ಬೆಂಗಳೂರು: ವಿದ್ಯುತ್ ಗ್ರಾಹಕರಿಗೆ ಸೋಮವಾರ (ಎ. 1)ದಿಂದ ಹೊಸ ದರ ಅನ್ವಯ ಆಗಿದ್ದು, ಅದರಂತೆ ಎಲ್ಲ ಗೃಹ ಬಳಕೆದಾರರಿಗೆ ಇನ್ಮುಂದೆ ಒಂದೇ ಮಾದರಿಯ ದರ ಇರಲಿದೆ.
ಈ ಮೊದಲು ಗೃಹ ಬಳಕೆದಾರರಿಗೆ 0-100 ಯೂನಿಟ್ ಹಾಗೂ 101 ಯೂನಿಟ್‌ಗಿಂತ ಮೇಲ್ಪಟ್ಟು ಎಂದು ಎರಡು ಸ್ಲ್ಯಾಬ್ (ಹಂತಗಳು)ಗಳಿದ್ದವು. ಅದನ್ನು ತೆಗೆದುಹಾಕಿರುವ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಎಷ್ಟು ಬಳಕೆ ಮಾಡಿದರೂ ಒಂದೇ ದರ ಪ್ರತಿ ಯೂನಿಟ್‌ಗೆ 5.90 ರೂ. ನಿಗದಿಪಡಿಸಿದೆ. ಇದು ಸೋಮವಾರದಿಂದ ಅನ್ವಯ ಆಗಲಿದೆ.
ಇನ್ನು ಪರಿಷ್ಕೃತ ದರದಂತೆ ಮಾಸಿಕ 100 ಯೂನಿಟ್‌ಗಳಿಗಿಂತ ಹೆಚ್ಚು ಬಳಕೆ ಮಾಡುವ ರಾಜ್ಯದ ಗೃಹ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ 1.10 ರೂ. ಕಡಿಮೆ ಮಾಡಲಾಗಿದ್ದು ಇದರಿಂದ ತಿಂಗಳಿಗೆ 210 ಯೂನಿಟ್ ಬಳಕೆ ಮಾಡುವ ಗೃಹ ಬಳಕೆದಾರರಿಗೆ ಅನಾಯಾಸವಾಗಿ ಅಂದಾಜು 230 ರೂ. ಉಳಿತಾಯ ಆಗಲಿದೆ. ಆದರೆ 100 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುವವರಿಗೆ ಈ ಹಿಂದೆ ಪ್ರತಿ ಯೂನಿಟ್‌ಗೆ 4.75 ರೂ. ಇತ್ತು. ಆ ವರ್ಗಕ್ಕೆ ಇದು ತುಸು ಹೆಚ್ಚಳ ಅನಿಸುತ್ತದೆ.
ಈ ಮಧ್ಯೆ ಅಲ್ಪಪ್ರಮಾಣದ ಹೆಚ್ಚಳವನ್ನು ಎಲ್ಲ ಪ್ರವರ್ಗಗಳ ಗ್ರಾಹಕರಿಗೆ ದರ ಮರುಹೊಂದಾಣಿಕೆ ಮಾಡಲು ಉಪಯೋಗಿಸಲಾಗಿದೆ. ಉದಾಹರಣೆಗೆ ಈ ಹಿಂದೆ 1 ಕಿ.ವಾ. ಸಾಮರ್ಥ್ಯದ ಗೃಹ ಬಳಕೆದಾರರ ನಿಗದಿತ ಶುಲ್ಕ 110 ರೂ. ಇತ್ತು. ಈಗ ಅದನ್ನು 120 ರೂ.ಗಳಿಗೆ ಹೆಚ್ಚಿಸಲಾಗಿದೆ. ಆ ವರ್ಗಕ್ಕೆ ಎಪ್ರಿಲ್‌ನಿಂದ ಸ್ವಲ್ಪ ಹೊರೆ ಆಗಲಿದೆ.
ಕೈಗಾರಿಕೆಗಳಿಗೂ ತಗ್ಗಿದ ಹೊರೆ: ಇನ್ನು ಈ ದರ ಇಳಿಕೆ ಲಾಭವು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು (ಎಲ್‌ಟಿ- 5) ಹಾಗೂ ಬೃಹತ್ ಕೈಗಾರಿಕೆ (ಎಚ್‌ಟಿ) ಗ್ರಾಹಕರಿಗೂ ಸಿಗಲಿದೆ. ಎಚ್‌ಟಿ ವಾಣಿಜ್ಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 1.25 ರೂ. ಹಾಗೂ ಬೇಡಿಕೆ ಶುಲ್ಕವನ್ನು ಪ್ರತಿ ಕಿ.ವಾ.ಗೆ 10 ರೂ. ಇಳಿಕೆ ಮಾಡಲಾಗಿದೆ. ಎ