ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಇಲ್ಲಿನ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ನಾಡು, ಹೊರನಾಡುಗಳಿಂದ 3 ಲಕ್ಷಕ್ಕೂ ಅ ಧಿಕ ಭಕ್ತಾದಿಗಳು ಶನಿವಾರ ಒಂದೇ ದಿನ ಪಾಲ್ಗೊಂಡು ದಾಖಲೆ ನಿರ್ಮಿಸಿದರು.
ಮುಂಜಾನೆಯಿಂದ ದಟ್ಟನೆ ಕಡಿಮೆ ಇತ್ತಾದರೂ ಸಂಜೆ ಆಗುತ್ತಿದ್ದಂತೆ ತಂಡೋಪತಂಡವಾಗಿ ಆಗಮಿಸಿದ ಭಕ್ತಾದಿಗಳು, ದೇವಿ ದರ್ಶನ ಪಡೆದು ಜಾತ್ರೆಯಲ್ಲಿಓಡಾ ಟ ನಡೆಸಿ, ಖರೀದಿ ಕೂಡ ಮಾಡಿದರು. ಒಂದೇ ಸಲ ಇಷ್ಟೊಂದು ವಾಹನ ಹಾಗೂ ಜನರು ಪಾಲ್ಗೊಂಡಿದ್ದರಿಂದ ಒತ್ತಡ ನಿರ್ಮಾಣವಾಯಿತು.
ನಗರದಲ್ಲಿ ಐದಾರು ಕಿಮೀ ದೂರದ ತನಕ ಟ್ರಾμಕ್ ಜ್ಯಾಂ ಕೂಡ ಆಗಿದ್ದು ಐದು ರಸ್ತೆಯಲ್ಲಿ ಸಂಚಾರ ನಿರ್ವಹಣೆ ಮಾಡುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತು. ಇದರು ನಡುವೆ ಒಂದು ಅಂಬುಲೆನ್ಸ ಕೂಡ ಸಿಕ್ಕಿಹಾಕಿಕೊಂಡಿತ್ತು.
ಬೆಂಗಳೂರು, ಕುಂದಾಪುರ, ಹುಬ್ಬಳ್ಳಿ ಧಾರವಾಡ ಭಾಗದಿಂದಲೂ ವಾಹನಗಳ ಮೂಲಕ ಭಕ್ತಾದಿಗಳು ಜಾತ್ರೆಗೆ ಬಂದಿದ್ದು ಒಂದೇ ಸಲ ದಟ್ಟನೆಗೆ ಕಾರಣವಾಗಿದೆ.ರವಿವಾರ ಕೂಡ ಶನಿವಾರದ ಭಕ್ತರ ಸಂಖ್ಯೆ ಮುರಿಯುವ ಸಾಧ್ಯತೆ ಇದೆ.