Advertisement

ಶಿರಸಿ ಕ್ಷೇತ್ರ ; ಜಲ ಯೋಗಿ ಶ್ರೀನಿವಾಸ ಹೆಬ್ಬಾರ್ ಚುನಾವಣಾ ಕಣಕ್ಕೆ?

09:16 PM Mar 18, 2023 | Team Udayavani |

ಶಿರಸಿ: ಬರಲಿರುವ ವಿಧಾನಸಭಾ ಚುನಾವಣೆಗೆ ಪಕ್ಷಾತೀತವಾಗಿ ಗುರುತಾಗಿರುವ ಜಲ ಯೋಗಿ ಶ್ರೀನಿವಾಸ ಹೆಬ್ಬಾರ್ ಅವರು ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡಗಳು ಹೆಚ್ಚಾಗುತ್ತಿವೆ. ಸಮಾಜ ಸೇವೆ ಮೂಲಕ ಹೆಸರಾಗಿದ್ದ ಜೀವ ಜಲ ಕಾರ್ಯ ಪಡೆಯ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ಅವರು ವಿಧಾನಸಭಾ ಚುನಾವಣೆಯ ಕಣಕ್ಕೆ ಧುಮುಕುವ ಕುರಿತು ಬೆಂಗಳೂರು, ದೆಹಲಿ‌ ಮಟ್ಟದ ಒತ್ತಡಗಳೂ ಇವೆ ಎನ್ನಲಾಗಿದೆ.

Advertisement

ಹೆಬ್ಬಾರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಉಭಯ ಪಕ್ಷಗಳ ಪ್ರಮುಖರಿಂದಲೂ ಒತ್ತಡ ಬರುತ್ತಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಮುಖರು ಕೂಡ ಬಿಜೆಪಿಯಿಂದ ಸ್ಪರ್ಧಿಸುವಂತೆ ಒತ್ತಡ ಹೇಳುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರು ಕೂಡ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ತರುತ್ತಿದ್ದಾರೆ ಎಂಬುದು ಬಲ್ಲ ಮೂಲಗಳು ದೃಢೀಕರಿಸಿವೆ. ಈಗಾಗಲೇ ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕ, ವೆಂಕಟೇಶ ಹೆಗಡೆ ಹೊಸಬಾಳೆ ಹೆಸರು‌ ಮುಂಚೂಣೊಯಲ್ಲಿದ್ದು, ಈಗ ಹೆಬ್ಬಾರ್ ಅವರ ಹೆಸರು ಸೇರಿದೆ ಎಂದು‌ ಮೂಲ ದೃಢೀಕರಿಸಿದೆ.

ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ನಾಯಕರುಗಳ ಸಂಪರ್ಕ ಮತ್ತು ಒಡನಾಟ ಹೊಂದಿರುವ ಹೆಬ್ಬಾರ್ ಮಾಧ್ಯಮ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದಾರೆ. ಇದೀಗ ಅವರ‌ ಮೇಲೆ ಸಿರ್ಸಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗುವಷ್ಟು ಒತ್ತಡಗಳು ಬರುತ್ತಲಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶ್ರೀನಿವಾಸ್ ಹೆಬ್ಬಾರ್ ಅವರು ನೆಲಜಲದ ಜೊತೆಗೆ ಧಾರ್ಮಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದ್ದು ಪಕ್ಷಾತೀತವಾಗಿ ಇವರು ಸ್ಪರ್ಧಿಸಿದರೆ ಅನೇಕ ಬೆಂಬಲಗಳು ಸಿಗಬಹುದೆಂದು ನಿರೀಕ್ಷಿಸಲಾಗಿದೆ ಎಂಬ ವಿಶ್ಲೇಷಣೆ ನಡೆದಿದೆ.

ಕಾಂಗ್ರೆಸ್ ಕೂಡ ಕಾಗೇರಿ ಅವರಿಗೆ ಸ್ಪರ್ಧೆಯಾಗಿ ಗಟ್ಟಿ ವ್ಯಕ್ತಿಯನ್ನು ಹುಡುಕುತ್ತಿದ್ದು ಅದರಲ್ಲೂ ಬ್ರಾಹ್ಮಣ ಸಮಾಜದ ವ್ಯಕ್ತಿಯನ್ನು ಕಣಕ್ಕಿಳಿಸಿದರೆ ನಾಮಧಾರಿ ಮತ್ತು ಬ್ರಾಹ್ಮಣ ಮತ್ತು ಇತರ ಮತಗಳು ಕೇಂದ್ರೀಕರಿಸಿ ಪಕ್ಷದ ಗೆಲುವಿಗೆ ಕಾರಣವಾಗುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ ಎನ್ನಲಾಗಿದೆ. ಚುನಾವಣೆಗೆ ನಿಲ್ತಾರಾ? ನಿಂತರೆ ಕಮಲವಾ? ಕೈನಾ? ಅಥವಾ ಎರಡನ್ನೂ ಯಾವುದಕ್ಕೂ ತಿರಸ್ಕರಿಸುವರಾ? ಇವಕ್ಕೆಲ್ಲ ಕಾಲ ಉತ್ತರಿಸಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next