Advertisement
ಜನ ನಿಬಿಡ ಪ್ರದೇಶವಾಗಿ ಮಾರ್ಪಾಟು ಆಗುತ್ತಿರುವ ಹೊಸಪೇಟೆ ರಸ್ತೆಯಲ್ಲಿ ಎರಡೂ ಪಾರ್ಶ್ವದಲ್ಲಿ ವಾಹನ ನಿಲ್ಲಿಸಲು ಅನುಕೂಲ ಆಗುವಂತೆ ಕ್ರಮ ಕೈಗೊಳ್ಳಲು ಯೋಜಿಸಲಾಯಿತು. ಕೆಲವು ಕಡೆ ಬೈಕ್ ನಿಲ್ಲಿಸಲೂ ಸ್ಥಳ ಇಲ್ಲವಾಗಿದ್ದು, ಅಲ್ಲಿ ಗಟಾರದ ಮೇಲೆ ಕಲ್ಲು ಹಾಸು ಹಾಕಿಸಿ ಅನುಕೂಲ ಮಾಡಿಕೊಡಲೂ ತೀರ್ಮಾನ ಕೈಗೊಳ್ಳಲಾಯಿತು. ಡಾಮರು ರಸ್ತೆಯ ಇಕ್ಕೆಲದಲ್ಲಿ ಬಳಿಯಲಾದ ಬಿಳಿ ಪಟ್ಟಿಯ ಪಕ್ಕ ವಾಹನ ನಿಲ್ಲಿಸಬಹುದು. ಇದರ ಸಾಧಕ ಬಾಧಕ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇರುವ ಜಾಗದಲ್ಲಿ ಪಾರ್ಕಿಂಗ್ ಸಮಸ್ಯೆ ನಿಯಂತ್ರಿಸಬೇಕಾಗಿದೆ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು. ಭಗತ್ ಸಿಂಗ್ ರಸ್ತೆ ವನ್ ವೇ ಮಾಡಲಾಗುತ್ತದೆ. ಇದರಿಂದ ಆ ಮಾರ್ಗದ ಒತ್ತಡ ಕೂಡ ಕಡಿಮೆ ಮಾಡುವುದು ನಮ್ಮ ಆಶಯ. ಮರಾಠಿಕೊಪ್ಪದ ಕಡೆಯಿಂದ ದೇವಿಕೇರೆಗೆ ಬರಬಹುದು. ತೆರಳುವವರು ಹೊಸಪೇಟೆ ಮಾರ್ಗ ಬಳಸಬೇಕು ಎಂದು ಪೊಲೀಸ್ ಉಪಾಧೀಕ್ಷಕ ರವಿ ನಾಯ್ಕ ತಿಳಿಸಿದರು. ಮಧುವನ ಎದುರುಗಡೆ ಯಲ್ಲಾಪುರ ನಾಕಾ ಕಡೆ ತೆರಳುವಾಗ ಎಡಗಡೆ ಪಾರ್ಕಿಂಗ್ ಮಾಡಬಹುದು ಎಂದೂ ಡಿಎಸ್‌ಪಿ ತಿಳಿಸಿ, ಹೊಸಪೇಟೆ ರಸ್ತೆಯಲ್ಲಿ ಸಂಚಾರ ದಟ್ಟನೆ ನಿಯಂತ್ರಣಕ್ಕೆ ಸಿಬಂದಿ ಕೂಡ ನೇಮಕ ಮಾಡುವದಾಗಿ ಹೇಳಿದರು.
Advertisement
ಶಿರಸಿ : ಹೊಸಪೇಟೆ ರಸ್ತೆಯ ಪಾರ್ಕಿಂಗ್ ಸಮಸ್ಯೆ ನೀಗಿಸಲು ಅಧಿಕಾರಿಗಳ ಸಮೀಕ್ಷೆ
03:53 PM Jul 19, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.