Advertisement

‘ರಾಘವೇಂದ್ರ ಸ್ಟೋರ್’: ಸಿಂಗಲ್ ಸುಂದರನಿಗೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ

01:58 PM Apr 13, 2023 | Team Udayavani |

ಜಗ್ಗೇಶ್‌ ನಾಯಕರಾಗಿರುವ “ರಾಘವೇಂದ್ರ ಸ್ಟೋರ್’ ಚಿತ್ರ ಏ.28ರಂದು ತೆರೆಕಾಣುತ್ತಿದೆ. ನಿಧಾನವಾಗಿ ಸಿನಿಮಾ ಪ್ರಚಾರಕ್ಕೆ ಇಳಿದಿರುವ ಚಿತ್ರತಂಡ, ಚಿತ್ರದ ಹಾಡು, ಪ್ರೋಮೋ ಬಿಡುಗಡೆ ಮಾಡುತ್ತಿದೆ. ಈಗ ಚಿತ್ರದ “ಸಿಂಗಲ್‌ ಸುಂದರ’ ಎಂಬ ಹಾಡು ಬಿಡುಗಡೆಯಾಗಿದೆ. ಬುಧವಾರ ಈ ಹಾಡು ಬಿಡುಗಡೆಯಾಗಿದ್ದು, ನಟ ರಕ್ಷಿತ್‌ ಶೆಟ್ಟಿ ಈ ಹಾಡನ್ನು ರಿಲೀಸ್‌ ಮಾಡಿದ್ದಾರೆ.

Advertisement

ಇನ್ನು “ರಾಘವೇಂದ್ರ ಸ್ಟೋರ್’ ಸಿನಿಮಾದಲ್ಲಿ ನಟ ಜಗ್ಗೇಶ್‌ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಕಥಾಹಂದರದ ಈ ಸಿನಿಮಾಕ್ಕೆ ನಿರ್ದೇಶಕ ಸಂತೋಷ್‌ ಆನಂದರಾಮ್‌ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಶ್ವೇತಾ ಶ್ರೀವಾಸ್ತವ್‌ “ರಾಘವೇಂದ್ರ ಸ್ಟೋರ್’ ಸಿನಿಮಾದಲ್ಲಿ ಜಗ್ಗೇಶ್‌ಗೆ ಜೋಡಿಯಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಗಂಡನಿಗೆ ಬೇರೆ ಯುವತಿಯರ ಜತೆ ಸೇರಿ ರೀಲ್ಸ್‌ ಮಾಡುವ ಹುಚ್ಚು: ಪತ್ನಿಗೆ ಮೈದುನನಿಂದ ಕಿರುಕುಳ

ಚಿತ್ರದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದು, ಶ್ರೀಶ ಕುದುವಳ್ಳಿ ಛಾಯಾಗ್ರಹಣವಿದೆ. ಈಗಾಗಲೇ “ರಾಘವೇಂದ್ರ ಸ್ಟೋರ್’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ “ರಾಘವೇಂದ್ರ ಸ್ಟೋರ್’ ತೆರೆಗೆ ಬರಬೇಕಿತ್ತು.

Advertisement

ಆದರೆ ಕೊನೆ ಕ್ಷಣದಲ್ಲಿ ರಿಲೀಸ್‌ ಡೇಟ್‌ ಮುಂದೂಡಿದ ಚಿತ್ರತಂಡ, ಅಂತಿಮವಾಗಿ ಇದೇ ಏ. 28ಕ್ಕೆ ಚಿತ್ರವನ್ನು ತೆರೆಗೆ ತರುವ ತಯಾರಿ ಮಾಡಿಕೊಂಡಿದೆ. ಹೊಂಬಾಳೆ ಫಿಲಂಸ್‌ ಈ ಚಿತ್ರವನ್ನು ನಿರ್ಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next