Advertisement

ಹೆಂಡತಿ ಕಾಟ ತಾಳಲಾರದೆ ತಿಂಗಳಿಂದ ಮರದ ಮೇಲೇ ವಾಸ!

08:01 AM Aug 27, 2022 | Team Udayavani |

ಲಕ್ನೋ: ಹೆಂಡತಿಯ ಕಾಟ ತಾಳಲಾರದೆಯೇ ಪತಿಯು ಕಳೆದೊಂದು ತಿಂಗಳಿನಿಂದ ತಾಳೆ ಮರದ ಮೇಲೇ ಜೀವನ ನಡೆಸುತ್ತಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮವಾ ಜಿಲ್ಲೆಯಲ್ಲಿ ನಡೆದಿದೆ.

Advertisement

ರಾಮ್‌ ಪರ್ವೇಶ್‌(42) ಹೆಸರಿನ ವ್ಯಕ್ತಿ ಕಳೆದ ಆರು ತಿಂಗಳುಗಳಿಂದ ಪತ್ನಿಯೊಂದಿಗೆ ಜಗಳವಾಡುತ್ತಿದ್ದಾನಂತೆ. ಪತ್ನಿ ರಾಮ್‌ಗೆ ಥಳಿಸಿದ್ದಾಳಂತೆ ಕೂಡ. ಅದೇ ಕಾರಣಕ್ಕೆ ಬೇಸತ್ತಿರುವ ಆತ ಊರಿನ ತಾಳೆ ಮರ ಹತ್ತಿ ಕುಳಿತಿದ್ದಾನೆ. ಹಲವು ದಿನಗಳಿಂದ ಅಲ್ಲಿಯೇ ಜೀವನ ನಡೆಸುತ್ತಿದ್ದಾನೆ.

ಮನೆಯವರು ಪ್ರತಿದಿನ ಊಟವನ್ನು ಹಗ್ಗಕ್ಕೆ ಕಟ್ಟಿಕೊಡುತ್ತಿದ್ದು, ಅದನ್ನು ಮೇಲೆಳೆದುಕೊಂಡು ಆತ ಊಟ ಮಾಡುತ್ತಿದ್ದಾನೆ. ಆದರೆ ಮೇಲೆ ಕುಳಿತ ಆತ ಊರಲ್ಲಿ ಏನಾಗುತ್ತದೆ ಎನ್ನುವುದನ್ನು ನೋಡುತ್ತಾನೆ, ಇದರಿಂದ ನಮಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ರಾಮ್‌ ಮನವೊಲಿಸಲು ಪೊಲೀಸರೂ ಸೋತಿರುವುದಾಗಿ ವರದಿಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next