Advertisement

Desi Swara: ಸಿರಿಗನ್ನಡ ಕೂಟ ಮ್ಯೂನಿಕ್‌: ಸ್ತ್ರೀ ಶಕ್ತಿಯ ಸ್ಫೂರ್ತಿ ಬೆಳಗಿಸಿದ ಕಾರ್ಯಕ್ರಮ

12:03 PM Mar 30, 2024 | Team Udayavani |

ಮ್ಯೂನಿಕ್‌: ಇಲ್ಲಿನ ಸಿರಿಗನ್ನಡ ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

Advertisement

ಚುಟುಕು ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿಬಂತು. ಚುಟುಕ ಸ್ಪರ್ಧೆಗೆ 13 ನಮೂನೆಗಳು ಜರ್ಮನಿಯಾದ್ಯಂತ ದೊರೆಕಿದ್ದು ಕನ್ನಡ ಬರವಣಿಗೆಯ ಹಾದಿಯ ಗುರಿಗೆ ಬಹು ದೊಡ್ಡ ಜಯ ಹಾಗೂ ಅತೀ ಸಂತಸದ ವಿಚಾರ. ಅದರಲ್ಲೂ 7 ವರ್ಷದ ಪುಟ್ಟ ಬಾಲಕ ಆದಿಶೇಷನ ಚುಟುಕ ಎಲ್ಲರ ಮನ ಸೆಳೆಯಿತು. ಜತೆಗೆ 120ಕ್ಕೂ ಹೆಚ್ಚಿನ ಮಹಿಳೆಯರು ಮ್ಯೂನಿಕ್‌ ಹಾಗೂ ಸುತ್ತುಮುತ್ತಲಿನ ಪ್ರದೇಶಗಳಿಂದ InspireInclusion ಹಾಗೂ Floral Theme ಆಧಾರಿತ ಕಾರ್ಯಕ್ರಮಕ್ಕೆ ಅತೀ ಉತ್ಸಾಹ, ಹುಮ್ಮಸ್ಸಿನಲ್ಲಿ ಸೇರಿದ್ದರು.

ಆಕರ್ಷಕ ಫೋಟೋ ಬೂತ್‌ನ ಬಳಿ ರಂಗುರಂಗಿನ ಅಲಂಕಾರ ವಸ್ತುಗಳಿಂದ ಮಾಡಲ್ಪಟ್ಟ ಆಕರ್ಷಕ ಹೂಗಳನ್ನು ಇರಿಸಿ ಕೂಟದ ಅಲಂಕಾರ ತಂಡ ನಮ್ಮ ನಾರಿಯರಿಗೆ ಪರಿಪೂರ್ಣ ಸ್ವಾಗತ ನೀಡಿ, ತಮ್ಮ ಪುಷ್ಪಾಲಂಕೃತ ಉಡುಗೆ ತೊಡುಗೆ ಯ ಜತೆ ಭಾವಚಿತ್ರಗಳನ್ನು ಸ್ನೇಹಿತರೊಂದಿಗೆ, ಕೂಟದ ಇತರ ಸದಸ್ಯರೊಂದಿಗೆ ಸಡಗರದಿಂದ ತೆಗೆದು ಕಾರ್ಯಕ್ರಮಕ್ಕೆ ಕಾಮನಬಿಲ್ಲಿನ ಆರಂಭ ನೀಡಿತು. ಕೂಟದ ಪ್ರತೀ ಕಾರ್ಯಕ್ರಮಕ್ಕೆ ನವನವೀನ ಕಲ್ಪನೆಗಳನ್ನು ಹೊರತರುವ ರೇಷ್ಮಾ ಮೋಟುರ್‌ ಹಾಗೂ ತಂಡದವರ ಕೆಲಸ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮ ಸ್ತ್ರೀ ತನವನ್ನು ಆಚರಿಸುತ್ತಿದ್ದರಿಂದ, ಸದಸ್ಯರನ್ನು ಹೊರತುಪಡಿಸಿ ಕಾಶ್ಮೀರಿ, ತಮಿಳು, ತೆಲುಗು ಹಾಗೂ ಎಲ್ಲ ಪ್ರಾಂತದ ಮಹಿಳೆಯರಿಗೆ, ಇನ್ನಿತರ ಕೂಟದವರನ್ನು ಕಾರ್ಯಕ್ರಮದಲ್ಲಿ ಜತೆಯಾಗಿಸಿಕೊಂಡಿದ್ದು ವಿಶೇಷವಾಗಿತ್ತು.
ಆಡಳಿತ ಮಂಡಳಿಯ ದಿವ್ಯ ನಾರಾಯಣ್ಣಯ್ಯ ಅವರು ಕನ್ನಡ ಬಳಗದ ಕಾರ್ಯಕ್ರಮ, ಗುರಿಗಳ ಬಗ್ಗೆ ಪರಿಚಯ ನೀಡಿ, ಮಹಿಳಾ ದಿನಾಚರಣೆಗೆ ಚಾಲನೆ ನೀಡಿದರು. SKMSakkatNaariಸುತ್ತ ಆಧಾರಿತ ಕಾರ್ಯಕ್ರಮವನ್ನು ಸಂಪ್ರೀತ ಶಿರೂರ್‌ ಹಾಗೂ ಅನುಷಾ ರಾವ್‌ ಅವರು ನಿರೂಪಕರಾಗಿ ನೆಡೆಸಿಕೊಟ್ಟರು.

