ಶಿರಸಿ: ಗ್ರಾಹಕರಿಗೂ, ಜೆಸಿಬಿ, ಹಿಟಾಚಿ ಮಾಲಕರಿಗೂ ನ್ಯಾಯ ಸಿಗಬೇಕಿದೆ. ಸಂಘಟನೆಯ ಮೂಲಕ ವಿಮೆ, ಸಮರ್ಪಕ ನಿರ್ವಹಣೆಗೆ ಜಾಗೃತಿ ಮೂಡಿಸಬೇಕು ಎಂದು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹೇಳಿದರು.
ಫೆ.6ರ ಮಂಗಳವಾರ ನಗರದ ಪೊಲೀಸ್ ಗ್ರೌಂಡ್ ನಲ್ಲಿ ಜೆಸಿಬಿ, ಹಿಟಾಚಿ ಮಾಲಕರ ಕ್ಷೇಮಾಭಿವೃದ್ದಿ ಸಂಘದ ಉದ್ಘಾಟನೆಯಲ್ಲಿ ಪಾಲ್ಗೊಂಡು ಶಿಸ್ತು ಬದ್ಧತೆ ರೂಢಿಸಿಕೊಂಡು ಹೋಗಬೇಕು ಎಂದು ಹೇಳಿದರು.
37 ಲಕ್ಷ ರೂ. ಕೊಟ್ಟು ಜೆಸಿಬಿ ಖರೀದಿಸಿದರೆ ಅದರ ಒಂದು ದಿನದ ಬಡ್ಡಿ ಹಾಗೂ ಇನ್ಸುರೆನ್ಸ್ ಸೇರಿ 1650 ರೂ. ಕಟ್ಟಲೇಬೇಕು. ಅಸಲು ಬೇರೆ ವಾಹನ ನಿಂತರೆ ಬಡ್ಡಿ ಕಟ್ಟುವುದು ತಪ್ಪುವುದಿಲ್ಲ. ನಮ್ಮೊಳಗೇ ಕಾಂಪಿಟೇಶನ್ ಮಾಡಿದರೆ ಸಂಘಟನೆ ಮಾಡುವದು ಕಷ್ಟ ಎಂದರು.
ಸಂಘ ಬಲವರ್ಧನೆ ಆಗಬೇಕು. ಉಪ ಅರಣ್ಯಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಮಾತನಾಡಿ, ದೇಶದ ಅಭಿವೃದ್ದಿ ಆಗಬೇಕಾದರೆ ಯಾಂತ್ರೀಕರಣ ಆಗಬೇಕು. ಮಾನವ ಶಕ್ತಿ ಕಡಿಮೆ ಮಾಡುವ ಜೆಸಿಬಿಗಳ ಅಗತ್ಯತೆ ಇದೆ. ಅರಣ್ಯ ಇಲಾಖೆಯ ಕಾರ್ಯದಲ್ಲೂ ಬಳಸಿಕೊಳ್ಳುತ್ತೇವೆ, ಅಭಿವೃದ್ದಿ ಹಾಗೂ ಪ್ರಕೃತಿ ವಿಕೋಪಕ್ಕೆ ಹಿಟಾಚಿ, ಜೆಸಿಬಿ ಬಳಸಿಕೊಳ್ಳುತ್ತೇವೆ, ಅರಣ್ಯ ಬೆಂಕಿ ತಡೆಗೆ ದಯವಿಟ್ಟು ಸಹಕಾರ ನೀಡಬೇಕು ಎಂದರು.
ಸಾಮಾಜಿಕ ಪ್ರಮುಖ ಎಸ್.ಕೆ. ಭಾಗವತ, ಜೆಸಿಬಿ ಎಂದರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಕುತೂಹಲ ಎಂದರು.
ಉದ್ಯಮಿ ಅಶ್ವಿನ್ ಭೀಮಣ್ಣ ನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ, ಜಿಲ್ಲಾ ಪತ್ರಿಕಾ ಮಂಡಳಿ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ತಾಲೂಕು ಸಂಘದ ಅಧ್ಯಕ್ಷ ಸಂದೇಶ ಭಟ್ಟ ಆರೆಪ್ಪೋ ಶಿವರಾಮ, ಸಾರಿಗೆ ಅಧಿಕಾರಿ ಶಿವಾನಂದ ಕುಲಕರ್ಣಿ, ಪ್ರವೀಣ್ ಇತರರು ಇದ್ದರು.