ಶಿರಸಿ: ರಾಜ್ಯ ಕೇಂದ್ರದಲ್ಲಿ ಒಂದೇ ಸರಕಾರ ಇದ್ದರೆ ರಾಷ್ಟ್ರ ಹಿತವೂ ಆಗಲಿದೆ ಎಂದು ಪಶ್ಚಿಮ ಬಂಗಾಲದ ರಾಜ್ಯ ಅಧ್ಯಕ್ಷ, ಸಂಸದ ಡಾ. ಸುಖಾಂ ಮುಜುಂಬದಾರ ಹೇಳಿದರು.
ಅವರು ಮಾರಿಗುಡಿಯಲ್ಲಿ ಕರಪತ್ರಕ್ಕೆ ಪೂಜೆ ಸಲ್ಲಿಸಿ, ಮನೆ ಮನೆ ಪ್ರಚಾರ ನಡೆಸಿ, ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಏಳನೇ ಬಾರಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲ್ಲುತ್ತಾರೆ. ಡಬಲ್ ಇಂಜಿನ್ ಸರಕಾರ ಇದ್ದರೆ ಲಾಭ ಏನು ಎಂಬುದರ ಬಗ್ಗೆ ನಾಲ್ಕು ವರ್ಷದಿಂದ ಪ್ರಾಮಾಣಿಕ ಅಭಿವೃದ್ದಿ ಆಗುತ್ತಿರುವುದೇ ಸಾಕ್ಷಿ. ಪಶ್ಚಿಮ ಬಂಗಾಲದ ಸಾವಿರಾರು ಜನರು ಉದ್ಯೋಗಕ್ಕೆ ಕರ್ನಾಟಕ್ಕೆ ಬರುತ್ತಾರೆ ಎಂದರು.
ಇಲ್ಲಿ ಆರ್ಥಿಕ ಅಭಿವೃದ್ದಿ ಆಗಿದೆ. ನಮ್ಮವರೂ ಇಲ್ಲಿ ಬಂದು ಕೆಲಸ ಮಾಡುತ್ತಾರೆ. ಬಿಜೆಪಿ ಅಭಿವೃದ್ದಿ ಕಾರಣವಾಗಿದೆ. ರಾಜ್ಯ, ಕೇಂದ್ರದ ಸಹಮತ ಇದ್ದರೆ ಎಷ್ಟು ಅಭಿವೃದ್ದಿ ಆಗುತ್ತದೆ ಎಂಬುದಕ್ಕೆ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದ ಅವರು ಪೆಟ್ರೋಲ್, ಡಿಸೈಲ್ ದರ ಏರಲು ಅಂತರಾಷ್ಟ್ರೀಯ ಏರಿಳಿತ ಕಾರಣ ಎಂದರು.
ಸ್ಪೀಕರ್, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಇಡೀ ರಾಜ್ಯದಲ್ಲಿ ಮಹಾ ಪ್ರಚಾರ ಅಭಿಯಾನ ನಡೆಯುತ್ತಿದೆ. ಮಂಗಳವಾರ, ಬುಧವಾರ ಈ ಅಭಿಯಾನದಲ್ಲಿ ರಾಜ್ಯ ರಾಷ್ಟ್ರ ನಾಯಕರು ಪ್ರಚಾರ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ಕರಪತ್ರ ದೇವಸ್ಥಾನದಲ್ಲಿ ಪೂಜಿಸಿ ಅಭಿಯಾನ ಆರಂಭಿಸಲಾಗಿದೆ ಎಂದರು.
ಈ ವೇಳೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಂದನ ಸಾಗರ, ಉಷಾ ಹೆಗಡೆ, ರಾಜೇಶ ಶೆಟ್ಟಿ, ಸುಬ್ರಾಯ ಹಲಸಿನಳ್ಳಿ ಇದ್ದರು.
ಮೋದಿ ನಮ್ಮ ನೇತಾರ ಎಂಬುದೇ ನಮ್ಮ ಭಾಗ್ಯಶಾಲಿ. ಜಗತ್ತಿನ ಲೀಡರ್ ಅವರು. ವಿಪಕ್ಷದಲ್ಲಿ ಯಾರ್ಯಾರು ಚೋರ್ ಇದ್ದಾರೆ ಎಂಬುದು ಇಡಿ, ಸಿಬಿಐಗೆ ಗೊತ್ತಿದೆ. –
ಸುಖಾಂ ಮುಂಜುಮದಾರ್, ಎಂಪಿ
ಸಿದ್ದರಾಮಯ್ಯ ಅವರು ಪ್ರಚಾರದ ಸಂದರ್ಭದಲ್ಲಿ ಲಿಂಗಾಯತ ಮುಖ್ಯಮಂತ್ರಿ ಕುರಿತು ಮಾತನಾಡಿರುವುದು ಅವರ ಮನಸ್ಥಿತಿ ತೋರಿಸುತ್ತದೆ. ಸಿದ್ದರಾಮಯ್ಯ ಅವರು ಒಡೆದು ಆಳುವ ಮನಸ್ಥಿತಿಯವರು. ಸ್ವಾರ್ಥ ಸಾಧಿಸಿಕೊಳ್ಳುವುದು ಕಾಂಗ್ರೆಸ್ ಮನಸ್ಥಿತಿ. –
ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್