ಬೆಂಗಳೂರು: ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಹೊರ ತಂದಿರುವ 11 ಬಗೆಯ ಸಿರಿ ಉತ್ಪನ್ನಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ನಟ ರಮೇಶ್ ಅರವಿಂದ್, ನಟಿ ತಾರಾ ಅನುರಾಧ, ಶಾಸಕ ಹರೀಶ್ ಪೂಂಜಾ ಬಿಡುಗಡೆ ಮಾಡಿದರು.
ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಸಿರಿಯ ನೂತನ ಉತ್ಪನ್ನಗಳಾದ ಮೆಣಸಿನ ಪುಡಿ, ಗರಂ ಮಸಾಲ, ರಸಂ ಪುಡಿ, ಸಾಂಬಾರು ಪುಡಿ, ಪುಳಿಯೋಗರೆ, ಬಿಸಿಬೆಳೆಬಾತ್ ಪುಡಿ, ಉಪ್ಮಾ ರೆಡಿ ಮಿಕ್ಸ್, ರವಾ ಇಡ್ಲಿ ಮಿಕ್ಸ್, ಬಾದಾಮ್ ಮಿಕ್ಸ್, ಪುಲಾವ್ ಮಸಾಲ ಬಿಡುಗಡೆ ಮಾಡಲಾಯಿತು.
ನಂತರ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಗಡಿ ಮತ್ತು ಗೃಹ ಕೈಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಮತ್ತು ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ಕಾರ್ಯ ಸಿರಿ ಮೂಲಕ ಆಗಲಿದೆ. ಸುಮಾರು 200 ಉತ್ಪನ್ನಗಳು ಸಿರಿ ಹೊಂದಿದೆ. ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಸುರಕ್ಷಿತ ಮಾರಾಟ ವ್ಯವಸ್ಥೆ ಇದರಿಂದ ಆಗಲಿದೆ. ಈ ಮೂಲಕ ಮಹಿಳೆಯರ ಮತ್ತು ಗ್ರಾಮಗಳ ಅಭ್ಯುದಯ ಅಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಮ್ಯಾಗ್ನೆಟ್ ಮ್ಯಾನ್ ಆಗಲು ಹುಚ್ಚು ಸಾಹಸ : ಈತನ ಹೊಟ್ಟೆಯಲ್ಲಿ ಸಿಕ್ಕಿದ್ದು ಏನು ಗೊತ್ತಾ ?
ನಟ ರಮೇಶ್ ಅರವಿಂದ್ ಮಾತನಾಡಿ, ಬ್ರ್ಯಾಂಡ್, ಬ್ರ್ಯಾಂಡ್ ಮೌಲ್ಯ ಹಾಗೂ ಬ್ರ್ಯಾಂಡ್ ಉದ್ದೇಶ ಅತಿ ಮುಖ್ಯವಾಗಿರುತ್ತದೆ. ಈ ಮೂರು ಅಂಶಗಳ ಆಧಾರದಲ್ಲೇ ಉತ್ಪನ್ನಕ್ಕೆ ಬೇಡಿಕೆ ಇರುತ್ತದೆ. ಸಿರಿ ಉತ್ಪನ್ನದಲ್ಲಿ ಈ ಮೂರು ಇದೆ ಎಂದು ಹೇಳಿದರು.
ಇದನ್ನೂ ಓದಿ: ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದ 500 ಖಾತೆಗಳನ್ನು ಅಮಾನತುಗೊಳಿಸಿದ ಟ್ವೀಟರ್
ಇದನ್ನೂ ಓದಿ: ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ; ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭ: ಡಿಸಿಎಂ