Advertisement

ಸಿರಿನಾಡ ವೆಲ್ಫೇರ್‌ ಅಸೋಸಿಯೇಶನ್‌:15ನೇ ವಾರ್ಷಿಕ ಮಹಾಸಭೆ

02:49 PM Sep 14, 2017 | |

ಮುಂಬಯಿ: ವಾರ್ಷಿಕ ಮಹಾಸಭೆಯ ದಿನ ಸಂಘದ ಸದಸ್ಯರೆಲ್ಲರೂ ಒಟ್ಟಾಗಿ ಸಂಘದ ಆಗು ಹೋಗುಗಳ ಬಗ್ಗೆ ಚರ್ಚಿಸಿ, ಅಗತ್ಯ ಪರಿಹಾರವನ್ನು ಕಂಡುಕೊಳ್ಳಲು ಅವಕಾಶ ಸಿಕ್ಕಿದಂತಾಗುತ್ತದೆ. ಮಹಾಸಭೆಗೆ ಆಗಮಿಸಿ ನಮಗೆ ಸಲಹೆ-ಸೂಚನೆಗಳನ್ನು ನೀಡಿದ ತಮಗೆ ವಂದನೆಗಳು. ಸಲಹೆಗಾರರ ಮಾರ್ಗದರ್ಶನ ಉಪ ವಿಭಾಗಗಳಾದ ಮಹಿಳಾ ವಿಭಾಗ, ಯುವ ವಿಭಾಗಗಳ ಸಹಭಾಗಿತ್ವದಿಂದಾಗಿ ಈ ಸಂಸ್ಥೆಯು ಮುನ್ನಡೆಯಲು ಸಹಕಾರಿಯಾಗಿದೆ. ಒಗ್ಗಟ್ಟು ಮತ್ತು ಒಮ್ಮತದಿಂದ ಕಾರ್ಯನಿರ್ವಹಿಸಿದರೆ, ಸಂಸ್ಥೆಯನ್ನು ಉನ್ನತಿಯನ್ನು ಕೊಂಡೊಯ್ಯಬಹುದು. ನಗರದಲ್ಲಿರುವ ವಿವಿಧ ಸಂಘ-ಸಂಸ್ಥೆಗಳ ನಿಕಟ ಸಂಪರ್ಕವನ್ನು ಇರಿಸಿಕೊಳ್ಳುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಂಘದಲ್ಲಿ ಶಿಸ್ತು, ಸಂಯಮ, ಒಗ್ಗಟ್ಟಿನ ಮಂತ್ರ ಜಪಿಸಿ ಸಂಘವನ್ನು ಮುನ್ನಡೆಸೋಣ ಎಂದು ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ಅಧ್ಯಕ್ಷ ಆರ್‌. ಕೆ. ಸುವರ್ಣ ಅವರು ನುಡಿದರು.

Advertisement

ಡೊಂಬಿವಲಿ ಪಶ್ಚಿಮದ ಕ್ಷಿತಿಜಾ ಶಾಲಾ ಸಭಾಂಗಣದಲ್ಲಿ ಸೆ. 10 ರಂದು ನಡೆದ ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ಇದರ 15 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಜೆ. ಶೆಟ್ಟಿ ಮಾತನಾಡಿ, ಮಹಿಳಾ ವಿಭಾಗವು ಸಂಘವು ಬೆನ್ನೆಲುಬಾಗಿ ನಿಂತು, ಎಲ್ಲಾ ಕಾರ್ಯಕಲಾಪಗಳಲ್ಲಿ ಸಹಕಾರ ನೀಡಲು ಸಿದ್ಧವಿದೆ ಎಂದು ನುಡಿದರು.

ಯುವ ವಿಭಾಗದ ಕಾರ್ಯಾಧ್ಯಕ್ಷ ವಿನೋದ್‌ ಕರ್ಕೇರ ಮಾತನಾಡಿ, ಯುವ ವಿಭಾಗವು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಸಂಘದ ಕಾರ್ಯಕಲಾಪಗಳಲ್ಲಿ ಸಹಕರಿಸುತ್ತಿದೆ. ಡೊಂಬಿವಲಿ ಕರ್ನಾಟಕ ಸಂಘದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ವೃದ್ಧಾಶ್ರಮಕ್ಕೆ ಪ್ರಧಾನ ಸಮಿತಿಯ ಸಹಯೋಗದೊಂದಿಗೆ ಭೇಟಿಯಿತ್ತು ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸಿ ಅಳಿಲ ಸೇವೆಗೈದಿದ್ದೇವೆ. ಪ್ರಧಾನ ಸಮಿತಿಯ ಮಾರ್ಗದರ್ಶನದಿಂದ ಯಾವುದೇ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲು ಶ್ರಮಿಸುತ್ತೇವೆ ಎಂದು ಹೇಳಿದರು.

