Advertisement

ಬೇಡ್ತಿ-ವರದಾ ನದಿ ಜೋಡಣೆ ಪ್ರಸ್ತಾವ

09:24 PM Mar 11, 2021 | Team Udayavani |

ಶಿರಸಿ: ಬೇಡ್ತಿ ವರದಾ ನದಿ ನೀರಿನ ಜೋಡಣೆಯ ವಿಷಯದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪೀಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಜಿಲ್ಲಾ ಬಿಜೆಪಿ ಘಟಕ ಬದ್ಧವಾಗಿರಲಿದೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಸಹ ವಕ್ತಾರ ಸದಾನಂದ ಭಟ್ಟ ನಡಗೋಡ ಸ್ಪಷ್ಟಪಡಿಸಿದರು.

Advertisement

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರಕಾರದ ಬಜೆಟ್‌ ಮೇಲಿನ ವಿಶ್ಲೇಷಣೆ ವೇಳೆ ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಿದರು. ಬೇಡ್ತಿ ವರದಾ ನದಿ ಜೋಡಣೆ ವಿಷಯ ಕಳೆದೆರಡು ದಶಕದಿಂದ ಆಗೀಗ ಕೇಳಿ ಬರುತ್ತಿದೆ. ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಕಾರ್ಯಕರ್ತನಾಗಿಯೂ ನಾನೂ ಕಾರ್ಯ ಮಾಡಿದ್ದೇನೆ. ಈ ಸಾಧ್ಯತಾ ವರದಿ ಸಿದ್ಧಗೊಳಿಸುವ ಕುರಿತೂ ಅಸಮಾಧಾನ ವ್ಯಕ್ತವಾಗಿದೆ. ಈ ವಿಷಯದಲ್ಲಿ ಹಸಿರು ಶ್ರೀಗಳು ತೆಗೆದುಕೊಳ್ಳುವ ನಿಲುವಿಗೆ ಬದ್ಧ ಇದ್ದೇವೆ ಎಂದೂ ಹೇಳಿದರು.

ಶಿರಸಿಗೆ, ಸಿದ್ದಾಪುರಕ್ಕೆ ಲಿಂಗನಮಕ್ಕಿ ಅಣೆಕಟ್ಟಿನಿಂದ ಕುಡಿಯುವ ನೀರು ತರುವ ಪ್ರಸ್ತಾವ ಸರಕಾರದ ಮುಂದಿದೆ. ಪಶ್ಚಿಮ ವಾಹಿನಿಗಳಿಗೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರಕಾರ 500 ಕೋ.ರೂ. ತೆಗೆದರಿಸಿದೆ. ಕಾಲು ಸಂಕಗಳಿಗೂ ಅನುದಾನ ಎತ್ತಿಡಲಾಗಿದೆ. ಶಿರಸಿಗೆ ಪ್ರಾದೇಶಿಕ ವಿಜ್ಞಾನ ಕೇಂದ್ರ ಕೂಡ ಬರಲಿದೆ. ರಾಜ್ಯ ಬಜೆಟ್‌ನಲ್ಲಿ ಉತ್ತರ ಕನ್ನಡಕ್ಕೆ ಸಿಂಹಪಾಲು ಎಂದು ಮಾಧ್ಯಮಗಳೇ ಬರೆದಿವೆ. ಕೋವಿಡ್‌ 19ರ ಸಂಕಷ್ಟದಲ್ಲೂ ಆರ್ಥಿಕ ಹೊರೆಯನ್ನು ಜನರ ಮೇಲೆ ಹಾಕದೆ ಸಿದ್ಧಗೊಳಿಸಲಾದ ಬಜೆಟ್‌ ಇದಾಗಿದೆ ಎಂದು ಬಣ್ಣಿಸಿದರು.

