Advertisement
ಬೆಂಗಳೂರಿನ ಉದಯಭಾನು ಕಲಾ ಸಂಘದಲ್ಲಿ ಆ. 6ರ ಭಾನುವಾರ ಮಧ್ಯಾಹ್ನ 3 ರಿಂದ ನಡೆಯುವ ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
Related Articles
Advertisement
ನಿರಂತರ ಅಭ್ಯಾಸವನ್ನು ಮಾಡಿದ ಐನಬೈಲ್, ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಯಕ್ಷಗಾನ ವೃತ್ತಿ ತಿರುಗಾಟವನ್ನು ಆರಂಭಿಸಿದವರು. ಸೋಂದ ಮೇಳದಲ್ಲಿ ವೇಷಧಾರಿಗಳಾಗಿ ಕಾಣಿಸಿಕೊಂಡ ಅವರು, ಪುಂಡುವೇಶದ ಸಾಲಿನ ಅನೇಕ ವೇಷಗಳನ್ನು ಮಾಡಿ ಜನರಿಂದ ಮೆಚ್ಚುಗೆ ಗಳಿಸಿಕೊಂಡರು.
ವ್ಯವಸಾಯೀ ಮೇಳದಲ್ಲಿ ಹೆಚ್ಚು ಕಾಲ ವೃತ್ತಿಯನ್ನು ಮಾಡದೆ ಹವ್ಯಾಸಿಯಾಗಿ ಮುಂದುವರೆದರು. ವೇಷಧಾರಿಗಳಾಗಿದ್ದ ಐನಬೈಲ್ ಅವರು ಭಾಗವತರಾಗಿ ಹಾಗೂ ಯಕ್ಷಗುರುಗಳಾಗಿ ಬೆಳೆಯುವುದಕ್ಕೆ ಯಕ್ಷಋಷಿ ಎನಿಸಿಕೊಂಡ ಹೊಸ್ತೋಟ ಮಂಜುನಾಥ ಭಾಗವತರ ಪ್ರೇರಣೆ, ಮಾರ್ಗದರ್ಶನ ಸಿಕ್ಕಿತು.
ಅವರ ಗರಡಿಯಲ್ಲಿ ಯಕ್ಷಗಾನದ ಅನೇಕ ಸೂತ್ರಗಳನ್ನು ರಂಗತಂತ್ರಗಳನ್ನು, ಪ್ರಸಂಗವನ್ನು ನಿರ್ದೇಶನವನ್ನು ಕಲಿತರು. ಮುಂದೆ ಅವರು ಯಕ್ಷಗಾನದ ಶಿಕ್ಷಕರಾಗಿ ಗುರುವಿನಂತೆ ಸಾಧನೆಯನ್ನು ಮಾಡಿದರು. ಕೇವಲ ರಂಗದ ಬಗ್ಗೆ ಮಾತ್ರ ಆಸಕ್ತಿ ವಹಿಸಿದೆ ಯಕ್ಷ ಕವಿಗಳಾಗಿ ಹದಿನಾರಕ್ಕೂ ಹೆಚ್ಚು ಪ್ರಸಂಗಳನ್ನು ರಚಿಸಿರುವುದು ವಿಶೇಷವಾಗಿದೆ.
ಯಕ್ಷಗಾನ ವಿಸ್ತಾರಗೊಳ್ಳುವುದಕ್ಕೆ ಮಕ್ಕಳು, ಹವ್ಯಾಸಿಗಳು ಯಕ್ಷಗಾನಕ್ಕೆ ಬರುವುದು ತೀರಾ ಅಗತ್ಯವೆಂದು ನಂಬಿರುವ ಐನಬೈಲ್, ಆಸಕ್ತರಿಗೆ ತರಬೇತಿ ನೀಡುತ್ತ ಬಂದಿದ್ದಾರೆ.
ಶಾರದ ದೇವಿ ಅಂಧ ವಿಕಾಸ ಕೇಂದ್ರದ ಅಂಧ ಮಕ್ಕಳಿಗೆ ಯಕ್ಷಗಾನ ಕಲಿಸಿ ಅವರಿಂದ ಪ್ರದರ್ಶವನ್ನು ಮಾಡಿಸಿದ್ದು, ಅವರ ಮಹತ್ತರ ಸಾಧನೆಯಾಗಿದೆ. ಶಿವಮೊಗ್ಗದ ತರಂಗ ಶಾಲೆಯ ಕಿವುಡ, ಮೂಕ ಮಕ್ಕಳಿಗೂ ಕೂಡ ಯಕ್ಷಗಾನ ತರಬೇತಿ ನೀಡಿದ್ದಾರೆ. ಕೊಂಕಣಿ, ಸಂಸ್ಕೃತ ಭಾಷೆಗಳಲ್ಲೂ ಯಕ್ಷಗಾನ ಮಾಡಿಸಿದ್ದಾರೆ ಎಂದು ರವಿ ಮಡೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.