ಬಿಳಿಹೊಳೆಗೆ ಸೇತುವೆ ಇಲ್ಲದೇ ಸಂಪರ್ಕದ ಕೊರತೆಯಲ್ಲಿಯೇ ಇಂದಿನವರೆಗೂ ಗ್ರಾಮಸ್ಥರು ಜೀವಿಸುತ್ತಿದ್ದಾರೆ.
Related Articles
Advertisement
ಈ ಗ್ರಾಮದಿಂದ ಪ್ರಾರ್ಥಮಿಕ, ಪ್ರೌಢಶಾಲೆ, ಕಾಲೇಜುಗಳಿಗೆ ಹೋಗುವ ಸುಮಾರು 18 ಮಕ್ಕಳುಗಳಿಗೆ ರಸ್ತೆಯ ಸಂಪರ್ಕ, ಕಾಲುಶಂಕವಿಲ್ಲದೇ ಖಾಸಗಿ ಮತ್ತು ಇನ್ನೀತರ ಅತೀಕ್ರಮಣ ಕ್ಷೇತ್ರದಿಂದ ಅರಣ್ಯ ಮತ್ತು ಗಿಡ ಗಂಟಿಗಳ ಮಧ್ಯದಿಂದಲೇ ಓಡಾಡುವುದು ಅನಿವಾರ್ಯವಾಗಿದೆ. ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳ ತಾತ್ಸರ ಮನೋಭಾವನೆ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ ಎನ್ನುತ್ತಾರೆ ರವೀಂದ್ರ.ಸರ್ವಋತು ರಸ್ತೆಯಿಲ್ಲದಿರುವುದರಿಂದ ಅನಾರೋಗ್ಯ ಪೀಡಿತರನ್ನ ಆರೋಗ್ಯ ಕೇಂದ್ರಕ್ಕೆ ಕಂಬಳಿಯಲ್ಲಿ ಸುತ್ತಿ ಸಾಗಿಸುವ ಸಾಹಸವನ್ನ ಗ್ರಾಮಸ್ಥರು ಆಗಾಗ ಮಾಡುವ ಪ್ರಸಂಗಗಳು ಜರುಗಿದೆ. ಹಿಂದೆ ಮಂಜೂರಿಯಾದ ಸೇತುವೆಯನ್ನ ಬೇರೆ ಸ್ಥಳಕ್ಕೆ ವರ್ಗಾಯಿಸಿರುವುದರಿಂದ ನಮ್ಮ ಗ್ರಾಮಕ್ಕೆ ಸೇತುವೆ ಇಲ್ಲದೇ, ವರ್ಷದಲ್ಲಿ 8 ತಿಂಗಳು ನಗರ ಪ್ರದೇಶದಿಂದ ವಂಚಿತರಾಗುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.
ಆಹಾರ ಮತ್ತು ಕೃಷಿ ಸಾಮಗ್ರಿ ಸಾಗಾಟಕ್ಕೆ ತೊಂದರೆ, ಶಾಲೆ ಮಕ್ಕಳು ಮತ್ತು ಹೆಂಗಸರಿಗೆ ಮಳೆಗಾಲದ ನಂತರ ಓಡಾಟಕ್ಕೆ ಸಾಧ್ಯವಾಗದೇ ಇರುವುದರಿಂದ ಸರಕಾರ ಅತೀ ಶೀಘ್ರದಲ್ಲಿ ಸೇತುವೆ ಮಂಜೂರಿ ಮಾಡಬೇಕೆಂದು ಗ್ರಾಮಸ್ಥರಾದ ನಾರಾಯಣ ಯಂಕು ಗೌಡ, ಗೌರಿ ಬೋಮ್ಮ ಗೌಡ ಮತ್ತು ಸವಿತಾ ಗಣಪತಿ ಗೌಡ ಸಾರ್ವತ್ರಿಕವಾಗಿ ಅಳಲನ್ನು ತೊಡಿಕೊಂಡಿದ್ದಾರೆ.
ಸ್ವತಂತ್ರ ದೊರಕಿ 75 ವರ್ಷಗಳಾದರೂ ಅತ್ಯಂತ ಹಿಂದುಳಿದ ಪ್ರದೇಶದ ಮೂಲಭೂತ ಸೌಕರ್ಯದಿಂದ ಗ್ರಾಮವು ವಂಚಿತವಾಗಿರುವುದು ಖೇದಕರ. ಈ ಗ್ರಾಮದ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಸಾಮಾಜಿಕ ಹೋರಾಟಗಾರರ ರವೀಂದ್ರ ನಾಯ್ಕ ಮಾಧ್ಯಮಗಳ ಮೂಲಕ ಹಕ್ಕೊತ್ತಾಯ ಮಾಡಿದ್ದಾರೆ.