ಶಿರಸಿ: ಬಹುವಾರ್ಷಿಕ ಬೆಳೆಗಳಾದ ತೆಂಗು, ಅಡಿಕೆ, ಮಾವು, ಗೇರುಗಳಿಗೆ ಪ್ರತಿ ವರ್ಷ ಬೆಳೆ ನೊಂದಣಿ ಅನಗತ್ಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಅವರು ಶಿರಸಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅಲ್ಪಾವಧಿ ಬೆಳೆಗಳ ನೊಂದಣಿ ಅಗತ್ಯ. ಅದರ ಹೊರತು ಬಹುವಾರ್ಷಿಕ ಬೆಳೆಗಳನ್ನು ಐದು ವರ್ಷಗಳಿಗೆ ನೊಂದಣಿ ಮಾಡಿದರೆ ಸಾಕು ಎಂದ ಅವರು, ತಂತ್ರಾಂಶ ವಿಭಾಗದವರಲ್ಲೂ ತಿಳಿಸಲಾಗಿದ್ದು, ವಾರದಲ್ಲಿ ಆದೇಶ ಆಗಲಿದೆ ಎಂದರು.
ವನ್ಯಜೀವಿಗಳಿಂದ ಕೃಷಿ ಬೆಳೆಗಳಿಗೆ ಹಾನಿ ಆಗುತ್ತಿದೆ. ಕಾಡು ಪ್ರಾಣಿಗಳ ಹಾವಳಿಗೆ ಪರಿಹಾರ ಹಾಗೂ ಅವು ಬಾರದಂತೆ ಕ್ರಮ ಕೈಗೊಳ್ಳಲು ನೋಡುತ್ತೇನೆ ಎಂದು ಸೂಚಿಸಿದರು.
ಇದನ್ನೂ ಓದಿ:ಜೆಡಿಸ್ ಹಿರಿಯ ಮುಖಂಡ ತಮ್ಮಣ್ಣೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ
ಸಿದ್ದರಾಮಯ್ಯ ಅವರು ನಮ್ಮನ್ನು ಹೊಗಳಲು ಆಗದು. ವಿರೋಧ ಪಕ್ಷದ ಕೆಲಸವೇ ಅದು. ಕೋವಿಡ್ ಸಮಯದಲ್ಲೂ ಬಿಜೆಪಿಯನ್ನು ಜನರು ಕೈ ಹಿಡಿದಿದ್ದಾರೆ. ಕೃಷಿ ಇಲಾಖೆಯಲ್ಲಿ ಬಾಕಿ ಉಳಿದ ಕೆಲಸ ಮಾಡುತ್ತೇವೆ. ಯಂತ್ರೋಪಕರಣಗಳ ಸಹಾಯಧನ ಕಡಿಮೆ ಮಾಡುವುದಿಲ್ಲ. ತುಂತುರು ನೀರಾವರಿಗೂ ಶೇ.90 ಸಹಾಯಧನ ಬರಲಿದೆ ಎಂದರು.