Advertisement

ಸಿರಿ ಧಾನ್ಯದಿಂದ “ಸಿರಿ’ಬಂತು

02:23 PM Jan 15, 2018 | |

ಸಿರಿಧಾನ್ಯಕ್ಕೂ ಆರೋಗ್ಯಕ್ಕೂ ಸಂಬಂಧ ಇದೆ. ಹೀಗಾಗಿಯೇ ಇತ್ತೀಚೆಗೆ ಸಿರಿಧಾನ್ಯದ ಮಹತ್ವ ಹೆಚ್ಚಾಗಿದೆ ಎಂಬ ಸತ್ಯವನ್ನು ಅರಿತವರು ಬೈಲಹೊಂಗಲ ತಾಲೂಕಿನ ಸಂಗೋಳ್ಳಿ ಗ್ರಾಮದ ರಾಜಶೇಖರಯ್ಯ ಪತ್ರಯ್ಯ ವಕ್ಕುಂದಮಠರು. ಪ್ರಗತಿಪರ ಕೃಷಿಕರಾದ ಇವರು, ಹಲವು ಕೃಷಿಮೇಳಗಳಿಗೆ ಭೇಟಿ ನೀಡಿ ಅಲ್ಲಿಯ ನೂತನ ತಂತ್ರಜಾnನಗಳನ್ನು ಹಾಗೂ ವಿವಿಧ ಬೆಳೆ ಪದ್ಧತಿಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ. ದೊಡ್ಡ ಹಿಡುವಳಿದಾರರಾದ ಇವರು ಕಬ್ಬು , ಚನ್ನಂಗಿ, ಸೋಯಾ, ಹತ್ತಿಯನ್ನು ಪ್ರಮುಖವಾಗಿ ಬೆಳೆಯುತ್ತಾರೆ.ಎರಡು ವರ್ಷಗಳಿಂದ  2 ಎಕರೆಯಲ್ಲಿ ಹಲವು ವಿಧಧ ಸಿರಿಧಾನ್ಯಗಳನ್ನು ಬೆಳೆಯತ್ತಿದ್ದಾರೆ.

Advertisement

ಹೊಲವನ್ನು ಕೊಟ್ಟಿಗೆಗೊಬ್ಬರ ಹಾಕಿ ಹದ ಮಾಡಿಕೊಂಡು ಬಿತ್ತನೆ ಮಾಡುತ್ತಾರೆ. ಮಳೆ ಕಡಿಮೆಯಾದರೂ ಉತ್ತಮ ಇಳುವರಿ ಬರುತ್ತದೆ. ಕರಿಸಾವೆ, ಮಲ್ಲಿಗೆ ಸಾವೆ, ಬರಗು, ಉದಲು,ನವಣೆಯಲ್ಲಿ ಹಾಲನವಣೆ, ಕ್ರಮವಾಗಿ ಅಕ್ಕಡಿಯಂತೆ ಬಿತ್ತುತ್ತಾರೆ. ಬಿತ್ತಿದ 3 ರಿಂದ 4 ತಿಂಗಳ ಅವಧಿಯಲ್ಲಿ ಕೊಯ್ಲಿಗೆ ಬರುವ ಸಿರಿಧಾನ್ಯಗಳನ್ನು ಕಣಗಳಲ್ಲಿ ಹಾಕಿ ರಾಶಿ ಮಾಡುತ್ತಾರೆ.  ಬಹಳ ಸೂಕ್ಷ್ಮವಾಗಿರುವ ಕಾಳುಗಳಿಗೆ ಮಣ್ಣು ಸೇರದಂತೆ ಸಂಸ್ಕರಣೆ ಮಾಡುತ್ತಾರೆ.

ಸಿರಿಧಾನ್ಯ ಅಡುಗೆ ವೈವಿಧ್ಯ
  ಇವರದ್ದು ಅವಿಭಕ್ತ ಕುಟುಂಬ. ಬೆಳೆದ ಸಿರಿಧಾನ್ಯಗಳಿಂದ ನಾನಾ ರೀತಿಯ ಅಡುಗೆಗಳನ್ನು ಮಾಡುತ್ತಾರೆ.  ಸಿರಿಧಾನ್ಯಗಳ ಹುಲ್ಲನ್ನು ವರ್ಷವಿಡೀದನಗಳಿಗೆ ಕೊಡುತ್ತಾರೆ.ಸಿರಿಧಾನ್ಯದ ಬೆಳೆಯಿಂದ ಸಿಗುವ ಮೇವು ರೋಗ ನಿರೋಧಕ ಗುಣ ಹೊಂದಿರುವುದರಿಂದ ನಮ್ಮ ಮನೆಯ ಜಾನುವಾರುಗಳಿಗೆ ಯಾವುದೇ ಕಾಯಿಲೆ ಬರುತ್ತದೆಂಬ ಭಯವಿಲ್ಲ ಎನ್ನುತ್ತಾರೆ ರಾಜಶೇಖರಯ್ಯ.  

ತಮ್ಮ ಕುಟುಂಬಕ್ಕೆ ಬೇಕಾದಷ್ಟು ಇಟ್ಟುಕೊಂಡು, ಉಳಿದವುಗಳನ್ನು ಸುತ್ತಮುತ್ತಲಿನ ರೈತರಿಗೆ ಬೀಜಗಳನ್ನು ಮಾರಾಟ ಮಾಡುತ್ತಾರೆ. ತಮ್ಮಿಂದ ಬೀಜ ಇವರ ಬಳಿ ಬಂದು ತಗೆದುಕೊಂಡು ಹೋಗುವ ರೈತರ ಹೆಸರನ್ನು ತಮ್ಮ ಪುಸ್ತಕದಲ್ಲಿ ನಮೂದಿಸಿಕೊಳ್ಳುತ್ತಾರೆ.
ಮಾಹಿತಿಗೆ-  9844800842 ( ಸಂಜೆ 7 ರಿಂದ 9)

ಚಿತ್ರ ಲೇಖನ ವಿನೋದ ರಾ ಪಾಟೀಲ

Advertisement
Advertisement

Udayavani is now on Telegram. Click here to join our channel and stay updated with the latest news.

Next