Advertisement
ಅಂದಹಾಗೆ, ಅದಿತಿಯ ಮೂಲ ಹೆಸರು ಸುದೀಪನಾ. ಆದರೆ, ಚಿತ್ರತಂಡ ಮಾತ್ರ ಸುದೀಪನಾ ಬದಲು ಬೇರೆ ಹೆಸರಿಡಬೇಕು ಎಂದು ಆಲೋಚಿಸಿದಾಗ ಅವರಿಗೆ ಅದಿತಿ ಹೆಸರು ಚೆನ್ನಾಗಿದೆ ಹಾಗೂ ಎಲ್ಲರಿಗೂ ಬೇಗ ಅರ್ಥವಾಗುತ್ತದೆ ಎಂಬ ಕಾರಣಕ್ಕೆ ಅದಿತಿ ಎಂದು ನಾಮಕರಣ ಮಾಡಲಾಗಿದೆ. ಅದಿತಿ ದಾವಣಗೆರೆಯ ಹುಡುಗಿ. ಎಂಬಿಎ ಓದಿರುವ ಅದಿತಿ ಕಾಲೇಜು ದಿನಗಳಲ್ಲೇ ಆ್ಯಂಕರಿಂಗ್ ಮಾಡುತ್ತಾ “ಆ್ಯಕ್ಟೀವ್ ಹುಡುಗಿ’ ಎಂದು ಹೆಸರು ಪಡೆದವರು. ಹೀಗಿರುವಾಗ ಅವರಿಗೆ ಸಿಕ್ಕಿದ್ದು “ಗುಂಡ್ಯಾನಾ ಹೆಂಡ್ತಿ’ ಧಾರಾವಾಹಿ. ಆ ಧಾರಾವಾಹಿ ಕೂಡಾ ಅದಿತಿಗೆ ಒಳ್ಳೆಯ ಹೆಸರು ಕೊಟ್ಟಿತಂತೆ. “ಧೈರ್ಯಂ’ಗೆ ನಾಯಕಿಯ ಹುಡುಕಾಟದಲ್ಲಿದ್ದಾಗ ಚಿತ್ರತಂಡದ ಕಣ್ಣಿಗೆ ಬಿದ್ದ ಅದಿತಿ ಮೂರೂ¾ರು ರೌಂಡ್ ಅಡಿಷನ್ನಲ್ಲೂ ಪಾಸಾಗಿ ಈಗ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅದಿತಿ ಸಾಕಷ್ಟು ಕನಸುಗಳನ್ನಿಟ್ಟು ಕೊಂಡಿರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಮತ್ತಷ್ಟು ಒಳ್ಳೆಯ ಅವಕಾಶಗಳು ಸಿಗುವ ನಿರೀಕ್ಷೆ ಇದೆ. ಅದಿತಿಗೆ ಸಿನಿಮಾ ಬಿಟ್ಟರೆ ಓದುವ, ಹಾಡುವ ಹಾಗೂ ಕಥೆ, ಕವಿತೆ ಬರೆಯುವ ಹವ್ಯಾಸವೂ ಇದೆ ಯಂತೆ.
Advertisement
ಗುಂಡ್ಯಾನ ಹೆಂಡ್ತಿಯ ಸಿನಿಯಾನ…
03:45 AM Jan 20, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.