ಕ್ಯಾರಿಯೋಕೆ ಹಾಗೂ ಅದರ ಜತೆ ಎಲ್ಲರ ಸಮೂಹ್ಯ ನೃತ್ಯ, ಸೆಲೆಬ್ರಿಟಿಯನ್ನು ಊಹಿಸಿ, ಸಂವಹನ ಆಟ, ನಾರಿಯರ ನಡಿಗೆ ಹಾಗೂ ಇಂತಹ ಅನನ್ಯ ಕಾರ್ಯಕ್ರಮ ಅಲ್ಲಿ ನೆರೆದಿದ್ದವರನ್ನು ನಿರಂತರವಾಗಿ ರಂಜಿಸಿತು.
ಕಾರ್ಯಕ್ರಮದ ಮತ್ತೂಂದು ವಿಶೇಷ, ಸದಸ್ಯರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸದಸ್ಯರು ಸ್ವತಃ ತಯಾರಿಸಿದ ಕರಕುಶಲ ವಸ್ತುಗಳು, ಸೀರೆಗಳು, ತಿಂಡಿ-ತಿನಸುಗಳು, ಮುಂತಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದು ಬಹಳ ಯಶಸ್ವಿಯ ಪರಿಕಲ್ಪನೆ.

Advertisement

Restaurant Suhag Mnchen – ಸುಹಾಗ್‌ ಉಪಹಾರ ಗೃಹದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಗೆ ಬಗೆಯ, ರುಚಿಕರವಾದ ಆಹಾರಕ್ಕಂತೂ ಕೊರತೆಯೇ ಇರಲಿಲ್ಲ, ಎಲ್ಲರೂ ಸವಿದು ಮನಸ್ಸು ಹಾಗೂ ತಮ್ಮ ಹಸಿವನ್ನು ತಣಿದರು. ಉಪಾಧ್ಯಕ್ಷೆ ವೈಷ್ಣವಿ ಕುಲಕರ್ಣಿಯವರು ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡಿದವರಿಗೆ ತುಂಬು ಹೃದಯದ ವಂದನಾರ್ಪಣೆ ಸಲ್ಲಿಸಿದರು.

ಸಾರ್ವಜನಿಕ ಸಂಪರ್ಕ ಉಸ್ತುವಾರಿ ವಹಿಸಿರುವ ಚಂದನ ಮಾವಿನಕೆರೆ ಬಳಗದ ಆಧಾರ ಸ್ತಂಭವಾಗಿ ನಮ್ಮ ಬೆನ್ನ ಹಿಂದೆ ನಿಂತಿರುವ ಪ್ರಾಯೋಜಕರನ್ನ ವಂದಿಸಿದರು.

ಇಂತಹ ಕಾರ್ಯಕ್ರಮಕ್ಕೆ ತಮ್ಮ ಸಮಯ, ಶಕ್ತಿಯನ್ನು ಸದಾ ಮುಡಿಪಾಗಿಟ್ಟಿರುವ ಎಲ್ಲ ಕಾರ್ಯಕರ್ತರು, ಕಾರ್ಯಕಾರಿ ಸಮಿತಿ, ಸ್ವಯಂ ಸೇವಕರು, ಆಡಳಿತ ಮಂಡಳಿಯ ಸದಸ್ಯರನ್ನ ಕೂಟ ತುಂಬು ಹೃದಯದಿಂದ ಶ್ಲಾಘಿಸುತ್ತದೆ. ಕೂಟದ ಚಟುವಟಿಕೆಗಳನ್ನು https://www.facebook.com/sirigannadakootamunich, ,https://www.instagram.com/sirigannadakootamunichಜನಲ್ಲಿ ಅನುಸರಿಸಬಹುದು.

ವರದಿ: ಗಿರೀಶ್‌ ರಾವಂದೂರ್‌

 

Advertisement

Udayavani is now on Telegram. Click here to join our channel and stay updated with the latest news.

Next