Advertisement

ಒಂದೇ ದೇಶ, ಒಂದೇ ಸಂಬಳ ಯಾಕಿಲ್ಲ? : ಬಜಾಲ್‌

03:50 AM Jul 09, 2017 | Team Udayavani |

ಮಹಾನಗರ: 3 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಬೋಗಸ್‌ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಜನರನ್ನು ಮರುಳುಗೊಳಿಸಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಐತಿಹಾಸಿಕ ತೀರ್ಪು ನೀಡಿದ್ದರೂ ಅದನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರಕಾರ ತೀರಾ ನಿರ್ಲಕ್ಷ್ಯ ವಹಿಸುತ್ತಿದೆ. ಮತ್ತೂಂದು ಕಡೆ ಜಿಎಸ್‌ಟಿಯನ್ನು ದೇಶಾದ್ಯಂತ ಜಾರಿಗೊಳಿಸಿ ಅಬ್ಬರದ ಪ್ರಚಾರ ನಡೆಸಿ ಒಂದೇ ದೇಶ ಒಂದೇ ತೆರಿಗೆ ಎಂಬ ಘೋಷಣೆಯಿಂದ ಜನರಿಗೆ ಮಂಕುಬೂದಿ ಎರಚುತ್ತಿದೆ.

Advertisement

ಹಾಗಿರುವಾಗ ಒಂದೇ ದೇಶ ಒಂದೇ ಸಂಬಳ ಮಾಡಲು ಯಾಕೆ ನರೇಂದ್ರ ಮೋದಿ ಸರಕಾರ ಮುಂದಾಗುತ್ತಿಲ್ಲ ಎಂದು ಸಿಪಿಐ (ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್‌ಕುಮಾರ್‌ ಬಜಾಲ್‌ ಪ್ರಶ್ನಿಸಿದರು.

ಅವರು ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಸಿಪಿಐ(ಎಂ) ಮಂಗಳೂರು- ಬೋಳೂರು ವಿಭಾಗ ಸಮಿತಿ ನೇತೃತ್ವದಲ್ಲಿ ಜರುಗಿದ ವಾಹನ ಪ್ರಚಾರ ಜಾಥಾವನ್ನು ಉರ್ವಸ್ಟೋರ್‌ ಜಂಕ್ಷನ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು. 
ಗುತ್ತಿಗೆ ಕಾರ್ಮಿಕರ ಶೋಷಣೆ ಹೆಚ್ಚಾಗು ತ್ತಿದೆ. ದೇಶದ ಕಾರ್ಮಿಕ ವರ್ಗವು ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅನೇಕ ಹೋರಾಟ ಗಳನ್ನು ನಡೆಸಿದರೂ ಸರಕಾರ ಮೌನ ವಹಿಸಿದೆ ಎಂದು ಅವರು ಆರೋಪಿಸಿದರು.

ಸಿಪಿಐ(ಎಂ) ಮಂಗಳೂರು ನಗರ ಸಮಿತಿ ಸದಸ್ಯ ಸಂತೋಷ್‌ ಶಕ್ತಿನಗರ ಮಾತನಾಡಿ, ಬೆಲೆ ಏರಿಕೆಯನ್ನು ತಡೆಗಟ್ಟುವುದಾಗಿ ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ನೀಡಿದ ಬಿಜೆಪಿ, 3 ವರ್ಷಗಳ ಅವಧಿಯಲ್ಲಿ ಈ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸಿಲ್ಲ. ಜಿಎಸ್‌ಟಿಯಿಂದಾಗಿ ಮತ್ತೆ ಜೀವನಾ ವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ ಎಂದು ಹೇಳಿದರು.
ಜಾಥಾವು ಕೊಟ್ಟಾರ ಚೌಕಿ, ಕೋಡಿಕಲ್‌, ಅಶೋಕನಗರ, ಶೇಡಿಗುರಿ, ಉರ್ವಮಾರ್ಕೆಟ್‌ ಸೇರಿದಂತೆ ಸುಮಾರು 18 ಕಡೆಗಳಲ್ಲಿ ಸಂಚರಿಸಿ ಬೋಳೂರಿನಲ್ಲಿ ಸಮಾರೋಪಗೊಂಡಿತು.

ಸಮಾರೋಪದಲ್ಲಿ ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಸದಸ್ಯ ಯೋಗೀಶ್‌ ಜಪ್ಪಿನಮೊಗರು ಮಾತ ನಾಡಿದರು. ಜಾಥಾದ ನೇತೃತ್ವವನ್ನು ಸಿಪಿಐ(ಎಂ) ಪಕ್ಷದ ಯುವ ನಾಯಕರಾದ ಪ್ರದೀಪ್‌, ಪ್ರಶಾಂತ್‌ ಎಂ.ಬಿ., ಗೌರವ್‌, ರಘುವೀರ್‌, ಹರಿಣಾಕ್ಷಿ, ಶ್ರುತಿ ಮೊದಲಾದವರು ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next