Advertisement

Sirsi; ತಾಯಿ ನಿಧನ ಮನಸ್ಸಿಗೆ ಹಚ್ಚಿಕೊಂಡು ನವವಿವಾಹಿತ ಆತ್ಮಹತ್ಯೆ

09:00 PM Jun 24, 2023 | Team Udayavani |

ಶಿರಸಿ: ಮದುವೆಯಾದ ಹತ್ತೇ ದಿನಕ್ಕೆ ತನ್ನ ತಾಯಿ ಮೃತಪಟ್ಟಿರುವದನ್ನು ಮನಸ್ಸಿಗೆ ಹಚ್ಚಿಕೊಂಡು ಯುವಕನೋರ್ವ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬನವಾಸಿ ಕುಪ್ಪಳ್ಳಿಯಲ್ಲಿ ಶನಿವಾರ ನಡೆದಿದೆ.

Advertisement

ಶಿರಸಿ ನಗರದ ಟಿ ಎಸ್ ಎಸ್ ನಲ್ಲಿ ಅಕೌಂಟಂಟ್ ಆಗಿ ಕೆಲಸ ಮಾಡುತ್ತಿದ್ದ ಕುಪ್ಪಳ್ಳಿಯ ಪ್ರವೀಣ ನಾಗ ನಾಯ್ಕ (29) ಎಂಬಾತ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ.

ಮದುವೆಯಾದ ಹತ್ತು ದಿನಗಳಲ್ಲಿ ತಾಯಿ ತೀರಿ ಹೋಗಿರುವುದನ್ನು ಮನಸ್ಸಿಗೆ ಹಚ್ಚಿಕೊಂಡು ಮನೆ ಹತ್ತಿರದ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ. ಚಂದ್ರಕಲಾ ಪತ್ತಾರ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next