Advertisement
ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣ ಕೇಂದ್ರವು ರಾಜ್ಯದಲ್ಲಿ ಸಂಭವಿಸುವ ಸಿಡಿಲಿನ ಮಾಹಿತಿ ಯನ್ನು ಜನರಿಗೆ ನೀಡುವ ಮೂಲಕ ಸಾವು-ನೋವುಗಳನ್ನು ತಡೆಯಲು ಮುಂದಾಗಿದೆ. ಅದರಂತೆ ಬೆಳಗಾವಿ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳ ಆಯ್ದ 105 ಗ್ರಾಮ ಪಂಚಾ ಯತ್‌ಗಳಲ್ಲಿ ಈ ವರ್ಷದಿಂದ ಸಿಡಿಲು ಮತ್ತು ಗುಡುಗು ಸಂಬಂಧಿಸಿದ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆಗಳನ್ನು ನೀಡಲಾಗುತ್ತಿದೆ.
ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಿಂಚು ಸಂಚಾರವಾಗುತ್ತದೆ. ಆದರೆ ಅಲ್ಲಿ ಹೆಚ್ಚಿನ ಮರ ಗಿಡಗಳು ಇರುವುದರಿಂದ ಮನುಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುವುದಿಲ್ಲ. ಆದರೆ, ಉತ್ತರ ಕರ್ನಾಟಕ ಜಿಲ್ಲೆ ಗಳಲ್ಲಿ ಬಯಲು ಪ್ರದೇಶವೇ ಹೆಚ್ಚಿನ ಪ್ರಮಾಣದಲ್ಲಿದ್ದು, ಗ್ರಾಮೀಣ ಭಾಗದ ಜನರಿಗೆ ಜಾಗೃತಿ ಇಲ್ಲ ದಿರುವ ಪರಿಣಾಮ, ಸಾವುಗಳು ಸಂಭವಿಸುತ್ತಿವೆ. ಸೈರನ್ ವ್ಯವಸ್ಥೆಯಿಂದ ಸಹಾಯವಾಗಲಿದೆ ಎಂದು ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.
Related Articles
ರಾಜ್ಯದಲ್ಲಿ 2011-2021ರ ಅವಧಿಯಲ್ಲಿ ಸಿಡಿಲಿನಿಂದ 812 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ವಿಜಯಪುರ, ಬಾಗಲಕೋಟೆ, ರಾಯಚೂರು, ಗದಗ ಜಿಲ್ಲೆಗಳಲ್ಲಿಯೇ ಹೆಚ್ಚಿನ ಜನರು ಮೃತಪಟ್ಟಿದ್ದಾರೆ. 2022ರಲ್ಲಿ 49, 2021ರಲ್ಲಿ 108, 2020ರಲ್ಲಿ 79, 2019ರಲ್ಲಿ 101, 2018ರಲ್ಲಿ 117, 2017ರಲ್ಲಿ 108 ಜನರು ಮೃತಪಟ್ಟಿದ್ದಾರೆ.
Advertisement
ಸೈರನ್ ಮೊಳಗಿದಾಗ ಏನು ಮಾಡಬೇಕು?– ಕೂಡಲೇ ಮನೆಗಳಿಗೆ ತೆರಳಿ
-ಕಾಂಕ್ರೀಟ್ ನೆಲದಲ್ಲಿ ನಿಂತು ಕೊಳ್ಳದಿರಿ, ಕಾಂಕ್ರೀಟ್ ಗೋಡೆಗೆ ಒರಗಬೇಡಿ
– ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣ ಗಳನ್ನು ಬಳಸದಿರಿ
– ತೆರೆದ ಪ್ರದೇಶಗಳಲ್ಲಿ, ಬೆಟ್ಟದ ಮೇಲೆ ಅಥವಾ ಮರಗಳ ಕೆಳಗೆ ನಿಲ್ಲದಿರಿ
– ಕಿಟಕಿ, ಬಾಗಿಲ ಬಳಿ ನಿಲ್ಲದಿರಿ. ರಾಜ್ಯದಲ್ಲಿ ಸಿಡಿಲಿನಿಂದ ರೈತಾಪಿ ವರ್ಗ ಮೃತಪಡುವುದನ್ನು ತಡೆಗಟ್ಟಲು ಆಯ್ದ ಗ್ರಾ.ಪಂ.ಗಳಲ್ಲಿ ಸಿಡಿಲು ಅಲರ್ಟ್ ನೀಡಲಾಗುತ್ತಿದೆ. ಈ ಮೂಲಕ ಸಾಧ್ಯವಾದ ಮಟ್ಟಿಗೆ ಜನರನ್ನು ಜಾಗೃತಿಗೊಳಿಸುವ ಉದ್ದೇಶ ಹೊಂದಲಾಗಿದೆ.
–ಮನೋಜ್ ರಾಜನ್, ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತ – ಎನ್.ಎಲ್.ಶಿವಮಾದು