Advertisement
ತಾಲೂಕಿನ ದೊಡ್ಡೇರಿ ಹೋಬಳಿಯ ಬುಳ್ಳಸಂದ್ರದ ಸಿದ್ದಲಿಂಗಪ್ಪ ಪರಾರಿಯಾದ ಪತಿರಾಯ. ಈತ 2 ವರ್ಷದ ಹಿಂದೆಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಚನ್ನಪಟ್ಟಣದ ಸರಸ್ವತಿ ಎಂಬಾಕೆಯನ್ನು ಮದುವೆಯಾಗಿದ್ದ. ಬೆಂಗಳೂರಲ್ಲಿ ಕೆಲಸ ಮಾಡುವಾಗ ಫೇಸ್‌ಬುಕ್‌ನಲ್ಲಿ ಆಕೆಯನ್ನು ಪರಿಚಯ ಮಾಡಿಕೊಂಡು, ಪ್ರೀತಿಸಿ, ಆಕೆಗೆ ನಿಗದಿಯಾಗಿದ್ದ ಮದುವೆಯನ್ನು ರದ್ದು ಪಡಿಸಿ, ತಾನೇ ವಿವಾಹವಾಗಿದ್ದ. ಕೆಲ ಕಾಲ ಬೆಂಗಳೂರಿನ ಹೆಗ್ಗೆರೆಯಲ್ಲಿ ವಾಸವಿದ್ದ. ಪತ್ನಿ, ಸರಸ್ವತಿ ಗರ್ಭಿಣಿಯಾದಾಗ ಆಕೆಯನ್ನು ಮಧುಗಿರಿಗೆ ಕರೆ ತಂದು ಗರ್ಭಪಾತಕ್ಕೆ ಒತ್ತಾಯಿಸಿದ. ಇದಕ್ಕೆ ಆಕೆ ಆಕ್ಷೇಪ ವ್ಯಕ್ತಪಡಿಸಿ ಗಲಾಟೆ ಮಾಡಿದಳು.