Advertisement

ರೈತರ ಅನಾಥ ಸ್ಥಿತಿ ದೂರವಾಗಬೇಕು: ಹೆಬ್ಬಾರ್

03:38 PM Sep 05, 2021 | Team Udayavani |

ಶಿರಸಿ: ಕೃಷಿಕ, ಕಾರ್ಮಿಕ ಸಂಪನ್ನ ಆಗಬೇಕು. ರೈತರ ಅನಾಥ ಸ್ಥಿತಿ ದೂರವಾಗಬೇಕು. ಅದಕ್ಕಾಗಿ‌ ಸರಕಾರಗಳು ಪ್ರಯತ್ನ ‌ಮಾಡುತ್ತಿದೆ ಎಂದು‌ ಕಾರ್ಮಿಕ‌‌ ಸಚಿವ ಶಿವರಾಮ‌ ಹೆಬ್ಬಾರ್ ಹೇಳಿದರು.

Advertisement

ಅವರು ರವಿವಾರ ತಾಲೂಕಿನ ಬಿಸಲಕೊಪ್ಪದಲ್ಲಿ ಬಿಜೆಪಿ ಉತ್ತರ ಕನ್ನಡ ಹಾಗೂ ಗ್ರಾಮೀಣ ಮತ್ತು ನಗರ ಮಂಡಳಿ ಹಮ್ಮಿಕೊಂಡ ನೂತನ ಕೃಷಿ ಕಾಯ್ದೆ ಸತ್ಯ‌-ಮಿಥ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಂಡಗೋಡ ಬನವಾಸಿ ಭಾಗದಲ್ಲಿ ಒಂದುವರೆ ಸಾವಿರ ಜನರು ಬೇರೆ ಭಾಗಕ್ಕೆ‌ ಕೆಲಸಕ್ಕೆ ‌ಹೋಗಬೇಕು. ಎಂಟತ್ತು‌ ಎಕರೆ‌ ಕೃಷಿ ಭೂಮಿ ಇದ್ದರೂ ಅನಾಥ ಭಾವದಿಂದ‌ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿದ್ದಾರೆ. ಕೃಷಿಕರು‌ ನೆಮ್ಮದಿಯಾಗಬೇಕು ಎಂದರು.

ಇದನ್ನೂ ಓದಿ:ನಮ್ಮ ಸರಕಾರ ಮಾತ್ರವಲ್ಲ, ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಸಿಲಿಂಡರ್ ಬೆಲೆ ಏರಿಕೆಯಾಗಿದೆ :ಕಟೀಲ್

ಅನ್ನ ಕೊಡುವ ಅನ್ನದಾತ, ದೇಶ ಕಾಯುವ ಸೈನಿಕ ಇಬ್ಬರನ್ನು ಎಂದಿಗೂ‌ ಮರೆಯಲು ಸಾಧ್ಯವಿಲ್ಲ.  ರೈತ ಐದು ವರ್ಷ ಪ್ರತಿಭಟನೆ‌ ಮಾಡಿದರೆ ಯಾರು‌ ಏನು ತಿನ್ನುತ್ತಾರೆ ಎಂದು‌ ಕೇಳಿದರು.

Advertisement

ಕೃಷಿ‌ ಕ್ಷೇತ್ರ ಅಸಂಘಟಿತ ವಲಯ ಇದು. ಇದು ಸಂಘಟಿತ ಆಗುವುದಿಲ್ಲ. ಈ‌ ಕಾರಣದಿಂದ ಅನೇಕ ಕಾಲದಿಂದ ನಿರಂತರ ಏಟಾಗಿದೆ. ಹೊಸ ಕೃಷಿ ನೀತಿ ಬಂದಿದೆ. ಉತ್ಪಾದಕರಿಗೆ‌ ಬೆಲೆ‌ ನಿರ್ಣಯ ಅಧಿಕಾರವಿಲ್ಲ. ವ್ಯಾಪಾರಿಗೆ ಹೋದ ಬಳಿಕ ಬೆಲೆ ನಿಗದಿ ಮಾಡುವ ಕಾರ್ಯ ಮಾಡುವಂತೆ ಆಗಬೇಕು ಎಂದರು.

ಬೇಡ್ತಿ ನದಿ‌ ನೀರನ್ನು,  ವರದಾ ನದಿ ನೀರನ್ನು ಕೆರೆ ತುಂಬಿಸುವ ಕಾರ್ಯ ಮಾಡಲಾಗಿದೆ. ಇನ್ನೂ‌ ಎರಡು ಯೋಜನೆಯ ಕನಸಿದೆ. ಅದು ಅನುಷ್ಠಾನ ಆದರೆ ಯಲ್ಲಾಪುರ ಕ್ಷೇತ್ರದ ಬಹುತೇಕ ಪ್ರದೇಶಕ್ಕೆ  ಕೆರೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ರೈತ ಮೋರ್ಚಾದ ಪ್ರಸನ್ನ ಕೆರೆಕೈ, ಎಪ್ಪತ್ತು ವರ್ಷಗಳ ಬಳಿಕ‌ ಕೃಷಿಗೆ ಬದಲಾವಣೆ ತರಬೇಕು ಎಂಬ ಕಾರಣಕ್ಕೆ ನೂತನ ಕೃಷಿ ಕಾಯ್ದೆ ಭಾರತ ಸರಕಾರ ತಂದಿದೆ. ಕ್ರಾಂತಿ ತರುವ ಕಾಯಿದೆ ಇದು. ದಾರಿ ತಪ್ಪಿಸುವವರು ಸಂಸತ್ತಿಗೆ ಬಂದು 15 ನಿಮಿಷ ಮಾತನಾಡಬೇಕು ಎಂದು ಸವಾಲು ಹಾಕಿದರು.

ರಸ್ತೆ ಸಾರಿಗೆ‌ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾ ಕಾರ್ಯದರ್ಶಿ ಚಂದ್ರು ಎಸಳೆ, ಉಷಾ ಹೆಗಡೆ, ಪ್ರಶಾಂತ ಗೌಡಗ್ರಾಮೀಣ‌ ಮಂಡಳಿ ಅಧ್ಯಕ್ಷ ನರಸಿಂಹ ಬಕ್ಕಳ, ನಾಗರಾಜ ನಾಯ್ಕ ಜಿಲ್ಲಾಧ್ಯಕ್ಷ ಮಹೇಶ ಹೊಸಕೊಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next