ಶಿರಸಿ: ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ನಾಡಿನಲ್ಲೇ ಹೆಸರಾಗಿದ್ದು, ಪ್ರತೀ ಬದಲಿ ವರ್ಷಕ್ಕೆ ನಡೆಯುವ ದೇವಿಯ ಜಾತ್ರೆ ಈ ಬಾರಿ ಮಾ.3ರಿಂದ 11ರ ತನಕ ನಡೆಯಲಿದೆ.
ಜಾತ್ರಾ ಮುಹೂರ್ತ ನಿಗದಿ ಸಭೆ ರವಿವಾರ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯಿತು. ದೇವಿ ಎದುರು ದೀಪ ಬೆಳಗಿಸಿ, ದೇವಿಗೆ ರಾಯಸ ಅರ್ಪಿಸಿ ದಿನಾಂಕ, ಮುಹೂರ್ತ ಪ್ರಕಟಿಸಲಾಯಿತು.
ಜ. 22ರಂದು ಬೆಳಿಗ್ಗೆ 10:11ರ ನಂತರ ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆ. 11ರಂದು ರಾತ್ರಿ 9ರ ನಂತರ ಮೊದಲ ಹೊರಬೀಡು, 14ರಂದು ರಾತ್ರಿ 9ರ ಬಳಿಕ ಎರಡನೇ ಹೊರಬೀಡು, 18ರಂದು ರಾತ್ರಿ 9ರ ಬಳಿಕ ಮೂರನೇ ಹೊರಬೀಡು, ರಥದ ಬಗ್ಗೆ ಪೂಜಾರಿಯಿಂದ ವೃಕ್ಷಪೂಜೆ ಫೆ. 21ರ ಮಧ್ಯಾಹ್ನ 12:33, ನಾಲ್ಕನೇ ಹೊರಬೀಡು ಅದೇ ದಿನ ರಾತ್ರಿ 9ಕ್ಕೆ, ಶ್ರೀದೇವಿಯ ರಥದ ಮರ ತರುವುದು ಫೆ.25ರ ಬೆಳಿಗ್ಗೆ 9:33ರ ಬಳಿಕ, ಅದೇ ದಿನ ರಾತ್ರಿ ಅಂಕೆಯ ಹೊರಬೀಡು ರಾತ್ರಿ 9:45ರ ನಂತರ, ಅಂಕೆ ಹಾಕುವುದು, ಸ್ರಿàದೇವಿಯ ವಿಗ್ರಹ ವಿಸರ್ಜನೆ 26ರ ಬೆಳಗ್ಗೆ 11:58ರ ಬಳಿಕ ನಡೆಯಲಿದೆ.
ಮಾ. 3ರ ಮಧ್ಯಾಹ್ನ 12:43ಕ್ಕೆ ರಥದ ಮೇಲೆ ಕಲಶ ಪ್ರತಿಷ್ಠೆ, ಕಲ್ಯಾಣ ಮಹೋತ್ಸವ ರಾತ್ರಿ 11:11ರ ಬಳಿಕ, ದೇವಿಯ ರಥೋತ್ಸವ ಮಾ. 4ರ ಬೆಳಗ್ಗೆ 8:19 ಹಾಗೂ ಶೋಭಾಯಾತ್ರೆ ಹಾಗೂ ಬಿಡಕಿಬಯಲಿನ ಅಮ್ಮನ ಗದ್ದುಗೆಯಲ್ಲಿ ಪ್ರತಿಷ್ಠೆ ಮಧ್ಯಾಹ್ನ 12:43ರ ಒಳಗೆ ನಡೆಯಲಿದೆ.
ಸೇವೆ ಸ್ವೀಕಾರ ಮಾ. 5ರ ಬೆಳಗ್ಗೆ 5ರಿಂದ ನಡೆಯಲಿದ್ದು, ಸೇವೆ ಸ್ವೀಕಾರ ಮಾ. 11ರ ಬೆಳಗ್ಗೆ 10:30ರ ತನಕ ಹಾಗೂ ಆ ಬಳಿಕ ಜಾತ್ರೆ ಮುಕ್ತಾಯ ವಿಧಿ ವಿಧಾನಗಳು ನಡೆಯಲಿದೆ. ಯುಗಾದಿ ಮಾ. 25ರಂದು ನಡೆಯಲಿದ್ದು, ಅಂದು ಬೆಳಗ್ಗೆ 9:18ಕ್ಕೆ ದೇವಿ ಪುನಃ ಪ್ರತಿಷ್ಠಾಪನೆ ಆಗಲಿದೆ ಎಂದು ಸಭೆಗೆ ಮಾಹಿತಿ ತಿಳಿಸಲಾಯಿತು.
ಬಳಿಕ ನಡೆದ ಸಂಕ್ಷಿಪ್ತ ಸಭೆಯಲ್ಲಿ ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಧಾರ್ಮಿಕ ಹಾಗೂ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ ಇಂದು ಮುಹೂರ್ತ ಕಾರ್ಯಕ್ರಮ
ನಡೆಸಲಾಗಿದೆ. ಮುಂದಿನ ಶನಿವಾರ ಮತ್ತೂಂದು ಸಾರ್ವಜನಿಕ ಸಭೆ ನಡೆಸಲಾಗುತ್ತದೆ. ಪೇಜಾವರ ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿ ಮೂರು ದಿನ ಶೋಕ ಇರುವುದರಿಂದ ಇನ್ನೊಂದು ದಿನ ಅ ಧಿಕಾರಿಗಳ, ಜನಪ್ರತಿನಿಧಿಗಳ ಸಭೆ ನಡೆಸಲಾಗುತ್ತದೆ ಎಂದರು.
ದೇವಸ್ಥಾನದ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಶಶಿಕಲಾ ಚಂದ್ರಾಪಟ್ಟಣ, ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ ಭಂಡೀಮನೆ, ಡಿಐಎಸ್‌ಪಿ ಗೋಪಾಲಕೃಷ್ಣ ನಾಯ್ಕ, ಬಾಬುದಾರ ಪ್ರಮುಖ ಜಗದೀಶ ಗೌಡ ಇದ್ದರು. ನರೇಂದ್ರ ಜಾಧವ ನಿರ್ವಹಿಸಿದರು.