Advertisement

Theft Case ತರವಾಡು ಮನೆ, ಕ್ಷೇತ್ರದಿಂದ ಕಳವು: ಪ್ರಕರಣ ದಾಖಲು

12:01 AM Jul 23, 2024 | Team Udayavani |

ಕುಂಬಳೆ: ಕುಂಬಳೆ ಪೇಟೆಯಲ್ಲಿರುವ ಶಬರ ಶಂಕರ ಸೇವಾ ಸಮಿತಿಯ ಕುನ್ನಿಲ್‌ಪಾರ ತರವಾಡು ಕ್ಷೇತ್ರ ಹಾಗೂ ತರವಾಡು ಮನೆಯಿಂದ ಕಳವು ಮಾಡಲಾಗಿದೆ.

Advertisement

ತರವಾಡು ಮನೆಯಿಂದ ಒಂದೂವರೆ ಪವನಿನ ಚಿನ್ನದ ಹೂ, ಕತ್ತಿ ಮತ್ತು ತರವಾಡು ಕ್ಷೇತ್ರದಿಂದ ಶ್ರೀ ವಯನಾಟು ಕುಲವನ್‌ ದೈವದ ಬೆಳ್ಳಿಯ ಆಯುಧ, ವಿಷ್ಣುಮೂರ್ತಿ ದೈವದ 2 ಆಯುಧಗಳು, ತೊಂಡಚ್ಚಮ್ಮಾರ್‌ ದೈವದ ಆಯುಧ, ಹಿತ್ತಾಳಿಯ 3 ಪಾತ್ರೆಗಳು, 25 ಕಾಲು ದೀಪಗಳು, ಚೆಂಬು, ಕಾಣಿಕೆ ಹುಂಡಿ, ವೆಂಕಟ್ರಮಣ ದೇವರ ಮುಡಿಪು ಕಳವಾಗಿದೆ.

ಕಾಣಿಕೆ ಹುಂಡಿಯಲ್ಲಿ ಸುಮಾರು 1 ಸಾವಿರ ರೂ., ಮುಡಿಪುನಲ್ಲಿ ಸುಮಾರು 15 ಸಾವಿರ ರೂ.ಗಳಿತ್ತೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next