ವಸಂತ ಸುವರ್ಣ, ದಾಮೋದರ ಸುವರ್ಣ, ಅಜೆಕಾರು ಜಯ ಶೆಟ್ಟಿ , ಸುಕುಮಾರ್‌ ಶೆಟ್ಟಿ, ವಿಠಲ್‌ ಅಮೀನ್‌ ಅವರು ಮಾತನಾಡಿದರು. ಸಂಘದ ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ ಸ್ವಾಗತಿಸಿದರು. ಇತ್ತೀಚೆಗೆ ದೈವಾದೀನರಾದ ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯೆ ವಿನೋದಾ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯದರ್ಶಿ ದಾಮೋದರ ಸುವರ್ಣ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸದಾಶಿವ ಸಾಲ್ಯಾನ್‌ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.

Advertisement

ದಿನೇಶ್‌ ಸುವರ್ಣ ಮತ್ತು ದಯಾನಂದ ಸುವರ್ಣ, ಸಚಿನ್‌ ಸುವರ್ಣ, ಜಯರಾಮ್‌ ಕುಕ್ಯಾನ್‌ ಅವರು ವರದಿ ಮತ್ತು ಲೆಕ್ಕಪತ್ರವನ್ನು ಅಂಗೀಕರಿಸಿದರು. ವೇದಿಕೆಯಲ್ಲಿ ಆರ್‌. ಕೆ. ಸುವರ್ಣ, ಅಜೆಕಾರು ಜಯ ಶೆಟ್ಟಿ, ಸದಾಶಿವ ಸಾಲ್ಯಾನ್‌, ದಾಮೋದರ ಸುವರ್ಣ, ರವೀಂದ್ರ ಶೆಟ್ಟಿ, ವಿಠಲ ಅಮೀನ್‌, ಇಂದ್ರಾಳಿ ದಿವಾಕರ ಶೆಟ್ಟಿ, ಐಕಳ ಗಣೇಶ್‌ ಶೆಟ್ಟಿ, ರಮೇಶ್‌ ಕುಕ್ಯಾನ್‌, ರಾಜೀವ್‌ ಭಂಡಾರಿ, ಉದಯಾ ಜೆ. ಶೆಟ್ಟಿ,  ಶೋಭಾ ಟಿ. ಶೆಟ್ಟಿ, ದೇವಕಿ ಬಂಗೇರ, ವಿನೋದಾ ಕರ್ಕೇರ ಅವರು ಉಪಸ್ಥಿತರಿದ್ದರು. ವಿಠಲ ಅಮೀನ್‌ ಕಾರ್ಯಕ್ರಮ ನಿರ್ವಹಿಸಿದರು. ಅಜೆಕಾರು ಜಯ ಶೆಟ್ಟಿ ವಂದಿಸಿದರು.

ವಿವಿಧತೆಯಲ್ಲಿ ಏಕತೆ ಎಂಬಂತೆ ಐಕ್ಯತಾ ಭಾವನೆಯನ್ನು ಸಾರುವ ಈ ಸಂಸ್ಥೆಯು ಇನ್ನಷ್ಟು ಪ್ರಗತಿಪರ ಕಾರ್ಯಗಳತ್ತ ಗಮನ ಹರಿಸಬೇಕು. ಸಮಸ್ಯೆಗಳು ಬಂದಾಗ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಉತ್ತಮ ನಿರ್ಣಯಗಳನ್ನು ಕೈಗೊಳ್ಳಬೇಕು. ಸಂಸ್ಥೆಯ ಉಪ ವಿಭಾಗಗಳ ಕಾರ್ಯ ವೈಖರಿ ಅಭಿನಂದನೀಯ. ಕನ್ನಡ ಕಲಿಕಾ ತರಗತಿಯು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಅಧ್ಯಕ್ಷ ಮಾತಿನ ಮೌಲ್ಯವನ್ನು ಅರಿತು ಮುನ್ನಡೆಯಿರಿ 
– ಇಂದ್ರಾಳಿ ದಿವಾಕರ ಶೆಟ್ಟಿ (ಸಲಹೆಗಾರರು : ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ).

ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಭದ್ರ ಬುನಾದಿಯಾಗಿ ನೆಲೆ ಕಂಡಿದೆ. ಶೈಕ್ಷಣಿಕ ಕಾರ್ಯಕ್ರಮದಿಂದ ವಂಚಿತರಾದ ಮಕ್ಕಳಿಗಾಗಿ ಸಹಕಾರ ನೀಡಿದಂತೆ ಕನ್ನಡ ಅಕ್ಷರ  ಜ್ಞಾನವನ್ನು ಕಲಿಸಿ ಕನ್ನಡಾಭಿಮಾನಕ್ಕೆ ಸಹಯೋಗ ನೀಡುವುದು ಪ್ರಶಂಸನೀಯ. ವೃದ್ಧಾಶ್ರಮಕ್ಕೆ ಭೇಟಿ ನೀಡಿದಂತೆ ಇನ್ನಷ್ಟು ಕಾರ್ಯಸೂಚಿಯನ್ನು ತಯಾರಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು
 – ರಮೇಶ್‌ ಕುಕ್ಯಾನ್‌ (ಸಲಹೆಗಾರರು : ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ).

Advertisement

Udayavani is now on Telegram. Click here to join our channel and stay updated with the latest news.

Next