Advertisement

Mumbai To Bengaluru: ವಿಮಾನದ ಶೌಚಾಲಯದಲ್ಲಿ 2 ತಾಸು ಸಿಲುಕಿ ಫಜೀತಿಗೀಡಾದ ಪ್ರಯಾಣಿಕ!

05:38 PM Jan 17, 2024 | Team Udayavani |

ಮುಂಬೈ: ಸ್ಪೈಸ್‌ ಜೆಟ್‌ ವಿಮಾನದಲ್ಲಿ ಮುಂಬೈನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದೊಳಗೆ ಎರಡು ಗಂಟೆಯೊಳಗೆ ಸಿಲುಕಿಕೊಂಡಿದ್ದ ಘಟನೆ ಮಂಗಳವಾರ(ಜನವರಿ 15) ನಡೆದಿತ್ತು.

Advertisement

ಇದನ್ನೂ ಓದಿ:ಲೋ.ಸ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದರೆ ಸಿದ್ದರಾಮಯ್ಯ 5 ವರ್ಷ ಅಡೆತಡೆ ಇಲ್ಲದೇ ಸಿಎಂ

ಪ್ರಯಾಣಿಕ ಟಾಯ್ಲೆಟ್‌ ನಲ್ಲಿ ಸಿಲುಕಿಕೊಂಡಿರುವುದು ಸಿಬಂದಿ ಗಮನಕ್ಕೆ ಬಂದಿತ್ತು. ಈ ವೇಳೆಯಲ್ಲಿ ಬಾಗಿಲು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿತ್ತು. ಆದರೂ ಪ್ರಯಾಣಿಕರನ್ನು ರಕ್ಷಿಸಲು ಹಲವು ಬಾರಿ ಪ್ರಯತ್ನಿಸಿದ್ದರೂ ಅದು ವಿಫಲವಾಗಿತ್ತು ಎಂದು ವರದಿ ವಿವರಿಸಿದೆ.

ಒಳಗಡೆ ಸಿಲುಕಿಕೊಂಡಿದ್ದ ಪ್ರಯಾಣಿಕ ಕೂಡಾ ಬಾಗಿಲು ತೆಗೆಯಲು ಪ್ರಯತ್ನಿಸಿ ಫಜೀತಿಪಡುವಂತಾಗಿತ್ತು. “ಸರ್‌ ನಾವು ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದೇವೆ. ಆದರೆ ಬಾಗಿಲು ತೆರೆಯುತ್ತಿಲ್ಲ. ನೀವು ಗಾಬರಿಯಾಗಬೇಡಿ. ನಾವು ಕೆಲವೇ ನಿಮಿಷಗಳಲ್ಲಿ ಲ್ಯಾಂಡ್‌ ಆಗುತ್ತೇವೆ. ಹಾಗಾಗಿ ದಯವಿಟ್ಟು ಕಮೋಡ್‌ ಕವರ್(ಲಿಡ್)‌ ಮುಚ್ಚಿ, ಅದರ ಮೇಲೆ ಕುಳಿತುಕೊಳ್ಳಿ. ಕೆಲವೇ ಸಮಯದಲ್ಲಿ ಮುಖ್ಯ ಬಾಗಿಲು ಓಪನ್‌ ಆಗಲಿದೆ. ಆಗ ಇಂಜಿನಿಯರ್‌ ಬಂದು ನಿಮ್ಮನ್ನು ರಕ್ಷಿಸಲಿದ್ದಾರೆ” ಎಂದು ಚಿಕ್ಕ ಪೇಪರ್‌ ನಲ್ಲಿ ಬರೆದು ಅದನ್ನು ಟಾಯ್ಲೆಟ್‌ ಬಾಗಿಲಿನ ಸಂದಿಯಲ್ಲಿ ತೂರಿಸಿ, ಪ್ರಯಾಣಿಕನಿಗೆ ಧೈರ್ಯ ತುಂಬಿದ್ದು, ಈ ನೋಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್‌ ಆದ ನಂತರ ಇಂಜಿನಿಯರ್‌ ಅವರು ಟಾಯ್ಲೆಟ್‌ ಬಾಗಿಲನ್ನು ತೆರೆದು, ಪ್ರಯಾಣಿಕರನ್ನು ರಕ್ಷಿಸಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು.

Advertisement

ಘಟನೆಗೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿರುವ ಸ್ಪೈಸ್‌ ಜೆಟ್‌, ಪ್ರಯಾಣಿಕರಾದ ತೊಂದರೆಗಾಗಿ ಕ್ಷಮೆಯಾಚಿಸಿದ್ದು, ಅವರ ಟಿಕೆಟ್‌ ಹಣವನ್ನು ಪೂರ್ಣ ಪ್ರಮಾಣದಲ್ಲಿ ಮರಳಿಸುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next