ಪ್ರತಿಪಕ್ಷಗಳ ಸದನದಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಅವಕಾಶ ನೀಡಿದರೆ ಪೂರಕ ಕೆಲವು ಸಂಗತಿಗಳನ್ನೂ ಸೇರಿಸಿಕೊಳ್ಳಲು ಸಾಧ್ಯವಿದೆ ಎಂದ ಅವರು, ಉತ್ತರ ಕನ್ನಡಕ್ಕೆ ಪ್ರತ್ಯೇಕ ಹಾಲಿನ ಒಕ್ಕೂಟ, ಜಿಲ್ಲೆಯ ಬೇಡಿಕೆ ಕೂಡ ಜನರಿಂದ ಇತ್ತು. ಅಭಿವೃದ್ಧಿ ನಿರಂತರ ಆಗಿದೆ. ಆರೋಗ್ಯ, ಶಿಕ್ಷಣ, ಕೃಷಿ, ಗ್ರಾಮೀಣಾಭಿವೃದ್ಧಿ, ಜಲ ಸಂಪನ್ಮೂಲಕ್ಕೆ ಅಧಿ ಕ ಆದ್ಯತೆ ಕೊಟ್ಟ ಬಜೆಟ್‌ ಇದಾಗಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಬಜೆಟ್‌ ಇದು ಎಂದೂ ನಡಗೋಡ ಪ್ರತಿಪಾದಿಸಿದರು.

ಉತ್ತರ ಕನ್ನಡದ ಕರಾವಳಿಯಲ್ಲಿ ಉಪ್ಪು ನೀರು ನುಗ್ಗುವ ಅಪಾಯ ತಡೆಗಟ್ಟಲು 300 ಕೋಟಿ ರೂ. ಮೊತ್ತದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಮಲೆನಾಡು ಕರಾವಳಿಗೆ 100 ಕೋಟಿ ರೂ. ಕಾಲ ಸಂಕಕ್ಕೆ ಇಡಲಾಗಿದೆ. ಅಂಕೋಲಾದಲ್ಲಿ ಸಿವಿಲ್‌ ಎನ್‌ ಕ್ಲೇವ್‌ ಸ್ಥಾಪಿಸಲಾಗುತ್ತಿದೆ. ತದಡಿಯಲ್ಲಿ ಸಾವಿರ ಎಕರೆಗಳ ಪರಿಸರ ಪ್ರವಾಸೋದ್ಯಮ ಉದ್ಯಾನ ಸಿದ್ಧ ಮಾಡಲಾಗುತ್ತದೆ. ಅಡಕೆಗೆ ಕಾಡುವ ಹಳದಿ ಎಲೆ ಕುರಿತೂ ಸಂಶೋಧನೆ ಮಾಡಲು ನಿಧಿ  ಎತ್ತಿಡಲಾಗಿದೆ. ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಗಣಕೀಕರಣಕ್ಕೆ ನೆರವಾಗಲೂ 198 ಕೋ.ರೂ. ನೆರವು ಇಡಲಾಗಿದೆ. ಜಿಲ್ಲೆಗೆ ಪ್ರತ್ಯೇಕ ಗೋ ಶಾಲೆ ಕೂಡ ಬರಲಿದೆ ಎಂದೂ ಹೇಳಿದರು.

Advertisement

ಯಲ್ಲಾಪುರದ ವಿಜಯ ಮಿರಾಶಿ ಪ್ರಕರಣದ ಕುರಿತು ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಅದು ನಮ್ಮ ಹಂತದ್ದಲ್ಲ ಎಂದ ನಡಗೋಡ, ಪರೇಶ ಮೇಸ್ತಾ ಪ್ರಕರಣಕ್ಕೆ ಸಂಬಂಧಿ ಸಿ ಶಿರಸಿಯ ಪ್ರತಿಭಟನೆಯಲ್ಲಿ ಪ್ರಕರಣ ಎದುರಿಸುತ್ತಿರುವ ಕೆಲವರ ವಿರುದ್ಧ ತಾಂತ್ರಿಕ ಕಾರಣದಿಂದ ಪ್ರಕರಣ ವಾಪಸ್‌ ಪಡೆಯಲು ಆಗಿಲ್ಲ. ಆ ಬಗ್ಗೆ ಪ್ರಯತ್ನ ನಡೆಸಿದ್ದೇವೆ ಎಂದೂ ಹೇಳಿದರು. ಮಾಧ್ಯಮ ಸಂಚಾಲಕ ಡಾನಿ ಡಿಸೋಜಾ, ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಗ್ರಾಮೀಣ ಘಟಕದ ಅಧ್ಯಕ್ಷ ನರಸಿಂಹ ಹೆಗಡೆ ಬಕ್ಕಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next